Saturday, 14th December 2024

ವಿಶ್ವವಾಣಿ ಕ್ಲಬ್‌’ಹೌಸ್‌: ಮೊದಲ ದಿನವೇ ಹೌಸ್‌’ಫುಲ್‌

ಕನ್ನಡ ಸಂಸ್ಕೃತಿ, ಭಾಷಾ ಹಿರಿಮೆ ಕುರಿತು ಮೊದಲ ದಿನ ಪ್ರೊ.ಕೃಷ್ಣೇಗೌಡರೊಂದಿಗೆ ಸಂವಾದ

ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯಲ್ಲೇ ಸೃಷ್ಟಿಸಿರುವ ಕ್ಲಬ್‌ಹೌಸ್‌ನ್ನು ಬಳಸಿಕೊಂಡು ಕನ್ನಡ ಪತಿಕ್ರೋದ್ಯಮದಲ್ಲಿಯೇ
ಮೊದಲ ಬಾರಿಗೆ ಗ್ರೂಪ್ ಆರಂಭಿಸಿದ್ದ ‘ವಿಶ್ವವಾಣಿ ಕ್ಲಬ್‌ಹೌಸ್ ಚರ್ಚೆಯಲ್ಲಿ’ ಮೊದಲ ದಿನ ಹಿರಿಯ ಸಾಹಿತಿ, ವಾಗ್ಮಿ ಪ್ರೊ.
ಕೃಷ್ಣೇಗೌಡ ಅವರೊಂದಿಗೆ ೫೦೦ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಕಳೆದ ಒಂದು ತಿಂಗಳಿನಿಂದ ಭಾರತದಲ್ಲಿ ಕ್ಲಬ್‌ಹೌಸ್ ಬಗ್ಗೆ ಭಾರಿ ಚರ್ಚೆಗಳು ಆರಂಭಗೊಂಡಿದ್ದವು. ಸಾರ್ವಜನಿಕರನ್ನು ಸಂಪರ್ಕಿಸಲು ಹಾಗೂ ಎಲ್ಲರ ಧ್ವನಿಗಳನ್ನು ಆಲಿಸುವುದಕ್ಕೆ ಉತ್ತಮ ವೇದಿಕೆಯಾಗಿರುವ ಕ್ಲಬ್ ಹೌಸ್ ಅನ್ನು ಬಳಸಿಕೊಂಡು ವಿಶ್ವವಾಣಿ ಪತ್ರಿಕೆ ನಿತ್ಯ, ಒಂದು ಗಂಟೆ ವಿವಿಧ ಕ್ಷೇತ್ರದ ಗಣ್ಯರು, ದಿನನಿತ್ಯದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವಿಚಾರ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.

ಮೊದಲ ದಿನ ಪ್ರೊ.ಕೃಷ್ಣೇಗೌಡರು, ಕನ್ನಡ ಸಂಸ್ಕೃತಿ, ಭಾಷಾ ಹಿರಿಮೆ, ಇಂದಿನ ಡಿಜಿಟಲ್ ಯುಗದ ಸಾಧಕ-ಬಾಧಕ, ಜಾನ
ಪದ ಸೊಗಡು, ಇಂದಿನ ವ್ಯವಸ್ಥೆ ಹಾಗೂ ಶಿಕ್ಷಣ ಪದ್ಧತಿಯ ಬಗ್ಗೆ ಮಾತನಾಡಿದರು. ಸಂವಾದವನ್ನು ವಿಶ್ವವಾಣಿ ಪ್ರಧಾನ
ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ವಿಶ್ವವಾಣಿ ಸಂಪಾದಕೀಯ ಸಲಹೆಗಾರರಾದ ನಂಜನಗೂಡು ಮೋಹನ್ ಅವರು
ನಿರ್ವಹಿಸಿದರು.

ಹಲವು ಪ್ರಮುಖರು ಭಾಗಿ: ಈ ಸಂವಾದದಲ್ಲಿ ದಿ ಹಿಂದೂ ಪತ್ರಿಕೆಯ ಗ್ರೂಪ್ ಎಡಿಟೋರಿಯಲ್ ಆಫೀಸರ್ ಕೃಷ್ಣಪ್ರಸಾದ್,
ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್, ಅಂಕಣಕಾರ ಷಡಕ್ಷರಿ, ವಿಶ್ವವಾಣಿ ಅಂಕಣಕಾರರಾದ ಕಿರಣ್ ಉಪಾಧ್ಯಾಯ, ಶಿಶಿರ್ ಹೆಗಡೆ, ಡಾ.ಶ್ರೀಕಾಂತ್ ಭಟ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಏನಿದು ಕ್ಲಬ್‌ಹೌಸ್?
ಪೌಲ್ ಡೇವಿಡ್‌ಸನ್ ಹಾಗೂ ರೋಹನ್ ಸೇಠ್ ಅವರು 2020ರ ಮಾರ್ಚ್‌ನಲ್ಲಿ ಕ್ಲಬ್‌ಹೌಸ್ ಅನ್ನು ಆರಂಭಿಸಿದ್ದರು. ‘ಡ್ರಾಪ್ ಇನ್ ಆಡಿಯೊ’ ಎನ್ನುವಕಲ್ಪನೆಯಲ್ಲಿ ಆರಂಭಿಸಿದ ಈ ಆಪ್, ಆರಂಭದಲ್ಲಿ  ಕೇವಲ ಐಫೋನ್‌ಗಳಿಗೆ ಸೀಮಿತವಾಗಿತ್ತು. ಆದರೆ
2021ರಲ್ಲಿ ಆಂಡ್ರಾಯ್ಡ್‌ನಲ್ಲಿಯೂ ಆರಂಭಿಸಲಾಯಿತು. ಇದೀಗ 5 ಕೋಟಿಗೂ ಹೆಚ್ಚು ಮಂದಿ ಈ ಆಪ್ ಬಳಸುತ್ತಿದ್ದಾರೆ. ಒಂದೇ ಬಾರಿಗೆ ಸಾವಿರಾರು ಜನರು ತಮ್ಮ ಅಭಿಪ್ರಾಯವನ್ನು ಧ್ವನಿ ರೂಪದಲ್ಲಿ ಹಂಚಿಕೊಳ್ಳಬಹುದಾದ ಈ ವೇದಿಕೆ ಸಾಮಾಜಿಕ ಜಾಲತಾಣದ ಸದ್ಯದ ಹಾಟ್ ಕೇಕ್.

***

ಈ ರೀತಿಯ ಸುಂದರ ವೇದಿಕೆಯನ್ನು ‘ವಿಶ್ವವಾಣಿ’ ಅರ್ಥಪೂರ್ಣ ವಾಗಿ ಬಳಸಿಕೊಳ್ಳಲಾಗುತ್ತಿದೆ. ವಿಶ್ವೇಶ್ವರ ಭಟ್ ಅವರು ಇಂತಹ ವೇದಿಕೆ ಮೂಲಕ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಅನೇಕರಿಗೆ ಸಮಗ್ರ ಮಾಹಿತಿಯನ್ನು ನೀಡಬಹು ದಾಗಿದೆ.
– ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಕುಕ್ಕೆ ಸುಬ್ರಮಣ್ಯ ಮಠದ ಪೀಠಾಧಿಪತಿ