ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ʼಮುಸ್ಲಿಮರು ದುರ್ಬಲರುʼ ಹೇಳಿಕೆಗೆ ರಾಬರ್ಟ್‌ ವಾದ್ರಾ ದೇಶದ ಕ್ಷಮೆಯಾಚಿಸಲಿ: ಪ್ರಲ್ಹಾದ್‌ ಜೋಶಿ ಆಗ್ರಹ

Pralhad Joshi: ಇಡೀ ದೇಶವೇ ಭಯೋತ್ಪಾದನೆ ಕೃತ್ಯವನ್ನು ಖಂಡಿಸುತ್ತಿದ್ದರೆ, ರಾಬಾರ್ಟ್‌ ವಾದ್ರಾ ಅವರು ಅದನ್ನು ಸಮರ್ಥಿಸಿಕೊಳ್ಳುವ ರೀತಿ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಅಸಹ್ಯಕರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ರಾಬರ್ಟ್‌ ವಾದ್ರಾ ದೇಶದ ಕ್ಷಮೆಯಾಚಿಸಲಿ: ಪ್ರಲ್ಹಾದ್‌ ಜೋಶಿ ಆಗ್ರಹ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Apr 23, 2025 10:12 PM

ನವದೆಹಲಿ: ‘ಭಾರತದಲ್ಲಿ ಮುಸ್ಲಿಂರು ದುರ್ಬಲರಾಗಿದ್ದಾರೆ’ ಎನ್ನುವ ಮೂಲಕ ಪಹಲ್ಗಾಮ್‌ ಭಯೋತ್ಪಾದನೆ ಕೃತ್ಯವನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬಾರ್ಟ್‌ ವಾದ್ರಾ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಭಯೋತ್ಪಾದನೆ ದಾಳಿ ಕುರಿತ ರಾಬರ್ಟ್‌ ವಾದ್ರಾ ಪ್ರತಿಕ್ರಿಯಿಗೆ ತಿರುಗೇಟು ನೀಡಿರುವ ಸಚಿವ ಜೋಶಿ, ಇಡೀ ದೇಶವೇ ಭಯೋತ್ಪಾದನೆ ಕೃತ್ಯವನ್ನು ಖಂಡಿಸುತ್ತಿದ್ದರೆ ವಾದ್ರಾ ಅವರು ಅದನ್ನು ಸಮರ್ಥಿಸಿಕೊಳ್ಳುವ ರೀತಿ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಅಸಹ್ಯಕರವಾಗಿದೆ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿ ಮುಸ್ಲಿಂರು ದುರ್ಬಲರಲ್ಲ. ಅವರೂ ಎಲ್ಲರಂತೆ ಅತ್ಯಂತ ಸುರಕ್ಷಿತರಾಗಿ ಶಾಂತಿ, ಸೌಹಾರ್ದತೆಯಿಂದ ಇದ್ದಾರೆ. ಆದರೆ ಮೂಲಭೂತವಾದಿಗಳು ದೇಶ ಮತ್ತು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರಿತುಕೊಳ್ಳದೆ ರಾಬರ್ಟ್‌ ವಾದ್ರಾ ಅವರು ಹಿಂದೂಗಳನ್ನು ದೂಷಿಸುತ್ತಿದ್ದಾರಲ್ಲದೆ, ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಾದ್ರಾ ದೇಶದ ಕ್ಷಮೆಯಾಚಿಸಲಿ

ದೇಶದ ಒಬ್ಬ ಪ್ರಜೆಯಾಗಿ ರಾಬರ್ಟ್‌ ವಾದ್ರಾ ಅವರು ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವಂಥ ರೀತಿ ಸರಿಯಲ್ಲ. ಇದಕ್ಕಾಗಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ಸಚಿವರು, ವಾದ್ರಾ ಸ್ವಲ್ಪ ವಿವೇಚನೆಯುಳ್ಳವರಾಗಿ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಇನ್ನು ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್‌ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಸಹ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ 370 ತೆಗೆದಿದ್ದೇ ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ಕಾರಣ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ʼಭಯೋತ್ಪಾದಕರು ನಮ್ಮ ಬ್ರದರ್ಸ್‌ʼ ಎನ್ನುವ ಕಾಂಗ್ರೆಸ್ಸಿಗರ ವರ್ತನೆ ಇನ್ನೂ ಹಾಗೇ ಮುಂದುವರಿಸಿರುವುದು ತೀವ್ರ ಖಂಡನೀಯ ಎಂದು ಸಚಿವ ಜೋಶಿ ಹೇಳಿದರು.

ಈ ಸುದ್ದಿಯನ್ನೂ ಓದಿ | Pahalgam Terror Attack: ಪ್ರವಾಸಿಗರ ಸುರಕ್ಷಿತ ರವಾನೆಗೆ ಟಿಕೆಟ್ ದರ ಹೆಚ್ಚಿಸದಿರಲು ವೈಮಾನಿಕ ಕಂಪನಿಗಳಿಗೆ ಸೂಚನೆ- ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್ಸಿಗರು ಹೀಗೆ ಕ್ಷುಲ್ಲಕವಾಗಿ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಭಯೋತ್ಪಾದನೆ ಹತ್ತಿಕ್ಕಲು ದೇಶದ ಒಳ-ಹೊರಗೆ ಶ್ರಮಿಸುತ್ತಿದ್ದರೆ, ಕಾಂಗ್ರೆಸ್ಸಿಗರು ಸಮರ್ಥಿಸಿಕೊಳ್ಳುವ ರೀತಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ದುರಂತ ಎನಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.