Tuesday, 15th October 2024

ಅಬ್ಬಬ್ಬಾ ಟ್ರೇಲರ್‌ಗೆ ಕಿಚ್ಚನ ಮೆಚ್ಚುಗೆ

ಹೊಸಬರ ಚಿತ್ರಕ್ಕೆ ಶುಭಕೋರಿದ ಸುದೀಪ್‌

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳಿಗೆ ಕಿಚ್ಚ ಸುದೀಪ್ ಸದಾ ಬೆಂಬಲ ನೀಡು ತ್ತಾರೆ. ಅಂತೆಯೇ ಸುದೀಪ್ ವಿಭಿನ್ನ ಶೀರ್ಷಿಕೆಯ, ಮನರಂಜನಾತ್ಮಕ ಅಬ್ಬಬ್ಬಾ… ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸುದೀಪ್ ಅವರ ಟ್ವಿಟರ್ ವಾಲ್‌ನಲ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಬ್ಬಬ್ಬಾ… ಜುಲೈ ಒಂದರಂದು ತೆರೆಗೆ ಬರಲಿದೆ. ತುಂಬಾ ದಿನಗಳ ನಂತರ ಒಂದು ಅದ್ಭುತವಾದ ಕಾಮಿಡಿ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಈ ಹಿಂದೆ ಬಂದ ಕಾಮಿಡಿ ಚಿತ್ರ ಗಳಿಂತಲೂ ವಿಭಿನ್ನವಾಗಿದೆ. ಯೂತ್ ಫುಲ್ ಕಂಟೆಂಟ್ ಇರುವ ಈ ಚಿತ್ರವನ್ನು ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿ, ನಿರ್ದೇಶಿಸಿ ರುವುದು ಸಂತಸ ತಂದಿದೆ ಎಂದು ಸುದೀಪ್ ಹೇಳಿದ್ದಾರೆ.

ಮೀರಾಮಾರ್ ಸಂಸ್ಥೆಯ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಲಿಖಿತ್ ಶೆಟ್ಟಿ ನಾಯಕನಾಗಿ ನಟಿಸಿರುವ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಕಂಗೊಳಿಸಿದ್ದಾರೆ. ಜತೆಗೆ ಹಲವು ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿ ನಯಿಸಿದ್ದಾರೆ. ಕೆ.ಆರ್.ಜಿ ಸಂಸ್ಥೆಯ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.