Saturday, 14th December 2024

ವೇದಾಧ್ಯಯನದಲ್ಲಿ ಅಪಾರ ಸಾಧನೆ

ವಿಜ್ಞಾನ ಕ್ಷೇತ್ರದಲ್ಲಿ ಅಪಾರವಾದ ಯಶಸ್ಸು ಗಳಿಸಿರುವ ಕಶ್ಯಪ್ ಅವರು, ತಮ್ಮ ಮಧ್ಯವಯಸ್ಸಿನಲ್ಲಿ ಶ್ರೀ ಅರವಿಂದರ ವಿಚಾರ ಧಾರೆಯಿಂದ ಆಕರ್ಷಿತರಾಗಿ ವೇದಾಭ್ಯಾಸಕ್ಕೆ ತೊಡಗಿದರು. 23 ವರ್ಷಗಳಿಂದ ಭಾರತದಲ್ಲಿಯೇ ನೆಲೆಸಿ ಸತತ ವಾಗಿ ಪೂರ್ಣ ಪ್ರಮಾಣದಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಬರಹಗಳಲ್ಲಿ ನಿರತರಾಗಿದ್ದಾರೆ ವೇದಾಂಗ ವಿದ್ವಾನ್ ಪ್ರೊ.ಆರ್.ಎಲ್.ಕಶ್ಯಪ್.

ಡಾ.ಜಯಂತಿ ಮನೋಹರ್

ಭಾರತದ ಮೂಲ ಚಿಂತನೆಗಳಿರುವ ವೇದ ಸಾಹಿತ್ಯವನ್ನು ಆದ್ಯಂತವಾಗಿ ಅಭ್ಯಸಿಸಿ ಭಾಷ್ಯವನ್ನು ಬರೆದಿರುವ ಬೆರಳೆಣಿಕೆಯಷ್ಟು ವಿದ್ವಾಂಸರಲ್ಲಿ ವೇದಾಂಗ ವಿದ್ವಾನ್ ಡಾ.ಆರ್.ಎಲ್.ಕಶ್ಯಪ್‌ರವರಿಗೆ ಇಂದು ವಿಶೇಷ ಸ್ಥಾನವಿದೆ. ಹದಿನೈದನೇ ಶತಮಾನದಲ್ಲಿ
ಸಾಯಣಾಚಾರ್ಯರಿಂದ ರಚಿತವಾದ ವಿಸ್ತತವಾದ ವೇದ ಭಾಷ್ಯದ ತರುವಾಯ ವಿದೇಶೀಯರೂ ಸೇರಿದಂತೆ ಹಲವು ಭಾಷ್ಯಕಾ ರರು ಕಾಣುತ್ತಾರಾದರೂ ಅಲ್ಲಿ ಸಮಗ್ರತೆ ಕಾಣುವುದಿಲ್ಲ. ಈ ದಿಸೆಯಲ್ಲಿ ನಾಲ್ಕೂ ವೇದಗಳಿಗೆ ಸಮಗ್ರವಾದ ಭಾಷ್ಯನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿರುವ ಕಶ್ಯಪ್‌ರವರದು ಅಸೀಮ ಸಾಹಸ.

ವಿಜ್ಞಾನ ಕ್ಷೇತ್ರದಲ್ಲಿ ಅಪಾರವಾದ ಯಶಸ್ಸು ಗಳಿಸಿರುವ ಕಶ್ಯಪ್‌ಅವರು, ತಮ್ಮ ಮಧ್ಯವಯಸ್ಸಿನಲ್ಲಿ ಶ್ರೀ ಅರವಿಂದರ ವಿಚಾರ ಧಾರೆಯಿಂದ ಆಕರ್ಷಿತರಾಗಿ ವೇದಾಭ್ಯಾಸಕ್ಕೆ ತೊಡಗಿದರು. 23 ವರ್ಷಗಳಿಂದ ಭಾರತದಲ್ಲಿಯೇ ನೆಲೆಸಿ ಸತತವಾಗಿ ಪೂರ್ಣ ಪ್ರಮಾಣದಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಬರಹಗಳಲ್ಲಿ ನಿರತರಾಗಿದ್ದಾರೆ.

ಇವರು 1997 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಶ್ರೀ ಅರವಿಂದೋ ಕಪಾಲಿ ಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್’
ಎಂಬ ಸಂಸ್ಥೆಯ ಮೂಲಕ ಮಾಡುತ್ತಿರುವ ಪುಸ್ತಕ ಪ್ರಕಟಣೆ ದೇಶ ವಿದೇಶಗಳಲ್ಲಿರುವ ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿರುವ ಆಸಕ್ತರಿಗೆ ಉಪಯುಕ್ತ ಆಕರಗಳಾಗಿವೆ. ಇದರೊಂದಿಗೆ ಇವರಿಂದ ನಿಯಮಿತ ವಾಗಿ ಪ್ರವಚನಗಳು ಮತ್ತು ಕಾರ್ಯಾಗಾರಗಳು ನಡೆಯುತ್ತವೆ.

ಅಮೆರಿಕದಲ್ಲಿ ಭಾರತೀಯ ತತ್ತ್ವಶಾಸ್ತ್ರದ ಅಧ್ಯಯನ: ಬಾಲ್ಯದಲ್ಲಿ ವೇದಾಭ್ಯಾಸದ ಹಿನ್ನಲೆ ಇಲ್ಲದಿದ್ದಾಗ್ಯೂ, ಧಾರ್ಮಿಕ ಕುಟುಂಬದ ವಾತಾವರಣದಲ್ಲಿ ಸಾಮಾನ್ಯವಾಗಿ ನಡೆಯುವ ದೇವತಾರಾಧನೆಯಲ್ಲಿ ಸಮಯದಲ್ಲಿ ಇದರ ಉದ್ದೇಶ, ಒಳ ಅರ್ಥಗಳ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದವು ಎನ್ನುವ ಕಶ್ಯಪ್‌ರವರು ವೇದಾಧ್ಯಯನ ನಡೆಸಿದ್ದು ಅಮೆರಿಕದಲ್ಲಿಯೇ. ಎಪ್ಪತ್ತರ
ದಶಕದಲ್ಲಿ ಅಮೆರಿಕ ದೇಶಕ್ಕೆ ಭೇಟಿ ಕೊಡುತ್ತಿದ್ದ ಹಲವಾರು ಉಪನ್ಯಾಸಕರು ಇವರ ಮನೆಯಲ್ಲಿ ಅತಿಥಿಯಾಗಿರುತ್ತಿದ್ದರು.

ಅವರಲ್ಲಿ ಮುಖ್ಯರಾವರು, ಅರವಿಂದರ ಹಾಗೂ ರಮಣಮಹರ್ಷಿಗಳ ನೇರ ಶಿಷ್ಯರಾದ ಮಾಧವ ಪಂಡಿತರು. ‘ವೇದಗಳೇ ಜ್ಞಾನದ ಪ್ರಪ್ರಥಮ ಸ್ರೋತ ಹಾಗೂ ಅದೇ ಅಂತಿಮವಾದದ್ದು’ ಎಂದು ಯೋಗಿ ಅರವಿಂದರು ಹೇಳುವ ಮಾತಿನಿಂದ ಪ್ರಭಾವಿತ ರಾದರು. ವೇದಗಳೇ ತಮ್ಮ ಮಾತಿಗೆ ಆಧಾರ ಎಂದು ಹೇಳಿಕೊಂಡು ರಚಿತವಾದ ನಮ್ಮ ಹಲವಾರು ಧರ್ಮಗ್ರಂಥ ಗಳಲ್ಲಿ ವೈದಿಕ ಜೀವನಕ್ಕೆ ವಿರುದ್ಧವಾದದ್ದು ಕಾಣಸಿಗುತ್ತದೆ, ಹಾಗಾಗಿ, ಭಾರತೀಯ ಜ್ಞಾನ ಪರಂಪರೆಯನ್ನು ನಿಜವಾಗಿ ಅರಿಯಬೇಕೆನ್ನು ವವರು ಈಗಲೂ ಮೂಲ ಚಿಂತನೆಗಳಿರುವ ವೇದಾಧ್ಯಯನಕ್ಕೆ ಮೊರೆ ಹೋಗಬೇಕು ಎನ್ನುವುದು ಅವರ ದೃಢ ನಿಲುವು.

ವೇದಮಂತ್ರಗಳಲ್ಲಿ, ಸಾಂಕೇತಿಕ ಪರಿಭಾಷೆಯಲ್ಲಿ ಕಾಣುವ ಆಧ್ಯಾತ್ಮಿಕ ಅರ್ಥದ ಮಹತ್ವವನ್ನು ಯೋಗಿ ಅರವಿಂದರು ತಮ್ಮ ಕೃತಿಗಳಲ್ಲಿ ತೆರೆದು ತೋರಿದ್ದಾರೆ. ಅವರ ನೇರ ಶಿಷ್ಯರಾದ ಕಪಾಲಿ ಶಾಸ್ತ್ರಿಗಳು ತಮ್ಮ ಉದ್ಗ್ರಂಥವಾದ ‘ಸಿದ್ಧಾಂಜನ’ದಲ್ಲಿ ಋಗ್ವೇದ ಸಂಹಿತೆಯ ಮೊದಲ ಅಷ್ಟಕದಲ್ಲಿರುವ 1370 ಮಂತ್ರಗಳ ಪದಶಃ ಅನುವಾದದೊಂದಿಗೆ, ಅರವಿಂದರ ದರ್ಶನದ ಬೆಳಕಿನಲ್ಲಿ, ಆಧ್ಯಾತ್ಮ ಪರ ಭಾಷ್ಯವನ್ನು ಬರೆದಿದ್ದಾರೆ. ಅವರ ಹಾದಿಯಲ್ಲೇ ಸಾಗಿರುವ ಆರ್.ಎಲ್.ಕಶ್ಯಪ್ ಅವರು ನಾಲ್ಕೂ
ವೇದ ಸಂಹಿತೆಗಳು ಹಾಗೂ ತತ್ಸಂಬಂಧಿತ ಗ್ರಂಥಗಳಿಗೆ ಬರೆದಿರುವ ಭಾಷ್ಯಗಳಲ್ಲಿ ಸಾಂಕೇತಿಕ ಪರಿಭಾಷೆಯಲ್ಲಿರುವ ಹೊಳಹು ಗಳನ್ನು ತೆರೆದು ತೋರಿಸಿದ್ದಾರೆ.

ಉತ್ತಮ ಗುಣಮಟ್ಟದ ಪುಸ್ತಕ ಪ್ರಕಟಣೆ ಮಾಡಬೇಕೆಂಬುದು, 1997ರಲ್ಲಿ ‘ಶ್ರೀ ಅರವಿಂದೋ ಕಪಾಲಿ ಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅವರ ಮುಂದೆ ಇದ್ದ ಉದ್ದೇಶಗಳಲ್ಲಿ ಮುಖ್ಯವಾದುದು. ಅದರಂತೆ ಇಂದು ಅವರು ಇಂಗಿಷಿನಲ್ಲಿ ಬರೆದಿರುವ ಹಲವಾರು ವೇದ ಸಂಪುಟಗಳು ಮತ್ತು ಮಧ್ಯಮ ಗಾತ್ರದ ಪುಸ್ತಕಗಳು ಪ್ರಕಟವಾಗು ತ್ತಲಿವೆ. ಅದರೊಂದಿಗೆ ಆ ಎಲ್ಲಾ ಪುಸ್ತಕಗಳು ಕನ್ನಡ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಭಾಷೆಗಳಿಗೆ ಅನುವಾದ ಗೊಂಡು ಆಸಕ್ತರಿಗೆ ತಲುಪುತ್ತಿವೆ.

ರಾಮಕೃಷ್ಣ ಮಠದ ಸ್ವಾಮಿ ನಿಶ್ರೇಯಸಾನಂದರು ಮತ್ತು ಅರೋಬಿಂದೊ ಆಶ್ರಮದ ಮಾಧವ ಪಂಡಿತರ ನೇರ ಸಂಪರ್ಕ ಹೊಂದಿದ್ದ ಕಶ್ಯಪ್ ರವರು ಯೋಗಿ ಅರವಿಂದರು ಹಾಗೂ ಶ್ರೀ ಮಾತೆಯವರ ಪೂರ್ಣಯೋಗದ ಮಾರ್ಗದಲ್ಲಿ ಯಶಸ್ವಿಯಾಗಿ ಸಾಗಿ ಬಂದಿದ್ದಾರೆ.

‘ವೇದಾಧ್ಯಯನವನ್ನು ಗಂಭೀರವಾಗಿ ಅಧ್ಯಯನ ಮಾಡಿದಾಗ ಪ್ರತಿಯೊಂದು ಮಂತ್ರದಲ್ಲಿಯೂ ವಿಶ್ವಶಕ್ತಿಯ ಚೈತನ್ಯ ಅಡಗಿ ರುವುದನ್ನು ಕಾಣುತ್ತೇವೆ. ನನ್ನ ಉದಾಹರಣೆಯನ್ನೇ ತೆಗೆದುಕೊಂಡರೆ, ವೇದಗಳನ್ನು ಅಭ್ಯಾಸ ಮಾಡುವುದರಿಂದ, ಮನಸ್ಸಿನ ಶಕ್ತಿಯು ಹೆಚ್ಚಿ, ಬೇರೆಯವರು ಹಲವಾರು ಗಂಟೆಗಳಲ್ಲಿ ಮಾಡುವ ಕೆಲಸವನ್ನು ನಾನು ಅಲ್ಪಾವಧಿಯಲ್ಲಿ ಮಾಡಲು ಸಾಧ್ಯ ವಾಯಿತು.

ನನ್ನ ವೈಜ್ಞಾನಿಕ, ತಾಂತ್ರಿಕ ವಿದ್ಯೆಗೂ ಕೂಡ ಈ ಅಧ್ಯಯನವು ಸಹಾಯವಾಯಿತು. ಹಾಗಾಗಿ, ವೇದಾಧ್ಯಯನ ಮಾಡಿ ವೈದಿಕ ಜೀವನವನ್ನು ರೂಢಿಸಿಕೊಂಡಲ್ಲಿ ವ್ಯಕ್ತಿಗಳ ಏಳಿಗೆಯಾಗುವುದರೊಂದಿಗೆ ಸಮಾಜದ ಏಳಿಗೆಯೂ ಆಗುವುದರಲ್ಲಿ ಸಂಶಯವಿಲ್ಲ’ ಎಂದು ಹೇಳುವ ಆರ್.ಎಲ್.ಕಶ್ಯಪ್ ಅವರ ಮಾತು ಸರ್ವಾಂಗೀಣ ಅಭಿವೃದ್ಧಿ ಬಯಸುವ ಎಲ್ಲರಿಗೂ ದಿಕ್ಸೂಚಿಯಾಗಿದೆ. ಇವರ ಅಗಾಧವಾದ ಅರಿವಿನ ಬೆಳಕಿನಲ್ಲಿ ಅಧ್ಯಯನ ಮಾಡುವುದು ದೈವ ಕೃಪೆಯಿಂದ ನನಗೆ ದೊರಕಿರುವ ಸುಯೋಗ.

ವಿಜ್ಞಾನ ಕ್ಷೇತ್ರದಲ್ಲೂ ಸಾಧನೆ
1938ರಲ್ಲಿ ಸರಗೂರು ರಂಗಸಾಮಿ ಅಯ್ಯಂಗಾರ್ ಮತ್ತು ಶ್ರೀರಂಗಮ್ಮ ಅವರಿಗೆ ಮೈಸೂರಿನಲ್ಲಿ ಜನಿಸಿದ ಆರ್.ಎಲ್.ಕಶ್ಯಪ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮುಂದೆ, 1962 ರಲ್ಲಿ, ಐ.ಐ.ಎಸ್.ಸಿ. ಯಲ್ಲಿ ಎಂ.ಇ. ಪದವಿ ಪಡೆದರು. ನಂತರ ಉನ್ನತ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋದ ಕಶ್ಯಪ್ ಅಲ್ಲಿಯೇ Pattern
Classification and Switching Theory ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದರು.

ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ವಿಜ್ಞಾನದ ವಿಭಾಗದಲ್ಲಿ 33 ವರ್ಷಕ್ಕೂ ಹೆಚ್ಚಿನ ಕಾಲ ಪ್ರೊಫೆಸರ್ ಆಗಿ 50ಕ್ಕೂ ಹೆಚ್ಚಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ವಿಷಯದಲ್ಲಿ ಇವರು ಬರೆದ ಗ್ರಂಥಗಳು ಇಂದಿಗೂ ಅಮೇರಿಕದ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕಗಳಾಗಿವೆ. ಹಲವಾರು ಅಂತಾರಾಷ್ಟ್ರೀಯ
ಸಮ್ಮೇಳನಗಳಲ್ಲಿ 360 ಪ್ರೌಢ ಪ್ರಬಂಧಗಳನ್ನು ಮಂಡಿಸಿರುವ ಇವರ ಹೆಸರು ವಿದ್ವತ್ ವಲಯಗಳಲ್ಲಿ ಚಿರಪರಿಚಿತ.

ಈ ದಿಸೆಯಲ್ಲಿ ಕಶ್ಯಪರಿಗೆ ಸಂದಿರುವ ಸನ್ಮಾನ – ಪ್ರಶಸ್ತಿಗಳು ಆನೇಕ. ಅಮೇರಿಕದಲ್ಲಿ ಖ್ಯಾತನಾಮರನ್ನು ಗುರಿತಿಸುವ ‘ಹೂ ಇಸ್ ಹೂ ಇನ್ ಅಮೆರಿಕ’ ಎಂಬ ಗ್ರಂಥದಲ್ಲಿ ಇವರ ಹೆಸರು ಉಲ್ಲೇಖಿತಗೊಂಡಿದೆ.

ಗೌರವಗಳು
ಡಾ.ಆರ್.ಎಲ್.ಕಶ್ಯಪ್ ಅವರ ವಿದ್ವತ್ತು, ಸಂಶೋಧನೆ ಹಾಗೂ ಅಪಾರವಾದ ವೈದಿಕ ಸಾಹಿತ್ಯ ರಚನೆಯನ್ನು ಹಲವು ಸಂಸ್ಥೆ ಗಳೂ ಗೌರವಿಸಿದ್ದಾರೆ. ಮಾನ್ಯ ರಾಷ್ಟ್ರಪತಿಗಳಿಂದ ‘ವೇದಾಂಗ ವಿದ್ವಾನ್’ ಪ್ರಶಸ್ತಿಯ ಸನ್ಮಾನಕ್ಕೆ ಅವರು ಭಾಜನರಾಗಿದ್ದಾರೆ. ಅದರೊಂದಿಗೆ, ಕರ್ನಾಟಕ ರಾಜ್ಯದಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಭಾರತೀಯ ವಿದ್ಯಾ ಭವನ್ ನೀಡಿರುವ ‘ವೇದ ಬ್ರಹ್ಮ’ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಮುಂತಾದ ಅನೇಕ ಗೌರವ ಸನ್ಮಾನಗಳಿಗೆ ಇವರು ಭಾಜನರಾಗಿ ದ್ದಾರೆ.