Sunday, 15th December 2024

ಮತ್ತೆ ಜಾಕಿ ತೊಟ್ಟ ಭಾವನಾ

ಜಾಕಿ ಚಿತ್ರದ ಮೂಲಕ ಚಂದನವನಕ್ಕೆ ಬಂದು ಕನ್ನಡಿಗರ ಮನಗೆದ್ದ ಭಾವನಾ ಮೆನನ್ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದರು. ಜಾಕಿ ಭಾವನಾ ಎಂದೇ ಖ್ಯಾತಿ ಗಳಿಸಿದರು. ಗ್ಲಾಮರ್ ಲುಕ್‌ನಲ್ಲಿ ಮಿಂಚಿದ್ದ ಭಾವನಾ, ಹಲವು ವಿಭಿನ್ನ ಪಾತ್ರಗಳಲ್ಲಿಯೂ ಬಣ್ಣಹಚ್ಚಿ ಪ್ರೇಕ್ಷಕರ ಮನಗೆದ್ದರು. ಅದರಲ್ಲಿ ಪ್ರಜ್ವಲ್ ದೇವರಾಜ್ ಜತೆ ನಟಿಸಿದ ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಖಾಕಿ ತೊಟ್ಟು
ಮಿಂಚಿದರು. ಭಾವನಾ ಈಗ ಮತ್ತೆ ಖಾಕಿ ತೊಡಲು ರೆಡಿಯಾಗಿದ್ದಾರೆ.

ಇನ್ನೇನು ಸೆಟ್ಟೇರಲು ಸಿದ್ಧವಾಗಿರುವ ಕೇಸ್ ಆಫ್ ಕೊಂಡಾನ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೇಸ್ ಆಫ್ ಕೊಂಡಾನ ಥ್ರಿಲ್ಲರ್ ಮಿಸ್ಟರಿ ಸಿನಿಮಾ, ತನಿಖಾ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ಭಾವನಾ ಕಂಗಟ್ಟಾದ ಪ್ರಕರಣದ ಜಾಡು ಹಿಡಿದು ಸಾಗಲಿದ್ದಾರೆ. ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಲಿದ್ದಾರೆ. ಉಳಿದಂತೆ ದಿಯಾ ಖ್ಯಾತಿಯ ಖುಷಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.