Sunday, 15th December 2024

ಕನ್ನಡಿಗರ ಮನಗೆದ್ದ ಆಲಿಯಾ ಭಟ್

ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಜೋರಾಗಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ.  ಹೀಗಿರು ವಾಗಲೇ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಒಟ್ಟಿಗೆ ಅಭಿನಯಿಸಿರುವ ಬ್ರಹ್ಮಾಸ್ತ್ರ ಚಿತ್ರ ತೆರೆಗೆ ಸಿದ್ಧವಾಗಿದೆ.

ಬಾಲಿವುಡ್‌ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಬ್ರಹ್ಮಾಸ ಸಾಂಗ್, ಮೇಕಿಂಗ್, ಮೂಲಕವೇ ಗಮನ ಸೆಳೆಯು ತ್ತಿದೆ. ಇದೀಗ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಘೋಷಣೆಯಾಗಿದೆ. ೨೦೨೨ರ ಸೆಪ್ಟೆಂಬರ್ ೯ ರಂದು ಬ್ರಹ್ಮಾಸ ತೆರೆಗೆ ಬರಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ ದಲ್ಲಿಯೂ ಸಿನಿಮಾ ಮೂಡಿ ಬರಲಿದೆ. ಈ ವಿಚಾರವನ್ನು ಆಲಿಯಾ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯ ವಾಗಲಿದೆ.

೦೯.೦೯.೨೦೨೨ ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್‌ಒನ್: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ಎಂದು ಆಲಿಯಾ ಭಟ್ ಕನ್ನಡಲ್ಲೇ ಟ್ವೀಟ್ ಮಾಡಿದ್ದಾರೆ. ಇದು ಕನ್ನಡಗರಿಗೆ ಸಂತಸ ತಂದಿದ್ದು, ಆಲಿಯಾ ಅವರನ್ನು ಹಾಡಿ ಹೊಗಳಿದ್ದಾರೆ. ಖಂಡಿತಾ ಸಿನಿಮಾ ನೋಡುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.

ಬ್ರಹ್ಮಾಸ್ತ್ರ ಸಿನಿಮಾ ಮೂರು ಭಾಗಗಳಲ್ಲಿ ತೆರೆಕಾಣುತ್ತಿದೆ. ಸದ್ಯ ಮೊದಲ ಭಾಗ ೨೦೨೨ರ ಸೆಪ್ಟೆಂಬರ್ ೯ ರಂದು ರಿಲೀಸ್ ಆಗಲಿದೆ. ಆ ಬಳಿಕ ಮುಂದಿನ ಭಾಗ ಸಿದ್ಧವಾಗಲಿದೆ. ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಬ್ರಹ್ಮಾಸ್ತ್ರ ಸಿದ್ಧವಾಗಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ
ಕಾಣಿಸ ಕೊಂಡಿದ್ದಾರೆ.