Thursday, 12th December 2024

ಸ್ನೇಹದ ಜತೆ ಸಂದೇಶದ ಕಥೆಯ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ

ಚಂದನವನದಲ್ಲಿ ವಿಭಿನ್ನ ಶೀರ್ಷಿಕೆಯ ಚಿತ್ರಗಳು ಸೆಟ್ಟೇರಿದ್ದು ತೆರೆಗೆ ಬರಲು ಸಿದ್ಧವಾಗಿವೆ. ಅಂತಹ ಚಿತ್ರಗಳಲ್ಲಿ ಚೆಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವೂ ಒಂದು. ಟೈಟಲ್ ಕೇಳಿದಾಕ್ಷಣ ಇದೊಂದು ಕಾಮಿಡಿ ಕಥೆಯ ಚಿತ್ರವೇ ಇರಬಹುದು ಎನ್ನಿಸುತ್ತದೆ. ಇಲ್ಲಿ ಹಾಸ್ಯದ ಜತೆಗೆ, ನವಿರಾದ ಪ್ರೇಮಕಥೆ, ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್ ಸ್ಟೋರಿಯೂ ಇದೆ. ಈ ಚಿತ್ರ ನಿರ್ಮಾಣ ಮಾಡಲು ಒಂದು ಕಾರಣವೂ ಇದೆ. ಅದೇನೆಂಬುದರ ಬಗ್ಗೆ ಚಿತ್ರದ ನಿರ್ಮಾಪಕ ಸೆವೆನ್‌ರಾಜ್ ವಿ.ಸಿನಿಮಾಸ್‌ ನೊಂದಿಗೆ ಮನದಾಳ ಹಂಚಿಕೊಂಡಿದ್ದಾರೆ.

ವಿ.ಸಿನಿಮಾಸ್ : ಚಿತ್ರದ ಶೀರ್ಷಿಕೆ ಕೇಳಲು ವಿಭಿನ್ನವಾಗಿದೆಯಲ್ಲ ?
ಸೆವೆನ್ ರಾಜ್ : ಸ್ವಲ್ಪ ಬದಲಾವಣೆ ಇರಲಿ ಎಂದು ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಎಂಬ ಶೀರ್ಷಿಕೆ ಇಡಲಾ ಗಿದೆ. ಕೆಲವರಿಗೆ ಸ್ನೇಹಿತರೇ ಸರ್ವಸ್ವ. ಅಂತಹ ಸ್ನೇಹಿತರಲ್ಲಿ ಕೆಲವರು ಒಳಿತನ್ನು ಬಯಸಿದರೆ, ಕೆಲವರು ದ್ರೋಹ ಬಗೆಯುತ್ತಾರೆ. ನನ್ನ ಜೀವನದಲ್ಲಿ ಆಗಿದ್ದೂ ಇದೆ. ನನ್ನ ಸ್ನೇಹಿತರೆ ನನಗೆ ಮೋಸ ಮಾಡಿದರು. ನನ್ನ ಆಗಿನ ಸ್ಥಿತಿಯನ್ನು ಕಂಡು ನಕ್ಕಿದ್ದಾರೆ. ಅದನ್ನೇ ಸವಾಲಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದೇನೆ. ದೋಸ್ತಿಯ ದೋಖದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಜತೆಗೆ ಒಳ್ಳೆಯ ಮನರಂಜನೆಯೂ ಚಿತ್ರದಲ್ಲಿದೆ.

ವಿ.ಸಿ : ಚಿತ್ರದ ಕಥೆ ಹುಟ್ಟಿದ್ದು ಹೇಗೆ ?
ಸೆವೆನ್‌ರಾಜ್ : ನಿರ್ದೇಶಕ ಆಸ್ಕರ್ ಕೃಷ್ಣ ಮೊದಲು ಕಿರುಚಿತ್ರ ನಿರ್ದೇಶನ ಮಾಡಿದರು. ಆ ಬಳಿಕ ಕಥೆಯೊಂದನ್ನು ರಚಿಸಿ ನನಗೆ ಹೇಳಿದರು. ಕಥೆ ನನಗೆ ಹಿಡಿಸಿತು. ಅದು ನನ್ನ ಜೀವನದಲ್ಲಿ ನಡೆದ ಘಟನೆಗಳಿಗೆ ಸಮೀಪವಾಗಿತ್ತು. ಹಾಗಾಗಿ ಸಿನಿಮಾ ನಿರ್ಮಾಣ ಮಾಡಲು ನಿರ್ಧರಿಸಿದೆ. ಅಂದುಕೊಂಡಂತೆ ಚಿತ್ರವೂ ಮೂಡಿಬಂದಿದೆ. ನಾನು ಕೂಡ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದೇನೆ.

ವಿ.ಸಿ : ಚಿತ್ರದಲ್ಲಿನ ನಿಮ್ಮ ಪಾತ್ರ?

ಸೆವೆನ್‌ರಾಜ್ : ಈ ಚಿತ್ರದಲ್ಲಿ ನಾನು ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ನನ್ನದು ಎಂಎಲ್‌ಎ ಪಾತ್ರ. ಈ ಸಮಾಜದಲ್ಲಿ ಜನಪ್ರತಿನಿಧಿ ಎನಿಸಿ ಕೊಂಡವರು ಹೇಗೆ ದರ್ಪ ತೋರುತ್ತಾ, ಜನರಿಗೆ ಮೋಸ ಮಾಡುತ್ತಾರೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ನಾನು ಈ ಹಿಂದೆ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿಯೂ ನೆಗೆಟಿವ್ ರೋಲ್‌ನಲ್ಲಿಯೇ ಬಣ್ಣ ಹಚ್ಚಿದ್ದೇನೆ.

ವಿ.ಸಿ: ಈ ಸಿನಿಮಾ ನಿರ್ಮಾಣ ಮಾಡಲು ಕಾರಣ ?
ಸೆವೆನ್ ರಾಜ್ : ನಾನು ಕಡುಬಡತನದಲ್ಲಿ ಹುಟ್ಟಿ ಬೆಳೆವದವನು. ನನ್ನ ತಂದೆ ಕಲಾವಿದರು. ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂತೆಯೇ ನಾನು ಕೂಡ ಕಲಾವಿದನಾಗಬೇಕು ಎಂದುಕೊಂಡೆ. ಅದರಂತೆ ರುದ್ರತಾಂಡವ, ಅನುಕೂಲಕ್ಕೊಬ್ಬ ಗಂಡ.. ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದೆ. ಒಂದು ಚಿತ್ರದಲ್ಲಿ ಖಳನಟನಾಗಿ ನಟಿಸಲು ತೆರಳಿದ್ದೆ. ಸಾಹಸ ದೃಶ್ಯಕ್ಕಾಗಿ ರೆಡಿಯಾಗಿ ನಿಂತಿದ್ದೆ. ಅದೇ ವೇಳೆಗೆ ಚಿತ್ರದ ನಾಯಕ ಬಂದು ನನ್ನನ್ನು ಚಿತ್ರದಿಂದ ಹೊರಗೆ ಕಳುಹಿಸು ವಂತೆ ಹೇಳಿದರು. ಅದು ನನಗೆ ತುಂಬಾ ಬೇಸರ ತಂದಿತು. ಆ ಕ್ಷಣವೇ ನಾನು ಅಲ್ಲಿಂದ ಹೊರ ನಡೆದೆ. ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಚೆನ್ನೈನಲ್ಲಿ ವ್ಯಾಸಂಗ
ಮಾಡುವಾಗ ರಜನಿಕಾಂತ್ ಅವರನ್ನು ಭೇಟಿಯಾದೆ.

ಅವರು ನನ್ನನ್ನು ಸಾಧನೆಯತ್ತ ಸಾಗಲು ಸ್ಫೂರ್ತಿಯಾದರು. ನನ್ನಂತಹ ಕಲಾವಿದರ ಸಂಕಷ್ಟವನ್ನು ಅರಿತೆ. ಅವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದೆ. ಆಸ್ಕರ್ ಕೃಷ್ಣ, ಲೋಕೆಂದ್ರ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಗೌರಿ ನಾಯರ್ ಅಭಿನಯಿಸಿದ್ದಾರೆ. ಮುಂದೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಗುರಿ ಇದೆ.

***

ನಮ್ಮದು ತುಂಬು ಕುಟುಂಬ. ನಾನು, ನಮ್ಮ ತಂದೆ ತಾಯಿಗೆ ಏಳನೇಯ ಪುತ್ರ. ಹಾಗಾಗಿ ನಮ್ಮ ತಂದೆ ನನಗೆ ನಂಎಂದು ಹೆಸರಿಟ್ಟರು. ಜಾತಿ, ಧರ್ಮದ ತಾರತಮ್ಯ ನಮ್ಮನ್ನು ಕಾಡಬಾರದು ಎಂದು ನನಗೆ ಈ ಹೆರಿಟ್ಟರು. ನಾನು ಉದ್ಯಮ ಆರಂಭಿಸಿದ ಬಳಿಕ ಸೆವೆನ್‌ರಾಜ್ ಎಂದು ನನ್ನ ಹೆಸರನ್ನು ಬದಲಾಯಿಸಿ ಕೊಂಡೆ. ನಾನು ಸದಾ ಬಿಳಿ ಅಂಗಿ, ಕೆಂಪು ಟೈ ತೊಡುತ್ತೇನೆ ಹಾಗಾಗಿಯೇ ನನ್ನನ್ನು ರೆಡ್ ಅಂಡ್ ವೈಡ್ ಸೆವೆನ್ ರಾಜ್ ಎಂದು ಕರೆಯುತ್ತಾರೆ.