Sunday, 24th November 2024

ಬಂದಿದೆ ಆಂಡ್ರಾಯ್ಡ್ 11

ಬಡೆಕ್ಕಿಲ ಪ್ರದೀಪ

ಟೆಕ್ ಟಾಕ್

್ರ ತಿ ಸಲ ಆಂಡ್ರಾಯ್‌ಡ್‌ ಹೊಸ ವರ್ಶನ್ ಒಂದನ್ನು ಲಾಂಚ್ ಮಾಡುವಾಗ ಗ್ಯಾಜೆಟ್ ಪ್ರಿಯರಿಗೆ ಅದೇನೋ ಕುತೂಹಲ.
ಆದರೆ ಈ ಹೊಸ ಅಪ್‌ಡೇಟ್‌ಗಳು ಹೆಚ್ಚಿನೆಲ್ಲಾ ಫೋನ್‌ಗಳಿಗೆ ಬರುವುದಕ್ಕೆೆ ಕೆಲ ತಿಂಗಳುಗಳೇ ಬೇಕಾಗುತ್ತದೆ. ಇದೀಗ
ಆಂಡ್ರಾಾಯ್‌ಡ್‌ 11 ಅನ್ನುವ ಹೊಸ ವರ್ಶನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ಗೂಗಲ್ ಲಾಂಚ್ ಮಾಡಿದ್ದು ಇದನ್ನು, ಎಂದಿನಂತೆ ಕೆಲವೇ ಕೆಲವು ಫೋನ್‌ಗಳು ಲಾಂಚ್ ಆಗುತ್ತಿದ್ದಂತೇ ಅಪ್‌ಡೇಟ್ ಮಾಡುವ ಅವಕಾಶ ನೀಡಿವೆ.

ಇನ್ನುಳಿದ ಫೋನ್‌ಗಳಲ್ಲಿ, ಆಯಾ ಫೋನ್ ತಯಾರಿಕಾ ಕಂಪೆನಿಗಳು ನೀಡಿದ ಮೇಲಷ್ಟೇ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಯಾವ್ಯಾವ ಫೋನ್‌ಗಳಿಗೆ ಈಗಾಗಲೇ ಬಂದಿದೆ? ಗೂಗಲ್‌ನ ಪಿಕ್ಸೆೆಲ್2, ಅದರ ನಂತರ ಲಾಂಚ್ ಆದ ಫೋನ್‌ಗಳು, ವನ್‌ಪ್ಲಸ್ 8, ಒಪೋ ಫೈಂಡ್ ಎಕ್ಸ್‌ ಮತ್ತು ಎಕ್ಸ್‌ ಪ್ರೋ, ರಿಯಲ್‌ಮಿ ಎಕ್50 ಪ್ರೋ,ಷೌಮಿ ಮಿ10 ಮತ್ತು 10ಪ್ರೋ. (ಸೆಟಿಂಗ್ಸ್ ಗೆ ಹೋಗಿ ಸಿಸ್ಟಮ್- ಅಡ್ವಾನ್ಸ್ಡ್-ಸಿಸ್ಟಮ್ ಅಪ್‌ಡೇಟ್ ಅನ್ನು ಕ್ಲಿಕ್ ಮಾಡಿ ಅಪ್‌ಡೇಟ್ ಚೆಕ್ ‌ಮಾಡಿ.)

ಹೊಸದೇನಿದೆ?
1. ಚ್ಯಾಟ್ ಬಬಲ್‌ಗಳು
ಈಗ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಇರುವ ಚ್ಯಾಟ್ ಬಬಲ್‌ಗಳನ್ನು (ತೇಲಾಡುವ ಐಕನ್) ಇಲ್ಲೂ ನೀಡಲಾಗಿದೆ. ಹೊಸದೇ ನೆಂದರೆ, ಹೊಸ ಅಪ್‌ಡೇಟ್‌ನ ಮೂಲಕ ಅಂಡ್ರಾಯ್ಡ್ ‌‌ಈ ಬಬಲ್‌ಗಳನ್ನು ಎಲ್ಲಾ ಚ್ಯಾಟ್ ಆ್ಯಪ್‌ಗಳಿಗೂ ನೀಡಲಿದೆ. ನೀವು ಬಬಲ್ ಮೂಲಕ ಚ್ಯಾಟ್ ಮಾಡಬೇಕೆಂದರೆ ನೋಟಿಫಿಕೇಶನ್ ಗೆ ಹೋಗಿ ಮೆಸೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ ಬಬಲ್‌ಗೆ ಕಳುಹಿಸುವ ಆಪ್ಶನ್ ಕ್ಲಿಕ್ ಮಾಡಬಹುದು.

2. ಸರಳ ನೋಟಿಫಿಕೇಶನ್ ಆಯ್ಕೆಗಳು ಬೇರೆ ಆ್ಯಪ್‌ಗಳಿಂದ ಬರುವ ಒಂದಲ್ಲಾ ಒಂದು ನೋಟಿಫಿಕೇಶನ್‌ಗಳು ರಾಶಿಯಾಗಿ ಬಿದ್ದು ಯಾವುದು ಬೇಕು ಯಾವುದು ಬೇಡ ಅನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗದೇ ಎಲ್ಲಾ ನೋಟಿಫಿಕೇಶನ್‌ಗಳನ್ನೂ ಕ್ಲಿಯರ್ ಮಾಡು ವುದು ಹೆಚ್ಚಿನೆಲ್ಲರ ಅಭ್ಯಾಸವಾಗಿ ಬಿಟ್ಟಿದೆ. ಈಗ ನೋಟಿಫಿಕೇಶನ್‌ಗಳನ್ನು ಮೂರು ವಿಭಾಗವಾಗಿ ಮಾಡುತ್ತಿದೆ ಅಂಡ್ರಾಯ್ಡ್ 11. ಸಂಭಾಷಣೆ, ಅಲರ್ಟ್ ಮತ್ತು ಸೈಲೆಂಟ್‌ಗಳಲ್ಲಿ ಹೆಚ್ಚಿವರಿಗೆ ಬೇಕಾಗುವುದು ಮೊದಲನೆಯದು.

ಎರಡನೆಯದೂ ಕೆಲವೊಮ್ಮೆ
ಅಷ್ಟೇ ಮುಖ್ಯವಾಗುತ್ತದೆ. ಸಂಭಾಷಣೆ ಮೇಲಿನ ಭಾಗದಲ್ಲೇ ಮೊದಲೇ ಸಿಗುವುದರಿಂದ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನಾವದನ್ನು ನೋಡುತ್ತೇವೆ. ಇನ್ನು ಕೆಲವು ಆ್ಯಪ್‌ಗಳು ನಿಮಗೆ ತಲೆನೋವು ನೀಡುವಂತೆ ನೋಟಿಫಿಕೇಶನ್‌ಗಳನ್ನು ಕಳುಹಿಸು ತ್ತಿದ್ದರೆ ಅವುಗಳನ್ನು ಶಾಂತಗೊಳಿಸುವುದಕ್ಕೆ ಸೈಲೆಂಟ್ ಅನ್ನುವ ಆಯ್ಕೆಯನ್ನು ನೀಡಿ ಅವು ಅಲ್ಲಿಗೇ ತೆರಳುವ ಅವಕಾಶವಿದೆ. ಆಂಡ್ರಾಯ್ಡ್‌ 11 ನಲ್ಲಿ ಗೂಗಲ್ ಸಂಭಾಷಣೆಗೆ ಹೆಚ್ಚಿನ ಮಹತ್ವ ನೀಡಿದೆ ಅನ್ನುವುದು ಸ್ಪಷ್ಟವಾಗುತ್ತಿದೆ.

3. ನೋಟಿಫಿಕೇಶನ್ ಇತಿಹಾಸ
ಯಾವುದೋ ಮುಖ್ಯ ನೋಟಿಫಿಕೇಶನ್ ಮಿಸ್ ಆಗಿ, ಅದು ಎಲ್ಲಿ ಹೋಯ್ತಪ್ಪಾ ಎಂದು ಹುಡುಕಾಡುವ ರೇಜಿಗೆಗೆ ಇಲ್ಲಿದೆ ಉತ್ತರ. ಅಂಡ್ರಾಯ್ಡ್‌ 11 ರಲ್ಲಿ ನೋಟಿಫಿಕೇಶನ್ ಇತಿಹಾಸವನ್ನೂ ನೋಡುವ ಅವಕಾಶವನ್ನು ಇದೆ. ಎಲ್ಲಾ ನೋಟಿಫಿಕೇಶನ್‌ಗಳೂ ಸೇವ್ ಅಗದೇ ಇದ್ದರೂ ನಿಮಗೆ ಕಳೆದ 24 ಗಂಟೆಗಳ ನೋಟಿಫಿಕೇಶನ್‌ಗಳನ್ನು ಪರಾಂಬರಿಸಿ ನೋಡುವ ಅವಕಾಶ ಬೇಕಿದ್ದರೆ ಅದನ್ನು ಸೆಟ್ಟಿಂಗ್ಸ್‌‌ನಲ್ಲಿರುವ ನೋಟಿಫಿಕೇಶನ್ ಸೆಟ್ಟಿಂಗ್ಸ್‌ ಸೆಕ್ಶನ್‌ಗೆ ಹೋಗಿ ಅಲ್ಲಿ ನೋಟಿಫಿಕೇಶನ್ ಇತಿಹಾಸ ಅನ್ನುವ ಆಯ್ಕೆಯನ್ನು ಮಾಡುವ ಮೂಲಕ ಬದಲಾಯಿಸಬಹದು. ಕಳೆದ 24 ಗಂಟೆಗಳಲ್ಲಿ ಬಂದಿರುವ ಎಲ್ಲಾ ನೋಟಿಫಿಕೇಶನ್
ಗಳ ಇತಿಹಾಸವೂ ಸೇವ್ ಆಗಿರುವುದರಿಂದ, ಅವುಗಳೆಡೆಯಲ್ಲಿ ನಿಮಗೆ ಮಿಸ್ ಆದ ನೋಟಿಫಿಕೇಶನ್ ಹುಡುಕಬೇಕು.

4. ಸ್ಕ್ರೀನ್ ರೆಕಾರ್ಡಿಂಗ್
ಈ ಹಿಂದೆ ಕೆಲವೊಂದು ಫೋನ್‌ಗಳಲ್ಲಿ ಮಾತ್ರ ಈ ಅವಕಾಶ ಇತ್ತು, ಇಲ್ಲಾಂದ್ರೆ ಅದಕ್ಕೋಸ್ಕರ ಒಂದು ಆ್ಯಪ್ ಅನ್ನು ಡೌನ್ ‌ಲೋಡ್ ಮಾಡಿಕೊಳ್ಳಬೇಕಿತ್ತು, ಇದೀಗ ಆಂಡ್ರಾಯ್ಡ್ 11 ಅದನ್ನೂ ಕೂಡ ಸಿಸ್ಟಮ್‌ನ ಜೊತೆಯಲ್ಲೇ ನೀಡುತ್ತಿದೆ.

5. ಆ್ಯಪ್ ಪರ್ಮಿಶನ್‌ಗಳು
ಹೊಸದಾಗಿ ಆ್ಯಪ್ ಡೌನ್‌ಲೋಡ್ ಮಾಡಿದಾಗ ಅಥವಾ ಕೆಲವೊಮ್ಮೆ ಪ್ರತಿ ಬಾರಿ ಬಳಸುವಾಗ ಕೆಲವೊಂದು ಪರ್ಮಿಶನ್‌ಗಳನ್ನು ನೀಡುವುದು ಅನಿವಾರ್ಯವಾಗಿತ್ತು. ನಮ್ಮ ಲೊಕೇಶನ್ ಇತ್ಯಾದಿಗಳನ್ನು ಆಯಾ ಆ್ಯಪ್‌ಗಳು ಬಳಸುವ ಮೂಲಕ ನಮ್ಮ ಗೌಪ್ಯತೆಗೆ ಧಕ್ಕೆಯಾದೀತೆನ್ನುವ ಭಯ ಎಲ್ಲರಲ್ಲೂ ಇರುವುದರಿಂದ ಕಳೆದ ಕೆಲ ವರ್ಶನ್‌ಗಳಲ್ಲಿ ಈ ಆಯ್ಕೆಗಳನ್ನು ಹೀಗೆ ಮಾಡಿ ಕೊಳ್ಳುವುದಕ್ಕೆ ಗೂಗಲ್ ಅವಕಾಶ ನೀಡಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿದೆ ಆಂಡ್ರಾಯ್ಡ್‌ 11. ಮೊದಲು ಎಲ್ಲಾ ಕಾಲ ದಲ್ಲೂ ಅವಕಾಶ ನೀಡಿ ಅಥವಾ ಆ ಆ್ಯಪ್ ಅನ್ನು ಪ್ರತಿ ಬಾರಿ ಬಳಸುವಾಗ ಅವಕಾಶ ನೀಡಿ ಎನ್ನುತ್ತಿದ್ದದನ್ನು ಸ್ವಲ್ಪ ಬದಲಾ ವಣೆ ಮಾಡಿ, ಒಂದೇ ಬಾರಿ ಅಥವಾ ಈ ಬಾರಿ ಮಾತ್ರ ಅವಕಾಶ ನೀಡಿ, ಅಥವಾ ಆ ಆ್ಯಪ್ ಬಳಸುವಾಗ ಮಾತ್ರ ಅವಕಾಶ ನೀಡಿ ಎನ್ನುವ, ಅಥವಾ ಅವಕಾಶವನ್ನು ನಿರಾಕರಿಸುವ ಆಯ್ಕೆಯನ್ನು ನೀಡುವ ಮೂಲಕ ಹೆಚ್ಚಿನ ಸ್ವಾತಂತ್ರ್ಯವನ್ನು ಬಳಕೆ ದಾರರಿಗೆ ನೀಡಿದೆ.

6. ಡಾರ್ಕ್ ಥೀಮ್ ಸಮಯ
ಕಪ್ಪು ಪರದೆಯ ಬಳಕೆಯ ಮೂಲಕ ಕಣ್ಣಿಗೆ ಹೆಚ್ಚು ಒತ್ತಡ ಬೀಳದಂತೆ ನೋಡಿ ಕೊಳ್ಳುವ ಡಾರ್ಕ್ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲು ಆಂಡ್ರಾಯ್ಡ್‌ 10 ಅವಕಾಶ ನೀಡಿತ್ತು. ಅದರಲ್ಲೇ ಸ್ವಲ್ಪ ಹೆಚ್ಚಿನ ಅವಕಾಶ ನೀಡಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಡಾರ್ಕ್ ಥೀಮ್ ಇಡುವ, ಬೇಕಾದ ಸಮಯ ನಿಗದಿ ಮಾಡುವ ಅವಕಾಶವನ್ನೂ ನೀಡಲಿದೆ ಈ ಅಪ್‌ಡೇಟ್.

7. ಪಿನ್ ಮಾಡುವ ಅವಕಾಶ

ನಾವು ಯಾವುದನ್ನಾದರೂ ಶೇರ್ ಮಾಡಬೇಕೆಂದೆನಿಸಿದರೆ, ಅದಕ್ಕೆ ಶೇರ್ ಐಕನ್ ಅನ್ನು ಕ್ಲಿಕ್ ಮಾಡಿದರೆ ಹಲವಾರು ಆಯ್ಕೆಗಳು ಬರುತ್ತದೆ. ಇದೀಗ ಬಂದಿರುವ ಅಪ್‌ಡೇಟ್‌ನ ಮೂಲಕ ಆ್ಯಪ್ ಅನ್ನು ಪಿನ್ ಮಾಡಬಹುದು. ಈ ಪಿನ್ ಮಾಡುವುದು, ಅಂದರೆ ಚುಚ್ಚುವುದರ ಅರ್ಥ ಯಾವುದೇ ಆ್ಯಪ್ ನಿಮ್ಮ ಶೇರ್ ಲಿಸ್ಟಿನಲ್ಲಿ ಮೊದಲು ಸಿಗಬೇಕು ಎನ್ನುವುದಿದ್ದರೆ, ಈ ಆಯ್ಕೆಯ ಮೂಲಕ
ಬೇಕಾದ ಆ್ಯಪ್ ಅನ್ನು ಪಿನ್ ಮಾಡಿ ಅದನ್ನು ಬೇಗ ಕ್ಲಿಕ್ ಮಾಡುವ ಅನುಕೂಲವನ್ನು ಹೊಂದಬಹುದು. 8. ಪವರ್ ಬಟನ್‌ ನಲ್ಲಿ ಇನ್ನಷ್ಟು ಆಯ್ಕೆಗಳು ಫೋನನ್ನು ಆಫ್ ಅಥವಾ ರೀಸ್ಟಾರ್ಟ್ ಮಾಡುವ ಬಟನ್ ಕ್ಲಿಕ್ ಮಾಡಿದರೆ, ಕೇವಲ ಎರಡೋ ಮೂರೋ ಆಯ್ಕೆಗಳು ಸಿಗುತ್ತಿದ್ದುದರಿಂದ ತೊಡಗಿ ಇದೀಗ ಅದೇ ಬಟನ್ ಕ್ಲಿಕ್ ಮಾಡಿದಾಗ ನಿಮ್ಮ ಫೋನ್ ಯಾವುದಾದರೂ ಸ್ಮಾರ್ಟ್ ಬಲ್ಬ್‌, ಫ್ಯಾನ್ ಇತ್ಯಾದಿಗಳಿಗೆ ಕನೆಕ್ಟ್‌ ಆಗಿದ್ದರೆ ಅವುಗಳನ್ನು ಕಂಟ್ರೋಲ್ ಮಾಡುವ ಜೊತೆಗೆ ನೇರವಾಗಿ ಜಿಪೇ (ಗೂಗಲ್ ಪೇ)ಯನ್ನು ಕ್ಲಿಕ್ ಮಾಡುವ ಅವಕಾಶವನ್ನೂ ನೀಡಲಿದೆ.