Thursday, 12th December 2024

ಹಾಫ್ ತಂಡ ಸೇರಿದ ಅಥಿರಾ

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ‘ಹಾಫ್’ ಚಿತ್ರಕ್ಕೆ ಮಲೆಯಾಳಂ ಬೆಡಗಿ ಅಥಿರಾ ಎಂಟ್ರಿಯಾಗಿದ್ದಾರೆ.

ಮಾಲಿವುಡ್‌ನಲ್ಲಿ ‘ಲಾಲ್ ಜೋಸ್’ ಸಿನಿಮಾದಲ್ಲಿ ನಟಿಸಿದ್ದ ಅಥಿರಾ, ಈಗ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಥಿರಾ, ಈಗಷ್ಟೇ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡು ತ್ತಿದ್ದಾರೆ. ಕನ್ನಡ ನಂಟಿರುವ ಅಥಿರಾ ಬೆಳೆದದ್ದು, ವ್ಯಾಸಾಂಗ ಮಾಡುತ್ತಿರುವುದು  ಮಾತ್ರ ಕೇರಳದಲ್ಲಿ. ನಟನೆ ಹವ್ಯಾಸವಾಗಬೇಕು, ವೃತ್ತಿಯಿಂದ ಸಾಫ್ಟ್‌ ವೇರ್ ಇಂಜಿನಿಯರಾಗಬೇಕು ಅಂದುಕೊಂಡಿರುವ ಅಥಿರಾಗೆ ಒಂದರ ಹಿಂದೊಂದು ಅವಕಾಶಗಳು ಕೈಗೆಟುಕುತ್ತಿವೆ.

ಅದಕ್ಕೆ ಕಾರಣ ಟಿಕ್‌ಟಾಕ್ ನಲ್ಲಿ ಈಕೆ ಹೊಂದಿದ್ದ ಜನಪ್ರಿಯತೆ. ಸಾಕಷ್ಟು ಫಾಲೋವರ್‌ಗಳನ್ನು ಹೊಂದಿದ್ದ ಅಥಿರಾ, ಒಂದು ರೀತಿಯಲ್ಲಿ ಟಿಕ್‌ ಟಾಕ್ ಸ್ಟಾರ್ ಆಗಿದ್ದರು. ‘ಹಾಫ್’ ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ಬಗ್ಗೆೆ ನಿರ್ದೇಶಕ ಲೋಕೇಂದ್ರ ಸೂರ್ಯ ಅಪಾರ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಸಿನಿಮಾ ತಂಡ ಸ್ಕೂಲ್ ಸ್ಟೂಡೆಂಟ್ ಪಾತ್ರಕ್ಕೆ ನಾಯಕಿಯ ಹುಡುಕಾಟದಲ್ಲಿತ್ತು. ಆಡಿಷನ್‌ನಲ್ಲಿ ಅಥಿರಾ ಭಾವಾಭಿವ್ಯಕ್ತಿ ಯನ್ನು ನೋಡಿ ಆಯ್ಕೆ ಮಾಡಿಕೊಂಡೆವು.

ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಈಕೆಯ ನಟನೆಯ ಕೌಶಲ್ಯ ನೋಡಿ ಇಡೀ ಚಿತ್ರತಂಡ ಮೆಚ್ಚಿಕೊಂಡಿದೆ ಯಂತೆ. ಸದ್ಯ ಅಥಿರಾಳ ಪೋಸ್ಟರನ್ನು ‘ಹಾಫ್’ ಚಿತ್ರತಂಡ ಬಿಡುಗಡೆ ಮಾಡಿದೆ. ‘ಹಾಫ್’ ಸಿನಿಮಾ ನನ್ನ ಪಾಲಿಗೆ ಸಿಕ್ಕಿದ್ದೇ ಅದೃಷ್ಟ. ಈ ಚಿತ್ರದಲ್ಲಿ ಅದ್ಭುತವಾದ ಪಾತ್ರ ನನ್ನದು. ಸಿನಿಮಾ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನನಗೆ ಯಾವ ತಕರಾರೂ ಇಲ್ಲ ಎನ್ನುತ್ತಾರೆ ಅಥಿರಾ.