Sunday, 15th December 2024

ಮುಲಕುಪ್ಪಡಮ್‌ ತೆಕ್ಕೆಗೆ ಬನಾರಸ್‌

ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಹಾಡು ಹಾಗೂ ಟ್ರೇಲರ್ ಮೂಲ ಕವೇ ಸಖತ್ ಸದ್ಧು ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬರುತ್ತಿರುವ ಬನಾರಸ್, ನವೆಂಬರ್ ೪ ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.

ಖ್ಯಾತ ವಿತರಣೆ ಸಂಸ್ಥೆ ಮಲಕು ಪ್ಪಡಮ್, ಬನಾರಸ್‌ನ ವಿತರಣಾ ಹಕ್ಕುಗಳನ್ನು ಪಡೆದು ಕೊಂಡಿದೆ. ಹಾಗಾಗಿ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ. ಥಾಮಸ್ ಆಂಟೋನಿ, ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಅದರೊಂದಿಗೆ ಮಲಕುಪ್ಪಡಮ್ ಸಂಸ್ಥೆಯ ಮೂಲಕ ನೂರಾರು ಸಿನಿಮಾಗಳ ವಿತರಕ ರಾಗಿಯೂ ಯಶಸ್ವಿಯಾಗಿದ್ದಾರೆ. ಉತ್ತಮ ಗುಣಮಟ್ಟ ಹೊಂದಿರುವ ಚಿತ್ರಗಳ ವಿತರಣಾ ಹಕ್ಕುಗಳನ್ನು ಮಾತ್ರ ಖರೀದಿಸುವ ಈ ಸಂಸ್ಥೆ ಬಿಡುಗಡೆ ಮಾಡಿದ ಬಹುತೇಕ ಚಿತ್ರಗಳು ಗೆಲುವು ಕಂಡಿವೆ.

ಈಗ ಇದೇ ಸಂಸ್ಥೆ ಬನಾರಸ್ ವಿತರಣೆಯ ಹಕ್ಕನ್ನು ಪಡೆದಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟುಗೊಳ್ಳಲು ಕಾರಣವಾಗಿದೆ. ಜಯತೀರ್ಥ ನಿರ್ದೇಶನದಲ್ಲಿ ಸಿದ್ಧವಾಗಿರುವ ಬನಾರಸ್ ಟೈಮ್ ಟ್ರಾವೆಲ್ಲಿಂಗ್ ಸ್ಟೋರಿಯ ಜತೆಗೆ ನವಿರಾದ ಪ್ರೇಮ ಕಥೆಯನ್ನು ಒಳಗೊಂಡಿದೆ.

ಕರಾವಳಿ ಬೆಡಗಿ ಸೊನಾಲ್ ಮಂತೆರೊ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಅಚ್ಯುತ್ ಕುಮಾರ್, ಸುಜಯ್ ಶಾಸಿ, ಸ್ವಪ್ನಾ ಮತ್ತಿತ ರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ತಿಲಕ್‌ರಾಜ್ ಬಲ್ಲಾಳ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.