ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ವಿಭಿನ್ನ ಗೆಟಪ್ ತಾಳಿದ್ದು ಶೋಕಿ ವಾಲನಾಗಿ ಬರುತ್ತಿದ್ದಾರೆ. ಹೌದು, ಅಜಯ್ ಈ ಹಿಂದೆ ಎಂದು ಕಂಡಿರದ ಪಾತ್ರದಲ್ಲಿ ಈ ಬಾರಿ ಮಿಂಚುತ್ತಿದ್ದಾರೆ.
ಪಕ್ಕಾ ಹಳ್ಳಿ ಹುಡುಗನಾಗಿ ಅಜಯ್ ಕಂಗೊಳಿಸಲಿದ್ದಾರೆ. ಶೋಕಿವಾಲ ಶೀರ್ಷಿಕೆ ಯೇ ಹೇಳುವಂತೆ ಇದು ಕಾಮಿಡಿ ಕಚಗುಳಿ ಇಡುವ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಟ್ರೇಲರ್ ಇದಕ್ಕೆ ಪುಷ್ಠಿ ನೀಡಿವೆ. ವಿಭಿನ್ನವಾಗಿಯೂ ಮೂಡಿಬಂದಿವೆ. ಹಾಗಂತ ಶೋಕಿವಾಲ ಕಾಮಿಡಿಗೆ ಸೀಮಿತವಾಗಿಲ್ಲ, ಇಲ್ಲಿ ಲವ್ ಇದೆ, ಸೆಂಟಿಮೆಂಟ್, ಎಮೋಷನ್, ಆಕ್ಷನ್ ಹೀಗೆ ಎಲ್ಲಾ ಅಂಶಗಳು ಅಡಕವಾಗಿವೆ.
ಶೋಕಿವಾಲ ಹಳ್ಳಿ ಸೊಗಡಿನ ಕಥೆಯನ್ನು ಒಳಗೊಂಡಿದ್ದು ಅಜಯ್ ಮಂಡ್ಯದ ಹೈದನಾಗಿ ಬಣ್ಣಹಚ್ಚಿದ್ದಾರೆ. ಗ್ರಾಮೀಣ ಭಾಷೆಯಲ್ಲಿಯೇ ಡೈಲಾಗ್ ಹೊಡೆದು ರಂಜಿಸಿದ್ದಾರೆ. ಈ ಚಿತ್ರ ಅಜಯ್‌ಗೆ ಬಿಗ್ ಬ್ರೇಕ್ ನಿಡುವ ನಿರೀಕ್ಷೆ ಇದೆ.
ಹಳ್ಳಿ ಹೈದ ಅಜಯ್: ಈ ಹಿಂದೆ ಅಜಯ್ ರಾವ್ ಲವ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿದ್ದರು,. ಪ್ರೇಕ್ಷಕರನ್ನು ರಂಜಿಸಿದ್ದರು. ಈಗ ಮೊದಲ ಬಾರಿಗೆ ಹಳ್ಳಿ ಹುಡುಗನಾಗಿ ತೆರೆಗೆ ಎಂಟ್ರಿಕೊಡುತ್ತಿದ್ದಾರೆ. ಬಣ್ಣ ಬಣ್ಣದ ಅಂಗಿ ತೊಟ್ಟು ಶೋಕಿ ವಾಲನಾಗಿ ಕಂಗೊಳಿಸಲಿದ್ದಾರೆ. ಇದು ಹಳ್ಳಿಯಲ್ಲಿ ನಡೆಯುವ ಕಥೆ. ಆತ ತಾಯಿಯ ಪ್ರೀತಿಯ ಮಗ,ತನ್ನೂರಲ್ಲಿ ಆತ ಆಡಿದ್ದೇ ಆಟ. ಹೀಗಿರುವಾಗಲೇ ಆತನಿಗೆ ಯುವತಿಯ ಮೇಲೆ ಪ್ರೀತಿ ಮೂಡುತ್ತದೆ. ಈತನನ್ನು ಮೆಚ್ಚಿದವರೆಲ್ಲಾ ಕೈಕೊಟ್ಟು ಹೋದವರೆ. ನಾಯಕಿಯನ್ನು ನೋಡಿದ ಮೊದಲ ನೋಟದಲ್ಲೇ ನಾಯಕನಿಗೆ ಪ್ರೇಮಾಂಕುರವಾಗು ತ್ತದೆ. ಅಲ್ಲಿಂದ ಆತನ ಜೀವನವೇ ಬದಲಾಗುತ್ತದೆ.
ಕೌಟುಂಬಿಕ ಕಥೆ: ಮೊದಲೇ ಹೇಳಿದ ಹಾಗೆ ಶೋಕಿವಾಲ ಕಾಮಿಡಿಗೆ ಸೀಮಿತವಾಗಿಲ್ಲ, ಪ್ರೇಕ್ಷಕರು ಬಯಸುವ ಎಲ್ಲಾ ಅಂಶಗಳು ಚಿತ್ರದ ಕಥೆಯಲ್ಲಿ ಅಡಕವಾಗಿವೆ. ಅಜಯ್ ಡ್ಯಾನ್ಸ್‌ಗೂ ಸೈ, ಆಕ್ಷನ್‌ಗೂ ಸೈ. ಚಿತ್ರದಲ್ಲಿ ಅದ್ಭುತ ಆಕ್ಷನ್ ದೃಶ್ಯಗಳಿವೆ, ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಇನ್ನು ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ತಬಲಾನಾಣಿ, ಅರುಣಾ ಬಾಲರಾಜ್ ಮುಂತಾ ದವರು ನಟಿಸಿದ್ದಾರೆ.
ಜಾಕಿ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಟಿ.ಆರ್. ಚಂದ್ರಶೇಖರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ರಾಜ್ಯಾಂದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶೋಕಿವಾಲ ತೆರೆಗೆ ಬಂದಿದೆ.
ಸಿಂಪಲ್ ಲುಕ್‌ನಲ್ಲಿ ನಾಯಕಿ ಸಂಜನಾ
ಕರಿಯಪ್ಪನ ಸೊಸೆಯಾಗಿ ಗಮನಸೆಳದ ಸಂಜನಾ ಆನಂದ್ ಈ ಚಿತ್ರದಲ್ಲಿ ನಾಯಕಿ ಯಾಗಿ ನಟಿಸಿದ್ದು, ಹಳ್ಳಿಯ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಇದು ಸಂಜನಾ ಅವರ ಕನಸಿನ ಪಾತ್ರವಂತೆ. ಪ್ರತಿ ದೃಶ್ಯದಲ್ಲೂ ಮುದ್ಧಾಗಿ ಕಾಣುವ ಸಂಜನಾ ಎಲ್ಲರನ್ನೂ ರಂಜಿಸುತ್ತಾರೆ. ಪಟ ಪಟ ಮಾತನಾಡುವ ಹುಡುಗಾಟದ ಹುಡುಗಿಯಾಗಿ ಮನಗೆಲ್ಲುತ್ತಾರೆ.