On Screen Journalists: ಆಲಿಯಾ ಭಟ್, ಕರೀನಾ ಕಪೂರ್...ಬಾಲಿವುಡ್ನಲ್ಲಿ ಪತ್ರಕರ್ತೆಯರ ಪಾತ್ರ ನಿರ್ವಹಿಸಿದ್ದ ಗ್ಲಾಮರಸ್ ನಟಿಯರು ಇವರು
ಭಾರತೀಯ ಸಿನಿಮಾ ರಂಗದಲ್ಲಿ ಅನೇಕ ಜಾನರ್ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಅಂತಹವುಗಳಲ್ಲಿ ಪತ್ರಕರ್ತರ ಕಥೆ ಆಧಾರಿತ ಸಿನಿಮಾಗಳು, ವೆಬ್ ಸೀರಿಸ್ಗಳು ಹೆಚ್ಚು ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಬಾಲಿವುಡ್ ಕೆಲವೊಂದು ನಟ-ನಟಿಯರು ತಮ್ಮ ಗ್ಲ್ಯಾಮರ್ ಲುಕ್ನಿಂದ ಹೊರ ಬಂದು ಖಡಕ್ ಪತ್ರಕರ್ತರ ಪಾತ್ರದಲ್ಲಿ ತೆರೆ ಮೇಲೆ ಮಿಂಚಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

actresses who played journalists on screen


ಬಾಲಿವುಡ್ ನಟಿ ಆಲಿಯಾ ಭಟ್ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಬಾಲಿವುಡ್ ಸಿನಿಮಾದಲ್ಲಿ ಸ್ಟೈಲಿಶ್ ಸುದ್ದಿ ನಿರೂಪಕಿ ರಾಣಿ ಚಟರ್ಜಿ ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿ ಆಲಿಯಾ ಭಟ್ ದಿಟ್ಟ ಪತ್ರಕರ್ತೆಯಾಗಿ ಸಮಾಜದ ಕೆಲವು ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಬಾಲಿವುಡ್ ನಟಿ ರಾಣಿ ಮುಖರ್ಜಿ ಕೂಡ ʼನೋ ಒನ್ ಕಿಲ್ಡ್ ಜೆಸ್ಸಿಕಾʼದ ಸಿನಿಮಾದಲ್ಲಿ ಪತ್ರಕರ್ತೆಯಾಗಿ ಪಾತ್ರ ನಿರ್ವಹಿಸಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತರಾಗಿ ಈ ಸಿನಿಮಾ ಮಾಡಲಾಗಿದ್ದು, ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಜೆಸ್ಸಿಕಾ ಲಾಲ್ ಎನ್ನುವ ದಿಟ್ಟ ಮಹಿಳೆ ಪಾತ್ರವನ್ನು ನಿರ್ವಹಿಸಿದ್ದಾರೆ.

ಬಾಲಿವುಡ್ ಬ್ಲಾಕ್ ಬ್ಲಸ್ಟರ್ ಹಿಟ್ ʼಪಿಕೆʼ ಚಿತ್ರದಲ್ಲಿ ಅನುಷ್ಕಾ ಶರ್ಮಾ ಕೂಡ ಸಾಮಾಜಿಕ ಸಂಪ್ರದಾಯಗಳನ್ನು ಧಿಕ್ಕರಿಸುವ ಧೈರ್ಯಶಾಲಿ ಪತ್ರಕರ್ತೆ ಜಗತ್ ಜನನಿ (ಜಗ್ಗು) ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಮತ್ತು ಮಾರೆಲ್ ಥೀಂ ಹೊಂದಿದ್ದ ಈ ಸಿನಿಮಾ ನಟಿ ಅನುಷ್ಕಾ ಶರ್ಮಾ ಸಿನಿ ಜರ್ನಿಯಲ್ಲಿ ಬಿಗ್ ಸಕ್ಸಸ್ ನೀಡಿದೆ.

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಕೂಡ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ʼಸತ್ಯಾಗ್ರಹʼ ಸಿನಿಮಾದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಬದ್ಧರಾಗಿರುವ ಪತ್ರಕರ್ತೆ ಯಾಸ್ಮಿನ್ ಅಹ್ಮದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸತ್ಯ ಮತ್ತು ಅಧಿಕಾರದ ದರ್ಪದಿಂದ ಪತ್ರಕರ್ತರು ಎದುರಿಸುವ ನೈತಿಕ ಸಮಸ್ಯೆಗಳ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಿದೆ.

ಗ್ಲಾಮರಸ್ ಬೆಡಗಿ ಅಲಯಾ ಎಫ್ ಯುಟರ್ನ್ ಸಿನಿಮಾದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಂಡೀಗಢದ ಎನ್ಟಿಪಿಸಿ ಮೇಲ್ಸೇತುವೆಯ ಬಗ್ಗೆ ವರದಿ ಮಾಡುವ ಕೆಲಸ ಮಾಡುತ್ತಿದ್ದ ರಾಧಿಕಾ ಬಕ್ಷಿ ಪಾತ್ರದಲ್ಲಿ ನಟಿ ಅಲಯಾ ಎಫ್. ಮಿಂಚಿದ್ದಾರೆ. ವಿಶೇಷ ಎಂದರೆ ಈ ಚಿತ್ರ ಕನ್ನಡದ ʼಯುಟರ್ನ್ʼ ಸಿನಿಮಾದ ರಿಮೇಕ್.

ಬಾಲಿವುಡ್ ಖ್ಯಾತ ನಟಿ ರಾಶಿ ಖನ್ನಾ ಸಬರಮತಿ ಘಟನೆಯ ಬಗ್ಗೆ ಸತ್ಯವನ್ನು ಬಹಿರಂಗಪಡಿಸುವ ಚಿತ್ರದಲ್ಲಿ ಪತ್ರಕರ್ತೆ ಪಾತ್ರ ನಿಭಾಯಿಸಿದ್ದಾರೆ. ʼದಿ ಸಬರಮತಿʼಯಲ್ಲಿ ಅಮೃತಾ ಗಿಲ್ ಪಾತ್ರವನ್ನು ರಾಶಿ ಖನ್ನಾ ನಿರ್ವಹಿಸಿದ್ದಾರೆ. ವರದಿಗಾರನಿಗೆ ಉಂಟಾಗುವ ಮಾನಸಿಕ ಸಮಸ್ಯೆ ಬಗ್ಗೆ ಇದರಲ್ಲಿ ತಿಳಿಸಲಾಗಿದೆ.