Sunday, 13th October 2024

ಕ್ಯೂರಿಯಾಸಿಟಿ ಹುಟ್ಟಿಸಿದ ಬ್ಲಿಂಕ್‌

ಬ್ಲಿಂಕ್… ಕನ್ನಡದಲ್ಲಿ ಹೀಗೊಂದು ಸಿನಿಮಾ ಸೆಟ್ಟೇರಿದೆ. ಒಂದಷ್ಟು ಸಿನಿಮಾ ಪ್ರಿಯರು ಸೇರಿ ಬ್ಲಿಂಕ್ ಚಿತ್ರವನ್ನು ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಎ.ಜೆ.ರವಿಚಂದ್ರ ಬಂಡವಾಳ ಹೂಡಿದ್ದಾರೆ.

ಮೂಲತಃ ಉತ್ತರ ಕರ್ನಾಟಕದವರಾದ ರವಿಚಂದ್ರ ಐಟಿ ಉದ್ಯೋಗಿ, ಸಿನಿಮಾ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕಕ್ಕೆ ಎಂಟ್ರಕೊಟ್ಟಿದ್ದಾರೆ. ಬ್ಲಿಂಕ್ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಜನನಿ ಪಿಕ್ಚರ‍್ಸ್ ಪ್ರೊಡಕ್ಷನ್‌ನಲ್ಲಿ ಬ್ಲಿಂಕ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿಧಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ ವಾಗಿದೆ. ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಬ್ಲಿಂಕ್ ಚಿತ್ರದಲ್ಲಿ ನಾಯಕನಾಗಿ ನಟಿಸು ತ್ತಿದ್ದಾರೆ.

ಬೊಂಬಾಟಾಗಿದೆ ಬ್ಲಿಂಕ್ ಟೀಸರ್: ಬ್ಲಿಂಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಇಡೀ ಟೀಸರ್ ಕಪ್ಪು-ಬಿಳುಪಿನಿಂದ ಕೂಡಿದೆ. ವಿಭಿನ್ನ..ವಿಶೇಷ ಪ್ರಯತ್ನದಿಂದ ಮೂಡಿ ಬಂದಿರುವ ಟೀಸರ್‌ನಲ್ಲಿ ಹಗಲು ವೇಷ, ವೀರಗಾಸೆ ಸೇರಿದಂತೆ ಜಾನಪದ ಕಲೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಕುತೂಹಲ ಭರಿತವಾಗಿ ಮೂಡಿ ಬಂದಿರುವ ಟೀಸರ್ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಸೈಂಟಿಫಿಕ್ ಥ್ರಿಲ್ಲರ್ ಕಥಾಹಂದರದ ಬ್ಲಿಂಕ್  ಸಿನಿಮಾದಲ್ಲಿ ವಜ್ರಧೀರ್ ಜೈನ್, ಸುರೇಶ ಅನಗಳ್ಳಿ, ಚೈತ್ರ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್, ಯಶಸ್ವಿನಿ ರಾವ್ ಮುರಳಿ ಶೃಂಗೇರಿ ಮುಂತಾದವರು ನಟಿಸುತ್ತಿ ದ್ದಾರೆ. ಅನಿವಾಶ್ ಶಾಸ್ತ್ರಿ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ಸಂಜೀವ್ ಜಗೀರ್ದಾರ್ ಸಂಕಲನ, ದೀಕ್ಷಾ ಕೃಷ್ಣ ವಸ ವಿನ್ಯಾಸವಿದೆ.

ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಬ್ಲಿಂಕ್ ಸಿನಿಮಾ ತಂಡ, ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.
ಸದ್ಯ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.