Thursday, 12th December 2024

ಅಪ್ಪು ಜತೆಯಾಗಲಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್

‘ರಾಮಾ ರಾಮಾರೇ’, ‘ಒಂದಲ್ಲಾಾ ಎರಡಲ್ಲಾಾ’ ಹೀಗೆ ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ನಿರ್ದೇಶಕ ಸತ್ಯ ಪ್ರಕಾಶ್ ಪವರ್‌ಸ್ಟಾಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ತಯಾರಿ ನಡೆಸುತ್ತಿಿದ್ದಾಾರೆ. ಅದಕ್ಕಾಾಗಿ ಚಿತ್ರದ ಕಥೆ ರಚನೆಯಲ್ಲಿ ನಿರತರಾಗಿದ್ದಾಾರೆ. ಈ ಹಿಂದೆಯಷ್ಟೇ, ‘ಒಂದಲ್ಲಾಾ ಎರಡಲ್ಲಾಾ’ ಚಿತ್ರ ತೆರೆಗೆ ಬಂದಿತ್ತು. ಪ್ರಶಸ್ತಿಿಗಳನ್ನೂ ಮುಡಿಗೇರಿಸಿಕೊಂಡಿತ್ತು. ಆ ಚಿತ್ರದ ಬಳಿಕ ಕಥೆ ಬರೆದಿದ್ದ ಸತ್ಯ, ಅದನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ತಿಳಿಸಿದ್ದಾಾರೆ. ಕಥೆ ಕೇಳಿ ಮೆಚ್ಚಿಿದ ಪವರ್‌ಸ್ಟಾಾರ್ ಚಿತ್ರಕಥೆ ಪೂರ್ಣಗೊಂಡ ಬಳಿಕ ಚಿತ್ರದಲ್ಲಿ ನಟಿಸುವ ಬಗ್ಗೆೆ ನಿರ್ಧರಿಸುವುದಾಗಿ ಹೇಳಿದ್ದಾಾರೆ. ಈ ಹಿನ್ನಲೆಯಲ್ಲಿ ಸತ್ಯ ಕಥೆ ರಚನೆ ಕಾರ್ಯದಲ್ಲಿ ತೊಡಗಿದ್ದಾಾರೆ.
ವರನಟ ಡಾ.ರಾಜ್‌ಕುಮಾರ್ ಅವರ ಚಿತ್ರಗಳನ್ನು ಅಪಾರವಾಗಿ ಮೆಚ್ಚುವ ಸತ್ಯ ಪ್ರಕಾಶ್, ಅದೇ ರೀತಿಯ ಕಥೆ ಇರುವ ಚಿತ್ರಗಳನ್ನು ನಿರ್ದೇಶಿವುದಾಗಿ ಹೇಳುತ್ತಾಾರೆ. ಸದ್ಯ ಪವರ್‌ಸ್ಟಾಾರ್ ಪುನೀತ್ ರಾಜ್‌ಕುಮಾರ್ ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಬ್ಯಸಿಯಾಗಿದ್ದಾಾರೆ. ಚಿತ್ರತಂಡ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ’ಯುವರತ್ನ’ ಮುಗಿಯುತ್ತಿಿದ್ದಂತೆ ಪುನೀತ್ ಭರ್ಜರಿ ಚೇತನ್ ನಿರ್ದೇಶನದ ’ಜೇಮ್ಸ್’ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಸತ್ಯ ಪ್ರಕಾಶ್ ಮತ್ತು ಪುನೀತ್ ಕಾಂಬಿನೇಷನ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.