Thursday, 19th September 2024

ಬಿಎಂಡಬ್ಲ್ಯೂ ಐಷಾರಾಮಿ ಕಾರು

ಶಶಿಧರ ಹಾಲಾಡಿ

ಹಾಹಾಕಾರ್‌

ಪ್ರತಿಷ್ಠಿತ ಮತ್ತು ದುಬಾರಿ ಕಾರುಗಳಿಗೆ ಹೆಸರಾಗಿರುವ ಬಿಎಂಡಬ್ಲ್ಯು ಸಂಸ್ಥೆಯು, ಹೊಸ ಮಾದರಿಯ ಕಾರೊಂದನ್ನು
ನವೆಂಬರ್‌ನಲ್ಲಿ ಭಾರತದ ಗ್ರಾಹಕರಿಗೆ ಪರಿಚಯಿಸಿದೆ. ಸ್ಪೋರ್ಟ್ಸ್‌ ಆ್ಯಕ್ವಟಿ ವೆಹಿಕಲ್ (ಎಸ್‌ಎವಿ) ಆಗಿರುವ ಈ ಹೊಸ
ಕಾರಿನ ವಿಶೇಷತೆಗಳೇನು?

ಮೊದಲೇ ತಿಳಿದುಕೊಳ್ಳಿ- ಈ ಕಾರಿನ ಬೆಲೆ ಸುಮಾರು ರು.99,90,000, ಅಂದರೆ ಹೆಚ್ಚು ಕಮ್ಮಿ ಒಂದು ಕೋಟಿ ರುಪಾಯಿ. ಇದರ ಯಾರಕರು ಬಿ.ಎಂ.ಡಬ್ಲ್ಯು. ಈಗ ಅಂದರೆ, ಇದೇ ನವೆಂಬರ್‌ನಲ್ಲಿ ಭಾರತದಲ್ಲಿ ಇದನ್ನು ‘ಬಿಎಂಡಬ್ಲ್ಯು ಎಕ್ಸ್ 3ಎಂ’ ಎಂಬ ಹೆಸರಿನಿಂದ ಪರಿಚಯಿಸಲಾಗಿದ್ದು, ಸಿಬಿಯು ಮುಖಾಂತರ ಭಾರತದ ಬಿಎಂಡಬ್ಲ್ಯು ಡೀಲರ್‌ಗಳಲ್ಲಿ ಲಭ್ಯ.

ಈ ಕಂಪೆನಿಯ ಐಷಾರಾಮಿ ಕಾರನ್ನೇ ಖರೀದಿಸಬೇಕು ಎಂಬ ಅಭಿಮಾನಿಗಳಿಗೆ, ಅಷ್ಟು ಹಣ ಹೊಂದಿಸುವ ಅನುಕೂಲ ಇರು ವವರಿಗೆ, ವಿಶೇಷವಾಗಿ ಭಾರತದ ಕಾರುತ್ಸಾಹಿ ಗ್ರಾಹಕರಿಗೆ ಇದನ್ನು ಪರಿಚಯಿಸಲಾಗಿದೆ. ಇದರ ವಿಶೇಷತೆಗಳು ಹಲವು. ಮಧ್ಯಮ ವರ್ಗದ ಸ್ಪೋರ್ಟ್ಸ್‌ ಆ್ಯಕ್ವಟಿ ವೆಹಿಕಲ್ (ಎಸ್‌ಎವಿ) ಇದಾ ಗಿದ್ದು, ಇತ್ತೀಚಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇದರ ಕಾರ್ಯಕ್ಷಮತೆಯನ್ನು ರೂಪಿಸಲಾಗಿದೆ.

ಇದರ ಹೆಸರೇ ಸ್ಪೋಟ್ಸ್‌ ಆ್ಯಕ್ಟಿವಿಟಿ ವೆಹಿಕಲ್, ಸಹಜವಾಗಿ ವೇಗಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. 4.2 ಎರಡು ಸೆಕೆಂಡುಗಳಲ್ಲಿ ಈ ಕಾರು 100 ಕಿಮೀ ವೇಗವನ್ನು ಪಡೆದುಕೊಳ್ಳಬಲ್ಲದು ಮತ್ತು ಒಟ್ಟಾರೆಯಾಗಿ ಗಂಟೆಗೆ 250 ಕಿಮೀ ವೇಗದಲ್ಲಿ ಈ ಕಾರು ಚಲಿಸಬಲ್ಲದು. ಇದರ ಕಾರ್ಯಕ್ಷಮತೆ, ವೇಗ ಮತ್ತು ಸೌಕರ್ಯಗಳನ್ನು ರೂಪಿಸುವಲ್ಲಿ ಹಲವು ಹೊಸತನಗಳನ್ನು ಅಳವಡಿಸಲಾಗಿದೆ.

ಇತ್ತೀಚೆಗಿನ ಎಂ ಟ್ವಿನ್‌ಟವರ್ ಟರ್ಬೋ ತಂತ್ರಜ್ಞಾನವನ್ನು ಉಪಯೋಗಿಸ ಲಾಗಿದ್ದು, 3 ಲೀಟರ್, 6 ಸಿಲಿಂಡರ್ ಇನ್ ಲೈನ್ ಪೆಟ್ರೋಲ್ ಇಂಜನ್‌ನ್ನು ಇದರಲ್ಲಿ ಅಳವಡಿಸಲಾಗಿದ್ದು, ಪಿಕ್ ಅಪ್ ಮತ್ತು ವೇಗಕ್ಕೆ ಸಹಕಾರಿ. ಇದರ ಲ್ಲಿರುವ ಎಂ ಸ್ಟೆಪಟ್ರಾನಿಕ್ ಆಟೊಮ್ಯಾಟಿಕ್ ಟ್ರಾನ್ಸ್ಮಿಶನ್ ವ್ಯವಸ್ಥೆಯು ನಾಲ್ಕೂ ಚಕ್ರಗಳ ವೇಗಕ್ಕೆ ಶಕ್ತಿ ತುಂಬುತ್ತದೆ. ಈ ಕಾರಿನಲ್ಲಿ ಅಳವಡಿಸಿರುವ ಇಂಜನ್, 480 ಎಚ್‌ಪಿ ಶಕ್ತಿಯನ್ನು ಮತ್ತು 600ಎನ್‌ಎಂ ಟಾರ್ಕ್‌ನ್ನು ನೀಡ ಬಲ್ಲದು.

ಸುರಕ್ಷತೆಗೆ ಆದ್ಯತೆ
ಇದು ಸ್ಪೋರ್ಟ್ಸ್‌ ಆ್ಯಕ್ಟಿಟ್ವೆಸ್ಹಿಕಲ್ ಎಂದೇ ಗುರುತಿಸಲ್ಪಟ್ಟಿರುವುದರಿಂದಾಗಿ, ಸವಾರಿಯ ಸಮಯದಲ್ಲಿ ಅವಶ್ಯ ಎನಿಸಿರುವ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ ಫ್ರಂಟ್, ಸೈಡ್ ಮತ್ತು ಹೆಡ್ ಏರ್‌ಬ್ಯಾಗ್‌ಗಳಿದ್ದು, ಡೈನಮಿಕ್ ಕಂಟ್ರೋಲ್ ‌ನ್ನು ಅಳವಡಿಸಲಾಗಿದೆ. ಬ್ರೇಕ್ ಕಂಟ್ರೋಲ್, ಡೈನಮಿಕ್ ಬ್ರೇಕ್ ಕಂಟ್ರೋಲ್, ಡ್ರೈ ಬ್ರೇಕಿಂಗ್ ಫಂಕ್ಷನ್, ಬ್ರೇಕಿಂಗ್ ಫಂಕ್ಷನ್ ಕ್ರೂಸ್ ಕಂಟ್ರೋಲ್ ಮೊದಲಾದ ವಿಶೇಷ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಇಪ್ಪತ್ತು ಇಂಚು ಎಂ ಲೈಟ್ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದ್ದು, ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಜೋಡಿಸಲಾಗಿದೆ. ಕ್ಯಾಬಿನ್ ವಿಷಯಕ್ಕೆ ಬಂದರೆ, ವಿದ್ಯುನ್ಮಾನ ಜೋಡಣೆಯ ಸ್ಪೋರ್ಟ್ಸ್‌ ಸೀಟುಗಳು, ಮೆಮೊರಿ ಅಡ್ಜಸ್ಟ್‌‌ಮೆಂಟ್, ಲೆದರ್ ಅಪ್ ‌ಹೋಲ್‌ಸ್ಟ್ರಿ, 12.3 ಇಂಚು ಟಚ್‌ಸ್ಕ್ರೀನ್ ಡಿಸ್ಪ್ಲೇ, ಮಲ್ಟಿ ಫಂಕ್ಷನ್ ಸ್ಟೀರಿಂಗ್, ವೈರ್‌ಲೆಸ್ ಚಾರ್ಜಿಂಗ್, ಹೈಫೈ ಸ್ಪೀಕರ್ ವ್ಯವಸ್ಥೆ, ಪ್ಯಾನೊರಮಿಕ್ ಸನ್‌ರೂಫ್ ಮೊದಲಾದ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಈಗಾಗಲೇ ನಮ್ಮ ದೇಶದ ರಸ್ತೆಗಳಲ್ಲಿ ಚಲಿಸುತ್ತಿರುವ ‘ಎಂ’ ಸರಣಿಯ ಕಾರುಗಳಾದ ಬಿಎಂಡಬ್ಲ್ಯು ಎಕ್ಸ್‌ 5 ಎಂ, ಎಕ್ಸ್‌ 6 ಎಂ, ಎಂ3, ಎಂ4 ಮೊದಲಾದ ವಾಹಗಳ ಪಟ್ಟಿಗೆ ಬಿಎಂಡಬ್ಲ್ಯು ಎಕ್ಸ್‌3 ಎಂ, ಹೊಸ ಸೇರ್ಪಡೆಯಾಗಿದ್ದು, ಕಾರು ಪ್ರಿಯರ ಗಮನ ಸೆಳೆಯುತ್ತಿದೆ.

ಟೊಯೋಟಾದಿಂದ ಹೈಡ್ರೋಜನ್ ಕಾರ್

ಹೈಡ್ರೋಜನ್ ಬಳಸಿ ರಾಕೆಟ್ ಹಾರಿಸಿದಂತೆಯೇ, ಕಾರುಗಳನ್ನು ಸಹ ಓಡಿಸಬಹುದು. ಹೈಡ್ರೋಜನ್ನ್ನು ಇಂಧನವನ್ನಾಗಿ ಉಪಯೋಗಿಸಿ, ಕಾರುಗಳನ್ನು ತಯಾರಿಸಿ, ಜನಪ್ರಿಯಗೊಳಿಸಲು ಪ್ರಯತ್ನಿಸಿದ ಸಂಸ್ಥೆ ಎಂದರೆ ಜಪಾನಿನ ಟೊಯೋಟಾ. ಕಳೆದ ಆರು ವರ್ಷಗಳಲ್ಲಿ, ಇಂತಹ ಸುಮಾರು 11,000 ಕಾರುಗಳನ್ನು ಮಾರಾಟ ಮಾಡಲಾಗಿದೆ. ಟೊಯೋಟಾ ಮಿರಾಯ್ ಹೆಸರಿನ ಇದರ ಬೆಲೆ ಸುಮಾರು 69,000 ಡಾಲರ್ (ರು.51,00,000).

ಹುಂಡಾಯ್ ನೆಕ್ಸೋ ಮತ್ತು ಹೋಂಡಾ ಕ್ಲಾರಿಟಿ ಕಾರುಗಳು ಸಹ ಹೈಡ್ರೋಜನ್‌ನ್ನು ಇಂಧನವನ್ನಾಗಿ ಬಳಸುತ್ತವೆ. ಈಗ ಟೊಯೋಟಾ ಸಂಸ್ಥೆಯು ಹೈಡ್ರೋಜನ್ ಕಾರಿನ ಎರಡನೆಯ ತಲೆಮಾರಿನ ವಾಹನವನ್ನು ಗ್ರಾಹಕರಿಗೆ ಪರಿಚಯಿಸುವತ್ತ ಗಮನ ಕೊಟ್ಟಿದೆ. ಇದರ ವಿಶೇಷತೆ ಎಂದರೆ, ಕಡಿಮೆ ಬೆಲೆ, ಹೆಚ್ಚು ಆಕರ್ಷಕ, ಹೆಚ್ಚು ದೂರ ಕ್ರಮಿಸುವ ತಂತ್ರಜ್ಞಾನ. ಟೊಯೋಟಾ ಹೈಡ್ರೋಜನ್ ಕಾರಿನ ಹಿಂದಿನ ಮಾದರಿಗಿಂತ ಇದು ಆರು ಇಂಚು ಉದ್ದವಿದ್ದು, ಪ್ರಯಾಣಿಕರ ಸುಖಾಸೀನಗಳಿಗೆ ಮತ್ತು ಇತರ ಸೌಲಭ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಹೈಡ್ರೋಜನ್‌ನ್ನು ಇಂಧನವನ್ನಾಗಿ ಬಳಸುವ ಕಾರುಗಳನ್ನು ತಯಾರಿಸಿ, ಮಾರುಕಟ್ಟೆಗೆ ತರುವುದು ಒಂದು ಸಾಹಸವೇ ಸರಿ. ಎರಡನೆಯ ತಲೆಮಾರಿನ ಟೊಯೋಟಾ ಮಿರಾಯ್ ಕಾರಿಗೆ ಒಮ್ಮೆ ಇಂಧನ ತುಂಬಿಸಿದರೆ ಸುಮಾರು 650 ಕಿಮೀ ಚಲಿಸಬಲ್ಲದು. ಅಗತ್ಯ ಬಿದ್ದಾಗ ಇಂಧನ ತುಂಬಿಸುವ ವ್ಯವಸ್ಥೆಯೇ ಈ ಕಾರಿನ ಪ್ರಮುಖ ಸಮಸ್ಯೆ ಎಂದರೂ ತಪ್ಪಿಲ್ಲ.

ಅದಕ್ಕಾಗಿ, ಅಲ್ಲಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಹೈಡ್ರೊಜನ್ ಕಾರನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಟೊಯೋಟಾ ಗಮನ ಹರಿಸಿದೆ. ವಿದ್ಯುತ್ ಕಾರುಗಳಿಗೆ ಪರ್ಯಾಯವಾಗಿ ಇಂತಹ ಕಾರುಗಳನ್ನು ರೂಪಿಸುವತ್ತಲೂ ಗಮನ ಹರಿಸಲಾಗಿದೆ.