Friday, 13th December 2024

69 ವೀವ್ಸ್‌ಗೆ ಮೆಚ್ಚುಗೆ

ನಿರ್ದೇಶಕ ಡಿ.ಹರಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ 69 ವೀವ್ಸ್ ಕಿರುಚಿತ್ರ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಬರೆದಿದೆ.

ದೇಶ, ವಿದೇಶಗಳ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ೬೯ ವೀವ್ಸ್ ವಿವಿಧ ವಿಭಾಗ ಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡಿದೆ. ವಿಶೇಷ ಎಂದರೆ ೬೯ ವೀವ್ಸ್ ಕಿರುಚಿತ್ರ ಅಮೇಜಾನ್ ಪ್ರೈಮ್, ಟಾಟಾ ಪ್ಲೇ ಬಿಂಜ್, ನಮ್ಮ ಫ್ಲಿಕ್ಸ್ ಓಟಿಟಿ ಆಪ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಒಂದು ಕಿರುಚಿತ್ರ ಇಷ್ಟು ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿರುವ ಇದೇ ಮೊದಲು.

ಸ್ವಾಮಿ ಮೈಸೂರು ಛಾಯಾಗ್ರಹಣ, ಪುಷ್ಕರ್ ಗಿರಿಗೌಡ ಸಂಕಲನ, ಆನಂದ್ ರಾಜಾ ವಿಕ್ರಮ್ ಸಂಗೀತ ಸಂಯೋ ಜನೆ ೬೯ ವೀವ್ಸ್‌ಗಿದೆ. ಸಸ್ಪೆನ್ಸ್- ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ಈ ಕಿರುಚಿತ್ರ ೨೬ ನಿಮಿಷ ಅವಧಿಯಿದ್ದು, ತಾಂತ್ರಿಕವಾಗಿ ಅದ್ಧೂರಿ ಯಾಗಿ ಮೂಡಿಬಂದಿದೆ.

ಪ್ರಿಯಾಂಕಾ.ಕೆ ನಿರ್ಮಿಸಿರುವ ಈ ಕಿರುಚಿತ್ರದಲ್ಲಿ ರಂಗಭೂಮಿ ಕಲಾವಿದರಾದ ಶಶಾಂಕ್
ಶರ್ಮಾ, ರೋವನ್ ಪೂಜಾರಿ, ನಳೀನ್ P ಅರಕಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.