Monday, 16th September 2024

ಬಿಗ್ ಬಾಸ್ 9 ಶೀಘ್ರದಲ್ಲೆ ಆರಂಭ?

BigBossKannada

ಕನ್ನಡ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಶೀಘ್ರದಲ್ಲಿಯೇ ಆರಂಭವಾಗಲಿದೆ. ಈಗಷ್ಟೇ ಸೀಸನ್ ಎಂಟು ಮುಗಿಸಿರುವ ಬಿಗ್ ಬಾಸ್ ಒಂಬತ್ತನೇ ಸೀಸನ್ ಗೆ ಅಣಿಯಾಗುತ್ತಿದೆ. ಈ ಬಾರಿಯೂ ಬಿಗ್ ಬಾಸ್ ವಿಶೇಷವಾಗೇ ಇರಲಿದೆ.

ಈ ಸಲವೂ ಕಾಮೆನ್ ಮ್ಯಾನ್ ಗಳಿಗೆ ಬಿಗ್ ಬಾಸ್ ಮನೆಗೆ ಅವಕಾಶ ಕೊಡುವುದು ಅನುಮಾನವಾಗಿದೆ. ಯಾಕೆಂದರೆ ಕಳೆದ ಬಾರಿಯೂ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿರಲಿಲ್ಲ. ಕೇವಲ ಸೆಲೆಬ್ರೆಟಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕರೋನಾ ನಡುವೆಯೂ ಬಿಗ್ ಬಾಸ್ ಯಶಸ್ವಿಯಾಗಿ ನಡೆಸಲಾಯಿತು. ಈ ಬಾರಿ ಯೂ ಕರೋನಾ ಕರಿನೆರಳು ಬಿಗ್ ಬಾಸ್ ರಿಯಾಲಿಟಿ ಶೋ ಮೇಲಿದೆ.

ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿಯೂ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಪರ್ಧಿಗಳಿಗೆ ಕ್ವಾರಂಟೈನ್ ಕಂಡ್ಡಾಯವಾಗಲಿದೆ. ಇನ್ನೂ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಪ್ರವೇಶ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ಸಲವೂ ಬಿಗ್ ಸ್ಟಾರ್ ಒಬ್ಬರು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಮಾತು ಗಳು ಕೇಳಿಬರುತ್ತಿವೆ. ಇನ್ನೊಂದು ವಿಶೇಷವೆಂದರೆ ಈ ಬಾರಿಯ ಬಿಗ್ ಬಾಸ್ ಓಟಿಟಿಯಲ್ಲಿಯೂ ಪ್ರಸಾರ ವಾಗಲಿದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ಅದಕ್ಕೆ ಬಿಗ್ ಬಾಸ್ ಆಯೋಜಕರು ಸ್ಪಷ್ಟಪಡಿಸಲಿದ್ದಾರೆ.