Tuesday, 10th December 2024

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ವಾರ್ನರ್‌ ಗುಡ್ ಬೈ

ದುಬೈ: ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್‌ಗೆ ಕಳಪೆ ಫಾರ್ಮ್ʼನಿಂದಾಗಿ, ಸನ್ ರೈಸರ್ಸ್ ಹೈದ ರಾಬಾದ್ʼನ ಆಡುವ 11 ರಲ್ಲಿ ಸ್ಥಾನ ಸಿಗಲಿಲ್ಲ. ನಮ್ಮ ತಂಡವನ್ನ 100ರಷ್ಟು ಬೆಂಬಲಿಸಿದ ಎಲ್ಲಾ ಅಭಿಮಾನಿ ಗಳಿಗೆ ಧನ್ಯವಾದಗಳು.. ನನಗೆ ತೋರಿಸಿದ ಎಲ್ಲ ಬೆಂಬಲಕ್ಕೆ ಧನ್ಯವಾದ ಹೇಳಲು ನನ್ನಲ್ಲಿ ಪದಗಳಿಲ್ಲ. ಇದು ಅದ್ಭುತ ಪ್ರಯಾಣವಾಗಿದ್ದು, ನನ್ನ ಕುಟುಂಬದಂತಿದ್ದ ನಿಮ್ಮೆಲ್ಲರನ್ನೂ ಕಳೆದುಕೊಳ್ಳುತ್ತೇನೆ’ ಎಂದಿದ್ದಾರೆ.

ಐಪಿಎಲ್ ಎರಡನೇ ಹಂತದ ಆರಂಭದಿಂದ್ಲೂ ಡೇವಿಡ್ ವಾರ್ನರ್ ಫಾರ್ಮ್ʼಗೆ ಬಂದಿಲ್ಲ. ವಾರ್ನರ್ ಹೊರ ಉಳಿದಾಗ ಅಭಿಮಾನಿಗಳ ಪರವಾಗಿ ಅಸಮಾಧಾನ ವ್ಯಕ್ತವಾಯಿತು. ವಾರ್ನರ್ ಖಂಡಿತವಾಗಿಯೂ ಸ್ಟ್ಯಾಂಡ್‌ ನಲ್ಲಿ ಕುಳಿತಿರುವುದು ಕಂಡುಬಂತು.

ಡೇವಿಡ್ ವಾರ್ನರ್ ಅವರ ಹೆಸರನ್ನು ಹೈದರಾಬಾದ್‌ನ ಮಾಡರ್ನ್ ಟೈಮ್ ಗ್ರೇಟ್ ಪ್ಲೇಯರ್ಸ್‌ನಲ್ಲಿ ಸೇರಿಸಲಾಗಿದೆ. ಅವರು ಐಪಿಎಲ್‌ನಲ್ಲೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2014 ರಿಂದ 2020 ರವರೆಗೆ, ಡೇವಿಡ್ ವಾರ್ನರ್ ಪ್ರತಿ ಕ್ರೀಡಾ ಋತುವಿನಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 8 ಪಂದ್ಯಗಳಲ್ಲಿ 195 ರನ್ ಗಳಿಸಿದ್ದಾರೆ.

ಈ ವರ್ಷ ಎರಡು ತಂಡಗಳು ಐಪಿಎಲ್‌ಗೆ ಸೇರುತ್ತಿವೆ. ಇನ್ನು ಡೇವಿಡ್ ವಾರ್ನರ್ ಐಪಿಎಲ್ ಆಡಲು ಬಯಸಿದರೆ, ಯಾವುದೇ ಹೊಸ ತಂಡಕ್ಕೆ ಹೋಗಲು ಅವರಿಗೆ ಅವಕಾಶವಿದೆ.