Saturday, 14th December 2024

25 ರ ಸಂಭ್ರಮದಲ್ಲಿ ಆಕ್ಟ್ 1978

ಲಾಕ್‌ಡೌನ್ ಬಳಿಕ ರಿಲೀಸ್ ಆದ ಮೊದಲ ಕನ್ನಡದ ಸಿನಿಮಾ ‘ಆಕ್ಟ್ 1978’. ಒಳ್ಳೆಯ ಕಥೆಯನ್ನು ಹೊಂದಿದ್ದ ಈ ಚಿತ್ರ
ಧೈರ್ಯವಾಗಿಯೇ ತೆರೆಗೆ ಬಂತು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿಯೂ ಯಶಸ್ವಿಯಾಯಿತು.

ಇದೀಗ ಚಿತ್ರ ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಡಿ ಕ್ರಿಯೇಷ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಆಕ್ಟ್‌ 1978’ ಸಿನಿಮಾಕ್ಕೆ ಆರ್.ದೇವರಾಜ್ ಬಂಡವಾಳ ಹೂಡಿದ್ದು, ಮಂಸೋರೆ ನಿರ್ದೇಶನ ಮಾಡಿದ್ದಾರೆ. ಕೆಆರ್‌ಜಿ ಕನೆಕ್ಟ್ ತುಂಬ ಅನುಕೂಲವಾಯಿತು. ಬರೀ ಪ್ರಚಾರ ಆಗಬಾರದು, ಅಭಿಯಾನದ ರೀತಿಯಲ್ಲಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದರು.

ಯಾವ ಯಾವ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿದರೆ ಜನ ಬರುತ್ತಾರೆ ಎಂಬುದನ್ನು ಅರಿತು ಚಿತ್ರ ಬಿಡುಗಡೆ ಮಾಡಲಾಯಿತು.
ಒಟ್ಟಾರೆಯಾಗಿ 25 ದಿನ ಪೂರೈಸಿದ ಈ ಗೆಲುವಿಗೆ ಇಡೀ ತಂಡದ ಶ್ರಮವೇ ಕಾರಣ ಎನ್ನುತ್ತಾರೆ ನಿರ್ದೇಶಕ ಮಂಸೋರೆ. ಕಮರ್ಷಿ ಯಲ್ ಹಿಟ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನಮ್ಮ ಸಂತೋಷಕ್ಕಾದರೂ ಸಿನಿಮಾ ಮಾಡಿದರಾಯಿತು ಎಂದು
ಈ ಸಿನಿಮಾ ಶುರು ಮಾಡಿದೆವು. ಇದೀಗ ಚಿತ್ರ 25ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಸಿನಿಮಾ ನೋಡಿ ಮಹಿಳೆಯೊಬ್ಬರು ತಮಗಾದ ಅನ್ಯಾಯವನ್ನು ಧೈರ್ಯವಾಗಿ ಹೇಳಿ ಕೊಂಡಿದ್ದಾರೆ. ಹೀಗಾಗಿ ನಾವು ಅಂದುಕೊಂಡ ಕೆಲಸ ಸಾರ್ಥಕವಾಯ್ತು’ ಎಂಬುದು ನಿರ್ಮಾಪಕ ದೇವರಾಜ್ ಅಭಿಪ್ರಾಯ.
ಚಿತ್ರದಲ್ಲಿ ನಟಿ ಯಜ್ಞಾಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಹಿರಿಯ ನಟಿ ಶ್ರುತಿ ಮಾನವ ಹಕ್ಕು ಆಯೋಗದ ಅಧ್ಯಕ್ಷೆಯಾಗಿ
ಬಣ್ಣಹಚ್ಚಿದ್ದಾರೆ. ಉಳಿದಂತೆ, ಸಂಚಾರಿ ವಿಜಯ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತಿತರರು ಚಿತ್ರದ ತಾರಾ ಬಳಗ ದಲ್ಲಿದ್ದಾರೆ.

ಕೋಟ್‌

‘ನನಗೆ ಈ ವ್ಯವಹಾರದ ಬಗ್ಗೆ ಗೊತ್ತಿಲ್ಲ. ಎರಡನೇ ದಿನ ನಾನು ಈ ಸಿನಿಮಾ ನೋಡಿದೆ. ನಾನು ಸಿನಿಮಾವನ್ನು ವಿಮರ್ಶಾ ತ್ಮಕವಾಗಿ ನೋಡುತ್ತೇನೆ. ಯಾವ ಸಿನಿಮಾವನ್ನೂ ನಾನು ಅಷ್ಟು ಸುಲಭವಾಗಿ ಮೆಚ್ಚಿಕೊಳ್ಳುವುದಿಲ್ಲ. ಈ ಸಿನಿಮಾ ತುಂಬ ಹಿಡಿಸಿತು. ಹಲವು ಜನರಿಗೆ ಹೇಳಿದ್ದೆ. ಚಿತ್ರಮಂದಿರದಲ್ಲಿ ಡಿಸಿಪ್ಲೇನ್ ಮೇಂಟೆನ್ ಮಾಡಿzರೆ ಬಂದು ನೋಡ್ರಪ್ಪ ಎಂದಿದ್ದೆ. ನಮ್ಮ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದಾರೆ. ಇದೀಗ 25 ದಿನ ಪೂರೈಸಿದೆ, ಸಿನಿಮಾ ಮೆಚ್ಚಿಕೊಂಡವರಿಗೆಲ್ಲ ಧನ್ಯವಾದ’.  -ದತ್ತಣ್ಣ , ಹಿರಿಯ ನಟ