Madhuri Dixit: ತಂದೆ- ಮಗ ಇಬ್ಬರ ಜೊತೆನೂ ತೆರೆ ಮೇಲೆ ರೊಮ್ಯಾನ್ಸ್ ಮಾಡಿದ ಖ್ಯಾತ ನಟಿ ಯಾರು ಗೊತ್ತಾ?
ಸಿನಿಮಾ ರಂಗದಲ್ಲಿ ಪಾತ್ರಗಳಿಗೆ ತಕ್ಕಂತೆ ನಟ ನಟಿಯರ ಆಯ್ಕೆ ಆಗಲಿದೆ. ಅಂತೆಯೇ ಕೆಲವು ನಟ-ನಟಿಯರು ಒಂದು ಸಿನಿಮಾದಲ್ಲಿ ಅಣ್ಣ ತಂಗಿ, ಇನ್ನೊಂದು ಸಿನಿಮಾದಲ್ಲಿ ತಂದೆ ಮಗಳು, ಪತಿ ಪತ್ನಿ ಯಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಕೂಡ ಇದೆ. ಇನ್ನು ಕೆಲವೊಮ್ಮೆ ಅಪ್ಪ ಮಗನ ಇಬ್ಬರ ಸಿನಿಮಾದಲ್ಲಿಯೂ ಜೊತೆಗೆ ನಟಿಸಿ ಖ್ಯಾತಿಗಳಿಸುವುದು ಕೂಡ ಇದೆ. ಈ ನಿಟ್ಟಿನಲ್ಲಿ ನಟಿ ಮಾಧುರಿ ದೀಕ್ಷಿತ್ ಅವರು ಕೂಡ ತಂದೆ ಮತ್ತು ಮಗ ಇಬ್ಬರಿಗೂ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆ ದಿದ್ದಾರೆ. ಇದೇ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಲಿಪ್ ಕಿಸ್ ಸೀನ್ ನಲ್ಲಿ ಮರೆತು ನಟನೊಬ್ಬ ಮಾಧುರಿಯ ತುಟಿಯನ್ನು ಕಚ್ಚಿ ಗಾಯಗೊಳಿಸಿದ್ದ ಘಟನೆ ಕೂಡ ನಡೆದಿತ್ತು.

Madhuri Dixit


ನಟಿ ಮಾಧುರಿ ದೀಕ್ಷಿತ್ ಅವರು ಅಬೋಧ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕೇವಲ 17ನೇ ವಯಸ್ಸಿಗೆ ತಮ್ಮ ಸಿನಿಮಾ ಜೀವನ ಆರಂಭಿಸಿದರು. ಈ ಸಿನಿಮಾದಲ್ಲಿ ಅವರು ಅದ್ಭುತವಾಗಿ ಅಭಿನಯಿಸಿ ಬಾಲಿವುಡ್ ನಲ್ಲಿ ಗಮನ ಸೆಳೆದರು. ಬಳಿಕ ಸಾಲು ಸಾಲು ಸಿನಿಮಾ ಆಫರ್ ಬರ ಲಾರಂಭಿಸಿತು. ತೇಜಾಬ್, ದಿಲ್, ಬೇಟಾ, ಹಮ್ ಅಪ್ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ ಹೀಗೆ ಸಾಲು ಸಾಲು ಸಿನಿಮಾ ಆಫರ್ ಬಂದವು.

ಸಿನಿಮಾ ಆಫರ್ ಬರುವ ಪ್ರಮಾಣ ಹೆಚ್ಚಾದಂತೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೂ ನಟಿ ಮಾಧುರಿ ಮಿಂಚುವ ಅವಕಾಶ ಗಿಟ್ಟಿಸಿಕೊಂಡರು. ಅಮಿತಾಬ್ ಬಚ್ಚನ್, ಸುನಿಲ್ ದತ್, ರಿಷಿ ಕಪೂರ್ ಜೊತೆ ಕೂಡ ಅವರು ನಟಿಸಿದ್ದರು. 1968 ರಲ್ಲಿ ವಿನೋದ್ ಖನ್ನಾ ಅವರು ತಮ್ಮ ನಟನ ವೃತ್ತಿಯನ್ನು ಪ್ರಾರಂಭಿಸಿದ್ದು ಖಳನಾಯಕ ಪಾತ್ರಗಳಿಂದ ಖ್ಯಾತಿಯನ್ನು ಗಳಿಸಿದರು. ಮೇರೆ ಅಪ್ನೆ, ಅಚಾನಕ್, ಅಮರ್ ಅಕ್ಬರ್ ಆಂಥೋನಿ ಸಿನಿಮಾಗಳು ಹಿಟ್ ಲಿಸ್ಟ್ ಸೇರಿತ್ತು. ಅದಾದ ಬಳಿಕ ಮಾಧುರಿ ಅವರೊಂದಿಗೆ ನಟ ವಿನೋದ್ ಖನ್ನಾ ಅವರು ತೆರೆ ಹಂಚಿಕೊಂಡರು.

ನಟ ವಿನೋದ್ ಖನ್ನಾ ಮತ್ತು ನಟಿ ಮಾಧುರಿ ದೀಕ್ಷಿತ್ ಅವರು ಜೊತೆಯಾಗಿ ದಯಾವನ್ ಎಂಬ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈ ಸಿನಿಮಾದ ಆಜ್ ಫಿರ್ ತುಮ್ ಹೇ ಹಾಡಿನ ಚಿತ್ರೀಕರಣದ ಸಮಯದಲ್ಲಿ ವಿನೋದ್ ಖನ್ನಾ ಅವರು ಕಿಸ್ಸಿಂಗ್ ಸೀನ್ ಮಾಡಬೇಕಿತ್ತು. ಆಗ ಅವರು ನಟಿ ಮಾಧುರಿ ದೀಕ್ಷಿತ್ ಅವರನ್ನು ಬಲವಂತವಾಗಿ ಚುಂಬಿಸಿ, 5 ನಿಮಿಷಕ್ಕು ಅಧಿಕ ಕಾಲ ಮೈ ಮರೆತಿದ್ದರಂತೆ. ಪರಿಣಾಮವಾಗಿ ಅವರ ತುಟಿ ರಕ್ತಸ್ರಾವವಾಯಿತಂತೆ.

ಬಳಿಕ ನಿರ್ದೇಶಕರು ಚಿತ್ರೀಕರಣದ ದೃಶ್ಯವನ್ನು ನಿಲ್ಲಿಸಲು ಹೇಳಿದರೂ ವಿನೋದ್ ಖನ್ನಾ ನಿಲ್ಲಿಸಲಿಲ್ಲ. ನಂತರ ಪರಿಸ್ಥಿತಿ ಅರಿತ ವಿನೋದ್ ಖನ್ನಾ ಅವರು ಮುಜುಗರಗೊಂಡರಂತೆ. ಕಣ್ಣೀರು ಹಾಕುತ್ತಿದ್ದ ಮಾಧುರಿಗೆ ಕ್ಷಮೆಯಾಚಿಸಿದ್ದರಂತೆ. ಈಗಲೂ ಆ ಸಿನಿಮಾದಲ್ಲಿ ಆ ದೃಶ್ಯ ಹಾಗೆ ಇದೆ ಎನ್ನಲಾಗಿದೆ. ಆ ಸಮಯದಲ್ಲಿ ಮಾಧುರಿ ಅವರಿಗೆ ವಯಸ್ಸು 20 ಅಷ್ಟೇ ಆಗಿದ್ದು ಸಿನಿಮಾರಂಗಕ್ಕೆ ಹೊಸಬರಾದ ಕಾರಣ ಈ ಬಗ್ಗೆ ತಕರಾರು ಎತ್ತಿರಲಿಲ್ಲವೆಂದು ಸ್ವತಃ ಮಾಧುರಿ ದೀಕ್ಷಿತ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿನೋದ್ ಖನ್ನಾ ಜೊತೆಗಿನ ವಿವಾದಾತ್ಮಕ ದೃಶ್ಯವನ್ನು ತೆಗೆದುಹಾಕುವಂತೆ ನಿರ್ದೇಶಕ ಫಿರೋಜ್ ಖಾನ್ ಅವರನ್ನು ಮಾಧುರಿ ವಿನಂತಿಸಿದರೂ ಕೂಡ ಖಾನ್ ನಿರಾಕರಿಸಿದರು. ಕಾನೂನು ನೋಟಿಸ್ ಕೂಡ ನೀಡಲಾಯಿತು. ಒಂದು ಕೋಟಿ ರೂಪಾಯಿಗಳನ್ನು ಪಾವತಿಸಿ ದೃಶ್ಯವನ್ನು ಉಳಿಸಿ ಕೊಂಡರು ಎಂದು ಅವರು ಹೇಳಿದರು. ಬಳಿಕ 1997ರಲ್ಲಿ ನಟಿ ಮಾಧುರಿ ದೀಕ್ಷಿತ್ ಅವರು ನಟ ವಿನೋದ್ ಅವರ ಪುತ್ರ ಅಕ್ಷಯ್ ಖನ್ನಾ ಜೊತೆಗೆ ಮೊಹಬ್ಬತ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ನಟಿ ಮಾಧುರಿ ಸಿನಿ ಜರ್ನಿಯಲ್ಲಿ ದೊಡ್ಡ ಯಶಸ್ಸು ನೀಡಿತ್ತು. ಹೀಗೆ ತಂದೆ ಹಾಗೂ ಮಗ ಇಬ್ಬರ ಜೊತೆಗೂ ನಾಯಕಿಯಾಗಿ ನಟಿಸಿ ನಟಿ ಮಾಧುರಿ ದೀಕ್ಷಿತ್ ಅವರು ಫೇಮಸ್ ಆಗಿದ್ದರು.