Monday, 14th October 2024

5 ಎಂಬ ನೈಜತೆಯ ಕಥೆ

ಸದ್ಯ ತೆರೆಗೆ ಬರುತ್ತಿರುವ, ಮುಂದೆ ಬರಲಿರುವ ಬಹುತೇಕ ಚಿತ್ರಗಳು ವಿಭಿನ್ನ ಶೀರ್ಷಿಕೆಯನ್ನೇ ಹೊಂದಿವೆ.

ಇದೇ ಚಿತ್ರದ ಯಶಸ್ಸಿನ ಗುಟ್ಟು ಎಂದು ಹಲವು ನಿರ್ದೇಶಕರು ಕೂಡ ಅಂದುಕೊಂಡಿದ್ದಾರೆ. ಅದಕ್ಕಾಗಿಯೇ ಶಿರ್ಷಿಕೆಯನ್ನು ಆಯ್ದು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಅಂತಹ ಚಿತ್ರಗಳಲ್ಲಿ‘‘5’’ ಒಂದು. ಭಿನ್ನಾಂಕದ ಸಂಖ್ಯೆ ಶೀರ್ಷಿಕೆಯೊಂದಿಗೆ ಹೊಸಬರ ತಂಡವೊಂದು ಚಿತ್ರವನ್ನು ಶುರು ಮಾಡಿದ್ದಾರೆ. ಸೂಪರ್ ಕಾಫ್ ಕಥೆಯ ಜತೆಗೆ ಸಸ್ಪೆನ್ಸ್‌, ಥ್ರಿಲ್ಲರ್ ಕಥೆಯೂ ಚಿತ್ರದಲ್ಲಿದೆ. ಕಿಶೋರ್ ನಾಯಕನಾಗಿ ಅಭಿನಯಿಸುತ್ತಿದ್ದು, ಪೊಲೀಸ್ ಅಧಿಕಾರಿಯಾಗಿ ಖಾಕಿ ಖದರ್‌ನಲ್ಲಿ ಮಿಂಚಲಿದ್ದಾರೆ. ದಿಟ್ಟ ಪತ್ರಕರ್ತೆಯಾಗಿ ರಾಜಕೀಯದ ಹುಳುಕುಗಳನ್ನು ಎತ್ತಿ ತೋರಿಸುವಂತಹ ಪಾತ್ರದಲ್ಲಿ ಕೃಷಿ ತಾಪಂಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಉಳಿದಂತೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ರಿವನ್ ವಿಕ್ರಮ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ‘‘5’’ ಚಿತ್ರದ ಕಥೆಯು ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಒಂದು ಇಪ್ಪತ್ತು
ವರ್ಷಗಳ ಹಿಂದಿನ ನೆನಪುಗಳನ್ನು ಹೊತ್ತು ತಂದರೆ, ಮತ್ತೊಂದು ಪ್ರಸ್ತುತ ಮಾಡ್ರನ್ ದಿನಗಳನ್ನು ಒಳಗೊಂಡಿದೆ.

2013ರಲ್ಲಿ ನಿರ್ದೇಶಕರ ಬದುಕಿನಲ್ಲಿಯೇ ನಡೆದ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ಕಾಲ್ಪನಿಕ ರೂಪ
ನೀಡಿ ಕಥೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಮೊದಲ ಹಂತದಲ್ಲಿ ಮೈಸೂರಿನಲ್ಲಿ ಮಾಂಟೇಜ್
ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ. ಎರಡನೇ ಹಂತವನ್ನು ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಒಂದು ಗೀತೆಗೆ ಕೀರ್ತನ್ ಸಂಗೀತ, ನಾಗೇಶ್‌ಆಚಾರ್ಯ ಛಾಯಾಗ್ರಹಣ, ಜಿಯಾವುಲ್ಲಾಖಾನ್ ಸಂಭಾಷಣೆ, ವಿಜೇತ್ ಸಂಕಲನವಿದೆ. ಸಮಾನ ಮನಸ್ಕರು ಸೇರಿಕೊಂಡು ದಿ ಲಾಸ್ಟ್ ಬೆಂಚಸ್ ಆಫ್ ಸಿನಿಅಡ್ಡ ಸಂಸ್ಥೆ ಶುರು ಮಾಡಿ, ಇದರ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. *