Ananya Panday: ‘ಶನೆಲ್’ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಅನನ್ಯಾ ಪಾಂಡೆ
Ananya Panday: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಆಗಿರುವ 'ಶನಲ್' ಕಂಪನಿಗೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಅವರು ಪ್ರಚಾರ ರಾಯಭಾರಿಯಾಗಿ ಆಯ್ಕೆ ಆಗಿದ್ದು, ಸುಮಾರು 6 ಲಕ್ಷ ರೂ. ಮೌಲ್ಯದ ಬ್ಯಾಗ್ ಧರಿಸಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಭಾರತದಿಂದ ಮೊದಲ ಬಾರಿಗೆ ಶನೆಲ್ ಗೆ ರಾಯಬಾರಿ ಆಯ್ಕೆಯಾದ ಖ್ಯಾತಿಗೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡ ಪಾತ್ರರಾಗಿದ್ದು, ಈ ಕುರಿತಾದ ಕಂಪ್ಲೇಟ್ ಟಿಟೇಲ್ಸ್ ಇಲ್ಲಿದೆ.

ಅನನ್ಯಾ ಪಾಂಡೆ


ಸ್ಟೂಡೆಂಟ್ ಆಪ್ ದ ಯಿಯರ್ 2 ಸಿನಿಮಾ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಹಿರಿಯ ನಟ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ, ಬಣ್ಣದ ಲೋಕಕ್ಕೆ ಕಾಲಿಟ್ಟಾಗಿನಿಂದ ಹಿಡಿದು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ.

ಅವರು ಮಾಡಿದ ಯಾವ ಚಿತ್ರವೂ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದು ಕೊಡದೇ ಇದ್ದರೂ ಅವರನ್ನು ಹರಸಿ ಬರುವ ಅವಕಾಶಗಳು ಕಮ್ಮಿಯಾಗಿಲ್ಲ. ಸದ್ಯ ಈಕೆ ನಟಿಸಿರುವ ‘ಕೇಸರಿ: ಚಾಪ್ಟರ್ 2’ (Kesari Chapter 2) ಸಿನಿಮಾ ನಾಳೆ ಬಿಡುಗಡೆಗೆ ಸಜ್ಜಾಗಿದ್ದು, ಈ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಈ ಮಧ್ಯೆ ಮತ್ತೊಂದು ಶುಭ ಸಮಾಚಾರಕ್ಕೆ ಅನನ್ಯ ಭಾರೀ ಸುದ್ದಿಯಲ್ಲಿ ಇದ್ದು, ಫ್ರ್ಯಾನ್ಸ್ ಮೂಲದ ‘ಶನೆಲ್’ ಕಂಪನಿಗೆ ಅನನ್ಯಾ ಪಾಂಡೆ ಅವರು ಭಾರತದಿಂದ ರಾಯಭಾರಿ ಆಗಿದ್ದಾರೆ. ಸಿನಿರಂಗ ಮಾತ್ರವಲ್ಲ ಇಡೀ ಭಾರತದಿಂದ ‘ಶನೆಲ್’ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಮೊದಲ ಇಂಡಿಯಾನ್ ಸಿಟಿಜನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಹೌದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಬಿಟೌನ್ ಬ್ಯೂಟಿ ತಮ್ಮ ವಿಭಿನ್ನ ಸ್ಟೈಲಿಶ್ ಉಡುಗೆ - ತೊಡುಗೆಗಳಿಂದ ಫೇಮಸ್ ಆಗಿದ್ದು, ಇದೀಗ ‘ಶನೆಲ್’ ಕಂಪನಿಯ ಸುಮಾರು 6 ಲಕ್ಷ ರೂ. ಮೊತ್ತದ ಹ್ಯಾಂಡ್ ಬ್ಯಾಗ್ ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಈ ಮೂಲಕ ತಾವು ‘ಶನೆಲ್’ ಕಂಪನಿಗೆ ಭಾರತದ ರಾಯಭಾರಿಯಾಗಿ ಸೆಲೆಕ್ಟ್ ಆಗಿರುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ಅಲ್ಲಿ ಬರೆದುಕೊಂಡಿರುವ ಅನನ್ಯ ಪಾಂಡೆ, ಶನೆಲ್ ಕಂಪನಿಯ ಬ್ಯಾಗ್ ಹಿಡಿದುಕೊಂಡಿರುವ ಸ್ಟೈಲಿಶ್ ಫೋಟೋ ಅನ್ನು ಅಪ್ಲೋಡ್ ಮಾಡಿದ್ದಾರೆ.

ಸಿನಿಮಾಗಳಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ಸೋಷಿಯಲ್ ಮೀಡಿಯಾ ಸಖತ್ ಆ್ಯಕ್ಟಿವ್ ಆಗಿರುವ ಅನನ್ಯಾ ಪಾಂಡೆ, ವೈಯಕ್ತಿಕ ವಿಚಾರಗಳಲ್ಲಿ ಸದಾ ಹಾಟ್ ಟಾಪಿಕ್ ಆಗಿದ್ದಾರೆ. ಅತ್ಯುತ್ತಮ ಫ್ಯಾಷನ್ ಫೋಟೋಗಳು ಮತ್ತು ಡ್ಯಾನ್ಸ್ನಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಮಾಡೆಲಿಂಗ್ ಫೀಲ್ಡ್ ನಲ್ಲಿಯೂ ತಮ್ಮ ಮೋಹಕ ನೋಟ ಹಾಗೂ ಮೈಮಾಟದಿಂದ ಬೆರಗು ಮೂಡಿಸಿದ್ದಾರೆ.

ಕೇವಲ 26 ವರ್ಷಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಅಂಬಾಸಿಂಡರ್ ಆಗಿ ಆಯ್ಕೆಯಾಗಿರುವುದು ಸಿನಿಕ್ಷೇತ್ರ ಸೇರಿದಂತೆ ನಮ್ಮ ದೇಶಕ್ಕೂ ಹೆಮ್ಮೆ ತರುವ ವಿಷಯವಾಗಿದ್ದು, ‘ಸ್ಟುಡೆಂಟ್ ಆಫ್ ದಿ ಇಯರ್ 2’, ‘ಪತಿ ಪತ್ನಿ ಔರ್ ವೋ’, ‘ಗೆಹರಾಯಿಯಾ’, ‘ಕೇಸರಿ: ಚಾಪ್ಟರ್ 2’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.