WAVES Summit 2025: ಮುಂಬೈನ ವೇವ್ಸ್ ಶೃಂಗಸಭೆಯಲ್ಲಿ ಮೋದಿ; ಯಾವೆಲ್ಲ ಚಿತ್ರತಾರೆಯರು ಭಾಗವಹಿಸಿದ್ದರು? ಇಲ್ಲಿದೆ ಫೋಟೋ
ಪ್ರಧಾನಿ ನರೇಂದ್ರ ಮೋದಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ WAVES 2025 ಅನ್ನು ಉದ್ಘಾಟಿಸಿದರು. ಕರಣ್ ಜೋಹರ್, ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಸೇರಿದಂತೆ ಅನೇಕ ತಾರೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.



ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಮುಂಬೈನ (Mumbai) ಜಿಯೋ ವರ್ಲ್ಡ್ ಸೆಂಟರ್ನಲ್ಲಿ WAVES 2025 (ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ 2025) ಅನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮ ನಾಲ್ಕು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿದಂತೆ ಅನೇಕ ಚಿತ್ರತಾರೆಯರು ಹಾಜರಿದ್ದರು. ಶಾರುಖ್ ಖಾನ್, ಅಕ್ಷಯ್ ಕುಮಾರ್, ರಜನಿಕಾಂತ್ ಹೇಮಾಮಾಲಿನಿ, ಮೋಹನ್ಲಾಲ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ರಣಬೀರ್ ಕಪೂರ್ ಮತ್ತು ಅಕ್ಷಯ್ ಕುಮಾರ್, ನಿರ್ದೇಶಕ ರಾಜಮೌಳಿ ಸೇರಿಂದತೆ ಇಡೀ ಚಿತ್ರರಂಗ ನೆರೆದಿತ್ತು. ಈ ಕಾರ್ಯಕ್ರಮದಡಿಯಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಆಯೋಜಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಮುಂಬೈನಲ್ಲಿ ನಡೆದ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ 2025- WAVES 2025 ರಲ್ಲಿ ಪ್ರಧಾನಿ ಮೋದಿ ಎಲ್ಲಾ ಕಲಾವಿದರು, ವಿಷಯ ರಚನೆಕಾರರು, ಸೃಜನಶೀಲ ಚಿಂತಕರನ್ನು ಉದ್ದೇಶಿಸಿ ಮಾತನಾಡುತ್ತಾ, "ಇಂದು, 100 ಕ್ಕೂ ಹೆಚ್ಚು ರಾಷ್ಟ್ರಗಳ ಕಲಾವಿದರು, ಹೂಡಿಕೆದಾರರು ಮತ್ತು ನೀತಿ ನಿರೂಪಕರು ಇಲ್ಲಿ ಒಂದರ ಅಡಿಯಲ್ಲಿ ಒಟ್ಟುಗೂಡಿದ್ದಾರೆ ಎಂದಿದ್ದಾರೆ.

ಆಲಿಯಾ ಭಟ್ ಕೂಡ WAVES 2025 ನಲ್ಲಿ ಭಾಗವಹಿಸಿದ್ದರು. ತಿಳಿ ಗುಲಾಬಿ ಹಾಗೂ ಚಿನ್ನದ ಬಣ್ಣದ ಸೀರೆಯಲ್ಲಿ ಆಲಿಯಾ ಕಂಗೊಳಿಸಿದ್ದು ಹೀಗೆ.

ಕಾರ್ಯಕ್ರಮದಲ್ಲಿ ಬಾಲಿವುಡ್ನ ಪದ್ಮಾವತಿ ದೀಪಿಕಾ ಪಡುಕೋಣೆ ಕೂಡ ಭಾಗವಹಿಸಿದ್ದರು. ತಿಳಿ ಚಿನ್ನದ ಬಣ್ಣದ ಸೂಟ್ನಲ್ಲಿ ದೀಪಿಕಾ ಮಿಂಚಿದ್ದಾರೆ.

ಬಾಲಿವುಡ್ ಕಿಂಗ್ ಶಾರುಖ್ ಹಾಗೂ ಸೈಫ್ ಅಲಿ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಪ್ಪು ಜಾಕೆಟ್ ಹಾಗೂ ಕಪ್ಪು ಪಾಂಟ್ನಲ್ಲಿ ಶಾರುಕ್ ಮಿಂಚಿದ್ದಾರೆ. ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್, ಸೇರಿದಂತೆ ಬಾಲಿವುಡ್ನ ಅನೇಕ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಹೈ ಪ್ರೊಫೈಲ್ ಶೃಂಗಸಭೆಯ ಸಮಯದಲ್ಲಿ ವೇದಿಕೆಯ ಮೇಲೆ ಬಂದ ಕಾರ್ತಿಕ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಂದು ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡರು. ವೇದಿಕೆ ಮೇಲೆ ಮಾತನಾಡಿದ ಅವರು ಇಷ್ಟು ದೊಡ್ಡ ಸಭೆ ನೋಡಿ ನನ್ನ ಹೃದಯ ಬಡಿತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.