ಭಾರತದ ಕೋಗಿಲೆ ಎಂದೇ ಜನಪ್ರಿಯರಾದ ಸರೋಜಿನಿ ನಾಯ್ಡು ಅವರ ಬಯೋಪಿಕ್ ತೆರೆಗೆ ಬರಲಿದೆ. ವಿನಯ್ ಚಂದ್ರ ನಿರ್ದೇಶನದಲ್ಲಿ ಈ ಚಿತ್ರವು ಇನ್ನೇನು ಸೆಟ್ಟೇರಲಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
ವಿಸ್ತಾ ಫಿಲಂಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚರಣ್ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ.ಕುಲಕರ್ಣಿ ಬಂಡ ವಾಳ ಹೂಡಲಿದ್ದಾರೆ. ಸರೋಜಿನಿ ನಾಯ್ಡು ಅವರ ಆರಂಭಿಕ ಜೀವನದ ಪಾತ್ರದಲ್ಲಿ ಸೋನಲ್ ಮಾಂಟೆರೊ ನಟಿಸಿದರೆ, ಹಿರಿ ವಯಸ್ಸಿನ ಪಾತ್ರದಲ್ಲಿ ಶಾಂತಿಪ್ರಿಯ ಬಣ್ಣಹಚ್ಚ ಲಿದ್ದಾರೆ. ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯತೆ ಪಡೆದಿದ್ದ ಶಾಂತಿಪ್ರಿಯ, ಈ ಚಿತ್ರದ ಮೂಲಕ ಇಪ್ಪತ್ತೆಂಟು ವರ್ಷಗಳ ನಂತರ ಅಭಿನಯಕ್ಕೆ ಮರಳಿದ್ದಾರೆ.
ಹಲವು ವರ್ಷಗಳ ಬಳಿಕ ನಟನೆಗೆ ಮರಳಿದ್ದೇನೆ. ಈ ಚಿತ್ರದಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಪಾತ್ರಕ್ಕೆ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ನಟಿ ಶಾಂತಿಪ್ರಿಯ. ಸರೋಜಿನಿ ನಾಯ್ಡು ಅವರ ಜೀವನದಲ್ಲಿ ನಡೆದ ಹಲವು ಪ್ರಮುಖ ವಿಷಯಗಳನ್ನು ಈ ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. ನಾನು ಸರೋಜಿನಿ ಅವರ ಪತಿ ಗೋವಿಂದರಾಜುಲು ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದೇನೆ.
ಸರೋಜಿನಿ ನಾಯ್ಡು ಅವರ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಅವರಿಗೆ ಗೋವಿಂದ್ ರಾಜುಲು ಬೆನ್ನೆಲುಬಾಗಿದ್ದರು. ಕೊನೆ ಯವರೆಗೂ ಸಹಕಾರ, ಪ್ರೋತ್ಸಾಹ ನೀಡಿದರು. ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚನೆ ಬೇಡ ಎಂದು ಆಕೆಯನ್ನು ಹುರಿ ದುಂಬಿಸಿದರು. ಸಾಧನೆಗೆ ಸೂರ್ತಿಯಾದರು, ಆಕೆಗೆ ಏನು ಇಷ್ಟವಿತ್ತೋ, ಅದೆಲ್ಲವನ್ನೂ ಮಾಡುವುದಕ್ಕೆ ಅವಕಾಶ ಮಾಡಿ ಕೊಟ್ಟರು ಎಂದು ನಟ ಹಿತೇನ್ ತೇಜನಿ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.
ನನಗೆ ಮೊದಲಿನಿಂದಲೂ ಒಂದು ಬಯೋಪಿಕ್ನಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅದು ಈಗಲೇ ಸಾಧ್ಯವಾಗುತ್ತಿದೆ. ಇದು ನನಗೆ ಬಯಸದೆ ಬಂದ ಭಾಗ್ಯ. ಚಿತ್ರದ ಕಥೆ ಕೇಳಿದಾಗ ತುಂಬಾ ಖುಷಿ ಆಯಿತು. ಸರೋಜಿನಿ ನಾಯ್ಡು ಅವರ ಚಿಕ್ಕವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ಪಾತ್ರ
ಮಾಡುತ್ತಿರುವುದಾಗಿ ಸೋನಾಲ್ ಮಾಂಟೆರೊ ತಿಳಿಸಿದರು.