Friday, 13th December 2024

ಬ್ರೇಕ್‌ ಫೇಲ್ಯೂರ್‌ ಟೀಸರ್‌ ರಿಲೀಸ್‌

ಕುತೂಹಲಕಾರಿ ಕಥಾಹಂದರದ ಬ್ರೇಕ್ ಫೇಲ್ಯೂರ್ ಇದೀಗ ಬಿಡುಗಡೆಯ ಹಂತ ತಲುಪಿದ್ದು, ಸದ್ಯ ಈ ಚಿತ್ರದ ಟೀಸರ್  ಡುಗಡೆಯಾಗಿದೆ.

ಸಿನಿಪ್ರಿಯರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಜತೆಗೆ ಚಿತ್ರದ ಎರಡು ಹಾಡುಗಳೂ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮನಸೂರೆಗೊಳ್ಳುತ್ತಿವೆ. ನಾಲ್ಕು ಜನ ಸ್ನೇಹಿತರು ಒಂದು ಪ್ರಾಜೆಕ್ಟ್ ವರ್ಕ್ ಕಂಪ್ಲೀಟ್ ಮಾಡಲೆಂದು ಕಾಡಿಗೆ ಹೋದಾಗ ಅವರಿಗೆ ವಿಚಿತ್ರ ವ್ಯಕ್ತಿಯೊಬ್ಬ ಎದುರಾಗುತ್ತಾರೆ. ಹೀಗೆ ಬಂದವನೇ ಈ ನಾಲ್ವರನ್ನು ಹತ್ಯೆ ಮಾಡಲು ಮುಂದಾಗುತ್ತಾನೆ.

ಇದಕ್ಕೆ ಕಾರಣವೇನು ಎನ್ನುವುದೇ ಬ್ರೇಕ್ ಫೇಲ್ಯೂರ್ ಚಿತ್ರದ ಒನ್‌ಲೈನ್ ಸ್ಟೋರಿ. ಕುತೂಹಲಕಾರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ದಾಂಡೇಲಿ ಸುತ್ತಮುತ್ತಲಿನ ಅರಣ್ಯದಲ್ಲಿ ಸುಮಾರು 35 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಅದಿತ್ ನವೀನ್ ನಾಯಕನಾಗಿ ಕಾಣಿಸಿಕೊಂಡಿದ್ದು, ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ನಿರ್ಮಾಪಕರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್ ಚಿತ್ರವಾಗಿದ್ದು, ನಾಲ್ವರು ಬೇಜವಾಬ್ದಾರಿ ಹುಡುಗರು, ಅವರು ಒಂದು ಡಾಕ್ಯುಮೆಂಟರಿ ಶೂಟ್ ಮಾಡಿಕೊಂಡು ಬರಲು ದಾಂಡೇಲಿಯ ಕಾಡಿಗೆ ಹೋದಾಗ ಅಲ್ಲಿ ಅವರಿಗೆದುರಾಗುವ ಭಯಾನಕ ವ್ಯಕ್ತಿಯೊಬ್ಬ ಇವರನ್ನು ಕೊಲ್ಲಲು ಮುಂದಾಗುತ್ತಾನೆ. ಒಬ್ಬೊಬ್ಬರೇ ಸಾಯುತ್ತಾರೆ.
ಆತ ಇವರನ್ನೇ ಏಕೆ ಟಾರ್ಗೆಟ್ ಮಾಡುತ್ತಾನೆ, ಎನ್ನುವುದೇ ಚಿತ್ರದ ಸಸ್ಪೆನ್ಸ್‌. ನೀರು ಮತ್ತು ಆಹಾರ ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ ಅದಿತ್ ನವೀನ್.

ಒಂದು ಸಿನಿಮಾ ನಿರ್ಮಾಣ ಮಾಡಬೇಕೆನ್ನುವುದು ನನ್ನ ಆಶಯವಾಗಿತ್ತು. ಇದೇ ಸಂದರ್ಭದಲ್ಲಿ ನಿರ್ದೇಶಕ ನವೀನ್ ಹೇಳಿದ
ಈ ಕಥೆ ಇಷ್ಟವಾಗಿ ಸಣ್ಣದಾಗಿ ಚಿತ್ರವನ್ನು ಆರಂಭಿಸಿದೆವು. ನಂತರ ಅದು ದೊಡ್ಡದಾಯಿತು. ಕಲಾವಿದರೆಲ್ಲರ ಸಹಕಾರದಿಂದ ಚಿತ್ರ ರೆಡಿಯಾಗಿದ್ದು, ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ಹೇಳಿದರು ನಿರ್ಮಾಪಕ ಡಾ.ಅಬ್ದುಲ್ ಘನಿ.

ನಮ್ಮ ಜೀವನದಲ್ಲಿ ಬ್ರೇಕ್ ಫೇಲ್ಯೂರ್ ಆಗಿರುತ್ತೆ, ಅದೇನೆಂದು ಈ ಚಿತ್ರದಲ್ಲಿ ಹೇಳಿದೆ. ದಟ್ಟ ಕಾಡಿನಲ್ಲಿ ನಮಗೆ ಆಹಾರ, ನೀರಿನ ಬೆಲೆ ಏನೆಂದು ಗೊತ್ತಾಯ್ತು. ಇದು ನನ್ನ ಐದನೇ ಚಿತ್ರ, ರಿಲೀಸ್ ಆಗುತ್ತಿರುವ ಮೊದಲ ಚಿತ್ರ ಎಂದು ಸಂತಸದಿಂದ ನುಡಿದರು ನಾಯಕಿ ಕೃತಿ ಗೌಡ.

ಅಂಜಲಿ ರೇಚಲ್ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ಉಗ್ರಂ ರವಿ ಆಗುಂತಕನಾಗಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ರಿಷಿಕೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೆವಿನ್ ಎಂ. ಹಾಗೂ ಅಭಿಷೇಕ್ ರಾಯ್ ಈ ಚಿತ್ರದ 2 ಹಾಡುಗಳಿಗೆ ಸಂಗೀತ
ನೀಡಿದ್ದಾರೆ.