ವಸಂತ ಗ ಭಟ್
ಟೆಕ್ ಫ್ಯೂಚರ್
ವಿಶ್ವವು ಕರೋನಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲೇ, ಅಮೆರಿಕದ ಆ್ಯಪಲ್ ಸಂಸ್ಥೆ ಎರಡು ಟ್ರಿಲಿಯನ್ ಡಾಲರ್ ಮಾರುಕಟ್ಟೆೆ ಮೌಲ್ಯ ದಾಖಲಿಸಿ, ಬೆರಗು ಮೂಡಿಸಿದೆ.
ಇದೇ ಆಗಸ್ಟ್ 19 ರಂದು ಆ್ಯಪಲ್ ಸಂಸ್ಥೆ 2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದುವ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿರುವ ಜಗತ್ತಿನ ಅತ್ಯಂತ ಮೌಲ್ಯಯುತವಾದ ಸಂಸ್ಥೆಯಾಗಿ, ಹೊರಹೊಮ್ಮಿತು. 2019 ರ ಭಾರತದ ಜಿಡಿಪಿ 2.94 ಟ್ರಿಲಿಯನ್ ಡಾಲರ್. ನಮ್ಮ ದೇಶದ ಕಳೆದ ವರ್ಷದ ಜಿಡಿಪಿಯ ಸುಮಾರು 80 ಪ್ರತಿಶತ ಆ್ಯಪಲ್ ಸಂಸ್ಥೆಯ ಮೌಲ್ಯ ವಿದೆ ಎಂದರೆ ನೀವೇ ಊಹಿಸಿಕೊಳ್ಳಿ, ಆ್ಯಪಲ್ ಎಷ್ಟು ದೈತ್ಯ ಸಂಸ್ಥೆಯಾಗಿ ರೂಪುಗೊಡಿದೆಯೆಂದು.
ಆ್ಯಪಲ್ ಅತ್ಯಂತ ಲಾಭದಲ್ಲಿರುವ ಸಂಸ್ಥೆ. ಅದು ಇನ್ನಷ್ಟು ಲಾಭಗಳಿಸುವುದರಲ್ಲಿದೆ. ಆದರೆ ವಾಸ್ತವದಲ್ಲಿ ಆ್ಯಪಲ್ ಸಹ
ಎಲ್ಲ ಸಂಸ್ಥೆಗಳ ರೀತಿಯಲ್ಲಿ ಲಾಭ ನಷ್ಟವನ್ನು ಸಮವಾಗಿ ಅನುಭವಿಸಿದೆ. 2020 ರ ಕರೋನ ಸಮಸ್ಯೆ ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ, ಖರ್ಚು ಮಾಡಲು ಜನರ ಬಳಿ ಹಣವಿಲ್ಲದ ಇಂತಹ ಸಂಧರ್ಭದಲ್ಲಿ ಆ್ಯಪಲ್ ಇಷ್ಟು ಮೌಲ್ಯವನ್ನು ಹೊಂದಿರುವುದು ಖಂಡಿತವಾಗಿಯೂ ಗಮನಾರ್ಹ ಸಾಧನೆ. ಜಗತ್ತಿನ ಹೆಚ್ಚಿನ ಸಂಸ್ಥೆಗಳು ನಷ್ಟ ಅನುಭವಿಸುತ್ತಿರುವ ಈ ಸಮಯದಲ್ಲಿ ಆ್ಯಪಲ್ ಹೇಗೆ ಈ ಪರಿಯ ಲಾಭವನ್ನುಗಳಿಸುತ್ತಿದೆ? 2011 ರ ನಂತರ ಆ್ಯಪಲ್ ಆ್ಯಪಲ್ ಸಂಸ್ಥೆಯ ಉತ್ಪನ್ನಗಳ ಬಳಕೆದಾರರಲ್ಲಿ ಆ್ಯಪಲ್ ಬೇರೆಯಲ್ಲ, ಸ್ಟಿವ್ ಜಾಬ್ಸ್ ಬೇರೆಯಲ್ಲ, ಒಂದು ಇನ್ನೊಂದನ್ನು ಬಿಟ್ಟಿರಲಾರದಷ್ಟು ಬೆಸೆದು ಕೊಂಡಂತಹ ಸಂಬಂಧ.
2011 ರಲ್ಲಿ ಸ್ಟಿವ್ ಜಾಬ್ಸ್ ತೀರಿಕೊಂಡಾಗ ಸಂಸ್ಥೆೆಯ ಚುಕ್ಕಾಣಿ ಹಿಡಿದವರು ಟಿಮ್ ಕುಕ್. ಇವರು ಸ್ಟಿವ್ ಜಾಬ್ಸ್‌ನ ಒಡನಾಡಿ, ಸಂಸ್ಥೆಯ ಒಳಹೊರಗನ್ನು ಚೆನ್ನಾಗಿ ತಿಳಿದವರಾಗಿದ್ದರು. ಆದರೆ, ಕುಕ್ ಚುಕ್ಕಾಣಿ ಹಿಡಿದ ಆರಂಭದ ಮೊದಲ 2-3 ವರ್ಷ, ಸಂಸ್ಥೆಯನ್ನು ನಷ್ಟಕ್ಕೆ ಈಡಾಯಿತು. ಕುಕ್‌ನ ಆಡಳಿತ ಬಗ್ಗೆ ಸಂಸ್ಥೆಯ ಒಳಗೆ ಸಾಕಷ್ಟು ವಿರೋಧ ವ್ಯಕ್ತವಾಗತೊಡಗಿತು. 2016 ರ ವೇಳೆಗೆ ಇದು ಅತಿರೇಕಕ್ಕೆ ಹೋಗಿ ನಂತರ ನಿಧಾನವಾಗಿ ಕಡಿಮೆಯಾಗುತ್ತ ಹೋಯಿತು.
ಕುಕ್ ಸಂಸ್ಥೆಯ ಸಂಪೂರ್ಣ ಹಿಡಿತವನ್ನು ತೆಗೆದುಕೊಂಡು ಸಂಸ್ಥೆಯನ್ನು ಮತ್ತೆ ಲಾಭದ ಹಳಿಗೆ ತಂದರು. 2018 ರ ಆಗಸ್ಟ್ನಲ್ಲಿ ಆ್ಯಪಲ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದುವ ಮೂಲಕ ಹೊಸ ದಾಖಲೆಯನ್ನು ಬರೆಯಿತು. ಅದೇ ವರ್ಷ ಇನ್ನಷ್ಟು ಲಾಭವನ್ನು ಅಪೇಕ್ಷಿಸಿದ್ದ ಆ್ಯಪಲ್ ಸಂಸ್ಥೆಯ ಆಸೆ ಈಡೇರಲಿಲ್ಲ. ಸೆಪ್ಟೆೆಂಬರ್‌ನಲ್ಲಿ ಆ್ಯಪಲ್ ಅಲ್ಲಿಯವರೆಗೆ ಎಂದೂ ಬಿಡುಗಡೆಮಾಡದಷ್ಟು ಹೆಚ್ಚಿನ ಬೆಲೆಯ ಐಫೋನ್ ಅನ್ನು ಮಾರುಕಟ್ಟೆೆಗೆ ಬಿಡುಗಡೆ ಮಾಡಿತು. ವರ್ಷದ ಆರಂಭ ದಲ್ಲಿ ಸಿಕ್ಕ ಉತ್ತಮ ಸ್ಪಂದನೆಯಿಂದಾಗಿ ಉತ್ಸಾಹಗೊಂಡಿದ್ದ ಆ್ಯಪಲ್‌ನ ದುಬಾರಿ ಬೆಲೆಯ ಮೊಬೈಲ್‌ಗಳು ಸಹ ಹೆಚ್ಚಾಗಿ ಮಾರಾಟವಾಗಿ ಇನ್ನಷ್ಟು ಲಾಭಗಳಿಸಬಹುದು ಎನ್ನಲಾಗಿತ್ತು. ಆದರೆ ಜನ ದುಬಾರಿ ಮೊಬೈಲ್’ಗಳನ್ನೂ ತಿರಸ್ಕರಿಸಿಬಿಟ್ಟರು. ಹೆಚ್ಚಿನ ಬೆಲೆಗೆ ಯಾವುದೇ ಸಂಪೂರ್ಣ ಹೊಸದು ಎನ್ನುವಂತಹ ಅಂಗಳು ಇರದ ಕಾರಣ ಆ್ಯಪಲ್ 2019 ರ ಮೊದಲ ತ್ರೈಮಾಸಿಕದಲ್ಲಿ ಹಿಂದೆಂದೂ ಕಾಣದಷ್ಟು ನಷ್ಟವನ್ನು ಅನುಭವಿಸಿ, ಸುಮಾರು 480 ಬಿಲಿಯನ್ ಡಾಲರ್ ಮಾರುಕಟ್ಟೆೆ ಮೌಲ್ಯವನ್ನು ಸಂಸ್ಥೆ ಕಳೆದುಕೊಂಡಿತು. ಆಗ ಕಾರ್ಯಪ್ರವೃತ್ತರಾದ ಕುಕ್, 2019 ರ ಮಾರ್ಚ್‌ನಲ್ಲಿ ಆ್ಯಪಲ್ ಟಿವಿ +, ಆ್ಯಪಲ್ ಕ್ರೆಡಿಟ್ ಕಾರ್ಡ್ ತರಹದ ಆ್ಯಪಲ್ ಉತ್ಪನ್ನಗಳಲ್ಲಿ ಬಳಸಬಹುದಾದಂತಹ ಸೇವೆಗಳನ್ನು ಬಿಡುಗಡೆ ಮಾಡಿದರು. ಹೊಸದಾಗಿ ಮೊಬೈಲುಗಳನ್ನು ಖರೀದಿಸಿದವರಿಗೆ ಈ ಸೇವೆಗಳನ್ನು ಅಗ್ಗದ ದರದಲ್ಲಿ ಆ್ಯಪಲ್ ಸಂಸ್ಥೆ ನೀಡಲಾರಂಭಿಸಿತು.
ತನ್ಮೂಲಕ ಕೇವಲ ಉತ್ಪನ್ನ ಕೇಂದ್ರಿತ ಮಾರುಕಟ್ಟೆಯಿಂದ ಸೇವಾಧಾರಿತ ಮಾರುಕಟ್ಟೆಯನ್ನು ಪ್ರವೇಶಿಸಿತು. ಮೊಬೈಲ್ ನೊಟ್ಟಿಗೆ, ಹಲವು ಸೇವೆಗಳು ಉಚಿತವಾಗಿ ಸಿಗುವುದರಿಂದ ನಿಧಾನವಾಗಿ ಆ್ಯಪಲ್‌ನ ಷೇರಿನ ಮೌಲ್ಯ ಹೆಚ್ಚಾಗತೊಡಗಿತು.
ದ್ವಿಗುಣಗೊಂಡ ಮೌಲ್ಯ ಇವೆಲ್ಲವುಗಳ ಪರಿಣಾಮವಾಗಿ 2020 ರ ಜನವರಿಯಲ್ಲಿ ಸಂಸ್ಥೆಯ ಮೌಲ್ಯ ಕಳೆದ ವರ್ಷಕ್ಕೆ ಹೋಲಿಸಿ ದರೆ ಶೇಖಡಾ 100 ರಷ್ಟು ಹೆಚ್ಚಾಗಿತ್ತು. ಈ ವರ್ಷ ಆ್ಯಪಲ್ ಹೇರಳ ಲಾಭಗಳಿಸುವ ಆಲೋಚನೆಯನ್ನು ಸಹ ಇಟ್ಟು ಕೊಂಡಿತ್ತು. ಆದರೆ ಕರೋನದಿಂದಾಗಿ ಜಗತ್ತಿನ ಕೊಳ್ಳುವ ಸಾಮರ್ಥ್ಯ ಬಹಳವಾಗಿ ಕಡಿಮೆಯಾಯಿತು. ಜೊತೆಗೆ ಆ್ಯಪಲ್‌ನ ಹೆಚ್ಚಿನ ಘಟಕಗಳು ಚೀನಾದ ಲಾಕ್‌ಡೌನ್ ನಿಂದಾಗಿ ಮುಚ್ಚಿದ ಪರಿಣಾಮ ಆ್ಯಪಲ್‌ನ ಉತ್ಪಾದನಾ ಸಾಮರ್ಥ್ಯ ಕುಂಠಿತವಾಯಿತು. ಹಾಗಾಗಿ ಆ್ಯಪಲ್ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ನಷ್ಟವನ್ನು ಅನುಭವಿಸುವ ಅಂದಾಜಿತ್ತು.
ಆದರೆ ಅದಕ್ಕೆ ವ್ಯತಿರಿಕ್ತ ಎನ್ನುವಂತೆ ಆ್ಯಪಲ್ 11 ಪ್ರತಿಶತ ಲಾಭಗಳಿಸಿತು. ಅದು ಹಾಗೆಯೇ ಮುಂದುವರೆದು 2020 ರ ಆಗಸ್ಟ್ಗೆ ಸಂಸ್ಥೆ ತನ್ನ ಮಾರುಕಟ್ಟೆ ಮೌಲ್ಯವನ್ನು 65 ಪ್ರತಿಶತ ಹೆಚ್ಚಿಸಿಕೊಂಡು 2 ಟ್ರಿಲಿಯನ್ ಮೌಲ್ಯದ ಸಂಸ್ಥೆಯಾಗಿ ಹೊರಹೊಮ್ಮಿತು.
ಮನೆಕೆಲಸದ ಪರಿಣಾಮ
ಜಗತ್ತು ನಷ್ಟ ಅನುಭವಿಸುತ್ತಿರುವಾಗ ಆ್ಯಪಲ್ ಲಾಭಗಳಿಸಲು ಹಲವಾರು ಕಾರಣಗಳಿವೆ. ಕರೋನದಿಂದಾಗಿ ಹೆಚ್ಚಿನ
ಉದ್ಯೋಗಿಗಳು ಮನೆಯಿಂದಲೇ ಕೆಲಸಮಾಡಬೇಕಾದಂತಹ ಅನಿವಾರ್ಯತೆಗೆ ಸಿಲುಕಿದಾದ ಹೆಚ್ಚಿನವರಿಗೆ ವ್ಯವಸ್ಥಿತವಾಗಿ
ಕಾರ್ಯನಿರ್ವಹಿಸುವ ಲ್ಯಾಪ್‌ಟಾಪ್ ಮೊಬೈಲ್ ಫೋನ್ ಗಳ ಅವಶ್ಯಕತೆ ಇತ್ತು. ಅದಕ್ಕಾಗಿ ಹೆಚ್ಚಿನವರು ಆ್ಯಪಲ್ ಉತ್ಪನ್ನ ಗಳನ್ನು ಖರೀದಿಸಲಾರಂಭಿಸಿದರು. ಜೊತೆಗೆ ಅಮೆರಿಕ ಸರಕಾರ ಕೂಡ ಉದ್ಯಮಗಳಿಗೆ ಸಹಾಯಕ ವಾಗುವಂತಹ
ಹಣಕಾಸಿನ ಸಹಕಾರವನ್ನು ನೀಡಿದ್ದರಿಂದ ಆ್ಯಪಲ್ ಸಂಸ್ಥೆ ಲಾಭಗಳಿಸಲು ಸಹಾಯವಾಯಿತು. ಆದರೆ ಸದ್ಯ ಲಾಭದ
ಹಳಿಯಲ್ಲಿರುವ ಆ್ಯಪಲ್ ಮುಂದೆಯೂ ಹೀಗೆಯೇ ಲಾಭಗಳಿಸುತ್ತದೆ ಎನ್ನುವುದನ್ನು ಖಚಿತವಿಲ್ಲ. ಬಳೆಕೆದಾರನ ಮಾಹಿತಿ ಭದ್ರತೆಯ ವಿಚಾರದಲ್ಲಿ ಆ್ಯಪಲ್ ಸಂಸ್ಥೆೆಯ ಮೇಲೆ ಅಮೆರಿಕ ಮತ್ತು ಯುರೋಪ್‌ನ ಸರಕಾರಗಳು ಮೊಕದ್ದಮೆಗಳನ್ನು ದಾಖಲಿಸಿ ತನಿಖೆ ನಡೆಸುತ್ತಿವೆ.
ಅಮೆರಿಕ ಸರಕಾರ ಆ್ಯಪಲ್‌ಗೆ ಚೀನಾದಲ್ಲಿರುವ ಎಲ್ಲಾಾ ಉತ್ಪಾದನಾ ಘಟಕಗಳನ್ನು ಅಮೇರಿಕಾಕ್ಕೆ ಸ್ಥಳಾಂತರಿಲು ಆಗ್ರಹಿಸು ತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಆ್ಯಪಲ್ ಸಾಕಷ್ಟು ನಷ್ಟ ಸಹ ಅನುಭವಿಸುತ್ತಿದೆ. ಇವೆಲ್ಲವುಗಳನ್ನು ಮೀರಿ ಲಾಭದ ಹಳಿಯಲ್ಲಿ ಸಾಗುವುದು ಆ್ಯಪಲ್‌ಗೆ ಖಂಡಿತ ಸಾಧ್ಯವಿದೆ.