Avneet Kaur: ಬಾಲಿವುಡ್ ಬೆಡಗಿ ಅವನೀತ್ ಕೌರ್ ಮಸ್ತ್ ವರ್ಕೌಟ್ಗೆ ಫ್ಯಾನ್ಸ್ ಫುಲ್ ಶಾಕ್!
ಯುವ ನಟಿ ಮತ್ತು ಮಾಡೆಲ್ ಅವನೀತ್ ಕೌರ್ ತಮ್ಮ ರಜಾ ದಿನವನ್ನು ವಿಶ್ರಾಂತಿಯೊಂದಿಗೆ ಕಳೆಯುವ ಬದಲು, ಫಿಟ್ನೆಸ್ ನತ್ತ ಒಲವು ಹರಿಸಿದ್ದಾರೆ. ಸದ್ಯ ಲಂಡನ್ನಲ್ಲಿ ವಿದೇಶಿ ಪ್ರವಾಸದಲ್ಲಿರುವ ಅವನೀತ್ ಇದೀಗ ಪೈಲೇಟ್ಸ್ (Pilates) ಕಲಿಯುವ ಮೂಲಕ ತಮ್ಮ ಆರೋಗ್ಯ ಹಾಗೂ ದೈಹಿಕ ಜೀವನ ಶೈಲಿಯ ಮೇಲೆ ಗಮನ ಹರಿಸುತ್ತಿದ್ದಾರೆ.



ನಟಿ ಅವನೀತ್ ಕೌರ್ ಹಲವು ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ಭಾಗವಹಿಸಿ ಖ್ಯಾತಿ ಗಳಿಸಿದ್ದಾರೆ. ನಟಿ ಅವನೀತ್ ಕೌರ್ ಎಷ್ಟು ಫಿಟ್ನೆಸ್ ಪ್ರಿಯರು ಅನ್ನೋದು ಗೊತ್ತೇ ಇದೆ. ಸದಾ ಫ್ಯಾಷನ್ ಫೋಟೋಶೂಟ್ನಲ್ಲಿ ಪೋಸ್ ಕೊಡುತ್ತಿದ್ದ ಅವನೀತ್ ಈ ಭಾರಿ ಫಿಟ್ನೆಸ್ ಫೋಟೋ ಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋ ಗಳನ್ನು ಹಂಚಿಕೊಂಡಿದ್ದು, ಪೈಲೇಟ್ಸ್ ಅಭ್ಯಾಸದಲ್ಲಿ ತೊಡಗಿರುವುದು ಕಾಣಬಹುದು. “ರಜೆಯಲ್ಲಿದ್ದರೂ ಹೊಸದನ್ನು ಕಲಿಯುತ್ತಾ ಇರುತ್ತೇನೆ''.. ಎಂಬ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದು ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ.

ಇನ್ಸ್ಟಾಗ್ರಾಮ್ ನಲ್ಲಿ ಆಗಾಗ್ಗೆ ಬೋಲ್ಡ್ ಚಿತ್ರಗಳನ್ನು ಹಂಚಿಕೊಳ್ಳುವ ಅವನೀತ್ ಈ ಭಾರಿ ಕೆಂಪು ಅಥ್ಲೆಷರ್ ಔಟ್ ಫಿಟ್ ನಲ್ಲಿ ತನ್ನ ಫಿಟ್ ಫಿಗರ್ ತೋರಿಸಿದ್ದಾರೆ. ಅವರ ಫಿಟ್ನೆಸ್ ಗುರಿಗಳು ಇತರರಿಗೂ ಪ್ರೇರಣೆಯಾಗಿದೆ.

ನಟಿ ಅವನೀತ್ ಅವರು ತಮ್ಮ ಈ ಫಿಟ್ನೆಸ್ ಫೋಟೊ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳು ತ್ತಿದ್ದಂತೆ, ಅಭಿಮಾನಿಗಳು ಅವರ ಫಿಟ್ನೆಸ್ ಕ್ರೆಜ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರಿ ಕಮೆಂಟ್ ಲೈಕ್ ಗಳ ಸುರಿಮಳೆ ಗೈದಿದ್ದಾರೆ.

ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಅವನೀತ್ ತಮ್ಮ ಬೈಸೆಪ್ಸ್, ಮಸಲ್ಸ್, ಟೊನ್ ಡ್ ಬಾಡಿ ಫೋಟೊ ಗಳನ್ನು ಶೇರ್ ಮಾಡಿದ್ದು, ನಟಿಯ ಫಿಟ್ನೆಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ...

ಅವನೀತ್ ಕೌರ್ ತಮ್ಮ ವೃತ್ತಿಜೀವನವನ್ನು ʼಡ್ಯಾನ್ಸ್ ಇಂಡಿಯಾ ಡ್ಯಾನ್ಸ್ʼ, ʼಲಿಟಲ್ ಮಾಸ್ಟರ್ಸ್ʼ ಮೂಲಕ ಪ್ರಾರಂಭಿಸಿದರು. ಪ್ರಸ್ತುತ ವೆಬ್ ಸರಣಿಗಳು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿ ಯಾಗಿರುವ ಅವರ ಮುಂದಿನ ಸಿನಿಮಾ 'ಲವ್ ಇನ್ ವಿಯೆಟ್ನಾಂ' ಆಗಿದ್ದು ಸದ್ಯದಲ್ಲೆ ಬಿಡುಗಡೆಯಾಗಲಿದೆ.