Indian Army: ಕೇವಲ ಇಬ್ಬರಿಗೆ ಮಾತ್ರ ಸಿಕ್ಕಿದೆ ಭಾರತೀಯ ಸೇನೆಯ ಈ ಅತ್ಯುನ್ನತ ಹುದ್ದೆ! ಅವರಲ್ಲಿ ಒಬ್ಬ ನಮ್ಮ ಹೆಮ್ಮೆಯ ಕನ್ನಡಿಗ ಅನ್ನೋದು ನಿಮಗೆ ಗೊತ್ತೇ?
ಸೇನೆಯಲ್ಲಿರುವ ಪ್ರತಿಯೊಬ್ಬ ಸೈನಿಕನೂ ಗೌರವಕ್ಕೆ ಪಾತ್ರನಾಗಿರುತ್ತಾನೆ. ಆದರೂ ಅನುಭವ, ಸಾಧನೆಯ ಹಿನ್ನೆಲೆಯಲ್ಲಿ ಕೆಲವೊಂದು ಹೆಚ್ಚಿನ ಗೌರವಗಳು ಪಾತ್ರವಾಗುತ್ತದೆ. ಭಾರತೀಯ ಸೇನೆಯಲ್ಲಿ ಭೂಸೇನೆ, ನೌಕಾ ಸೇನೆ, ವಾಯುಸೇನೆ ಹೀಗೆ ಮೂರು ವಿಭಾಗಗಳಿವೆ. ಇವುಗಳಲ್ಲಿ ಅತ್ಯನ್ನತ ಹುದ್ದೆ ಯಾವುದು, ಈ ಹುದ್ದೆಯನ್ನು ಈವರೆಗೆ ಎಷ್ಟು ಮಂದಿ ಅಲಂಕರಿಸಿದ್ದಾರೆ, ಅವರು ಯಾರು ಹೀಗೆ ಇರುವ ಕುತೂಹಲಗಳಿಗೆ ಇಲ್ಲಿದೆ ಉತ್ತರ.



ದೇಶದ ಅತ್ಯನ್ನತ ಸೇನಾ ಹುದ್ದೆ ಎಂದರೆ ಫೀಲ್ಡ್ ಮಾರ್ಷಲ್. ಇದು ಯುದ್ಧಕಾಲದಲ್ಲಿ ನೀಡುವ ನಾಯಕನ ಸ್ಥಾನವಾಗಿದೆ. ದೇಶದಲ್ಲಿ ಈವರೆಗೆ ಕೇವಲ ಇಬ್ಬರಿಗೆ ಮಾತ್ರ ಈ ಹುದ್ದೆಯನ್ನು ನೀಡಲಾಗಿದೆ. ಕೆ.ಎಂ. ಕಾರ್ಯಪ್ಪ ಮತ್ತು ಸ್ಯಾಮ್ ಮಾಣೆಕ್ಷಾ ಅವರಿಗೆ ಎರಡು ಬಾರಿ ಈ ಗೌರವಾನ್ವಿತ ಸ್ಥಾನವನ್ನು ನೀಡಲಾಗಿತ್ತು.

ಭಾರತದ ರಕ್ಷಣಾ ಪಡೆಗಳಲ್ಲಿ ಭೂಪಡೆ, ವಾಯುಪಡೆ ಮತ್ತು ನೌಕಾಪಡೆ ಹೀಗೆ ಮೂರು ವಿಭಾಗಗಳಿವೆ. ಈ ಮೂರು ವಿಭಾಗಗಳು ಪ್ರತಿಯೊಂದು ಬೆದರಿಕೆಗೂ ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಸದಾ ಸನ್ನದ್ಧವಾಗಿರುತ್ತದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯು ಹಿರಿಯ ಸೇನಾ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಲಾಗಿದೆ. ಇದು ಜಾಗತಿಕವಾಗಿ ಭಾರತದ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.

ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಈಗ ಭಾರತವು ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ ಸಾಮರ್ಥ್ಯ ಹೊಂದಿರುವ ದೇಶವಾಗಿ ಗುರುತಿಸಿಕೊಂಡಿದೆ. ಭಾರತೀಯ ಸೇನೆಯ ಶಕ್ತಿ ಮತ್ತು ಶಿಸ್ತನ್ನು ಜಾಗತಿಕವಾಗಿ ಗೌರವಿಸಲಾಗುತ್ತದೆ. ಜೊತೆಗೆ ಅದರ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ವೃತ್ತಿಪರತೆಗೂ ಗೌರವ ನೀಡಲಾಗುತ್ತದೆ.

ಭಾರತೀಯ ಸೇನೆಯಲ್ಲಿ ಅತ್ಯುನ್ನತ ಶ್ರೇಣಿ ಎಂದರೆ ಫೀಲ್ಡ್ ಮಾರ್ಷಲ್. ಇದು ಪ್ರತಿಷ್ಠಿತ ಐದು ಸ್ಟಾರ್ ಗಳನ್ನು ಹೊಂದಿರುವ ಯುದ್ಧಕಾಲದಲ್ಲಿ ನೀಡಲಾಗುವ ಶ್ರೇಣಿಯಾಗಿದೆ. ಇದನ್ನು ಜನರಲ್ಗಿಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಯುದ್ಧ ಸಂದರ್ಭದಲ್ಲಿ ಅಸಾಧಾರಣ ಸೇವೆ ನೀಡುವವರಿಗೆ ಮಾತ್ರ ಕೊಡಮಾಡುವ ಗೌರವ ಇದಾಗಿದೆ. ಭಾರತೀಯ ಇತಿಹಾಸದಲ್ಲಿ ಇದುವರೆಗೆ ಕೇವಲ ಇಬ್ಬರು ಅಧಿಕಾರಿಗಳಿಗೆ ಮಾತ್ರ ಈ ಗೌರವವನ್ನು ನೀಡಲಾಗಿದೆ.

ಕನ್ನಡಿಗರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಆಗಿದ್ದರು. 1947–48ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಅವರ ನಾಯಕತ್ವಕ್ಕಾಗಿ ಅವರಿಗೆ 1973 ರಲ್ಲಿ ಈ ಹುದ್ದೆಯನ್ನು ನೀಡಿ ಗೌರವಿಸಲಾಯಿತು.

ಭಾರತೀಯ ಸೇನೆಯ ಅತ್ಯನ್ನತ ಹುದ್ದೆಯನ್ನು ಅಲಂಕರಿಸಿದ ಇನ್ನೊಬ್ಬ ವ್ಯಕ್ತಿ ಎಂದರೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ. ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಇಂಡೋ-ಪಾಕ್ ಯುದ್ಧದಲ್ಲಿ ಅವರ ಪ್ರಮುಖ ಪಾತ್ರಕ್ಕಾಗಿ ಅವರಿಗೆ ಅದೇ ವರ್ಷದಲ್ಲಿ ಈ ಗೌರವವನ್ನು ನೀಡಲಾಗಿದೆ.

ಫೀಲ್ಡ್ ಮಾರ್ಷಲ್ ಬಳಿಕ ಭಾರತೀಯ ಸೇನೆಯಲ್ಲಿ ಎರಡನೇ ಅತ್ಯುನ್ನತ ಹುದ್ದೆ ಎಂದರೆ ಜನರಲ್. ಇದನ್ನು ಸೇನಾ ಮುಖ್ಯಸ್ಥರು ಹೊಂದಿರುತ್ತಾರೆ. ಪ್ರಸ್ತುತ, ಈ ಹುದ್ದೆಯನ್ನು ಜನರಲ್ ಉಪೇಂದ್ರ ದ್ವಿವೇದಿ ವಹಿಸಿಕೊಂಡಿದ್ದಾರೆ. ಅನಂತರ ಕ್ರಮವಾಗಿ ಲೆಫ್ಟಿನೆಂಟ್ ಜನರಲ್, ಮೇಜರ್ ಜನರಲ್, ಬ್ರಿಗೇಡಿಯರ್, ಕರ್ನಲ್, ಲೆಫ್ಟಿನೆಂಟ್ ಕರ್ನಲ್, ಮೇಜರ್, ಕ್ಯಾಪ್ಟನ್, ಲೆಫ್ಟಿನೆಂಟ್ ಶ್ರೇಣಿಗಳಿವೆ. ಭಾರತೀಯ ಸೇನೆಯ ಅತ್ಯಂತ ಕಿರಿಯ ಶ್ರೇಣಿಗಳೆಂದರೆ ಸುಬೇದಾರ್, ನೈಬ್ ಸುಬೇದಾರ್, ಹವಾಲ್ದಾರ್, ನಾಯಕ್, ಲ್ಯಾನ್ಸ್ ನಾಯಕ್, ಸಿಪಾಯಿ ಆಗಿದೆ.