Thursday, 12th December 2024

ಪಣತೊಟ್ಟು ಕಣಕ್ಕಿಳಿದ ಚಾಂಪಿಯನ್‌

ಚಂದನವನದಲ್ಲಿ ಹೊಸಬರ ಹೊಸ ಪ್ರಯತ್ನಗಳು ನಡೆಯುತ್ತಿವೆ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಪ್ರೇಕ್ಷಕರು ಕೈ
ಹಿಡಿಯುತ್ತಿದ್ದಾರೆ. ಅಂತೆಯೇ ಈಗ ಉತ್ತಮ ಕಥೆಯ ಚಾಂಪಿಯನ್ ಚಿತ್ರ ತೆರೆಗೆ ಸಿದ್ಧವಾಗಿದೆ. ಮುಂದಿನ ವಾರ ರಾಜ್ಯಾದ್ಯಂತ
ಬಿಡುಗಡೆಯಾಗಲಿದೆ. ಚಾಂಪಿಯನ್ ಟೈಟಲ್ ಹೇಳುವಂತೆ ಇದು ಸಾಧಕನ ಕಥೆಯನ್ನು ಒಳಗಗೊಂಡಿದೆ. ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರನ ರೋಚಕ ಸ್ಟೋರಿ ಇಲ್ಲಿದೆ.

ಬದುಕಿನ ಹೋರಾಟ
ಅಂದುಕೊಂಡಿದ್ದನ್ನು ಸಾಧಿಸುವ ಮಾರ್ಗದಲ್ಲಿ ಹಲವು ಅಡೆತಡೆಗಳು ಎದುರಾಗುತ್ತವೆ. ಅದೆಲ್ಲವನ್ನೂ ಎದುರಿಸಿ ಜಯಿಸು ವವನೆ ನಿಜವಾದ ಸಾಧಕ. ಅಂತೆಯೇ ಚಿತ್ರದ ನಾಯಕನಿಗೆ ಹಲವು ಸವಾಲುಗಳು ಎದುರಾಗುತ್ತವೆ. ಅದೆಲ್ಲವನ್ನು ದಿಟ್ಟತನದಿಂದ ಎದುರಿಸಿ ಗುರಿಮುಟ್ಟುತ್ತಾನೆ. ಅಷ್ಟಕ್ಕೂ ನಾಯಕನ ಸಂಕಲ್ಪ ಏನು ಎಂಬುದನ್ನು ಚಿತ್ರದಲ್ಲಿ ನೋಡಿಯೇ ತಿಳಿಯಬೇಕು. ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಗುರಿ ತೋರುವ ಗುರುವಾಗಿ ಕಾಣಿಸಿಕೊಂಡಿದ್ದಾರೆ.

ಅಬ್ಬರಿಸಿದ ಧನಪಾಲ್
ಸಚಿನ್ ಧನಪಾಲ್ ನಾಯಕನಾಗಿ ನಟಿಸಿದ್ದು, ಆಕ್ಷನ್‌ನಲ್ಲಿ ಕಂಗೊಳಿಸಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದು, ಸಿಕ್ಸ್‌ ಪ್ಯಾಕ್ ಅವತಾರ ತಾಳಿದ್ದಾರೆ. ಸಾಹಸ ದೃಶ್ಯಗಳಲ್ಲಿ ಮಿಂಚಿದ್ದು , ಭರವಸೆ ಮೂಡಿಸಿ ದ್ದಾರೆ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತ ಶಿವಾನಂದ, ಕೊಟ್ಟ ಮಾತಿನಂತೆ ಚಾಂಪಿಯನ್ ಚಿತ್ರದ ಮೂಲಕ ನನ್ನನ್ನು ಹೀರೋ ಮಾಡಿದ್ದಾರೆ.

ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ ಎನ್ನುತ್ತಾರೆ ಸಚಿನ್ ಧನಪಾಲ್. ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದು, ಗ್ಲಾಮರ್ ಬೊಂಬೆಯಾಗಿ ಕಂಗೊಳಿಸಿದ್ದಾರೆ. ಹಿರಿಯ ನಟ ಅವಿನಾಶ್, ಶಂಕರ್ ಅಶ್ವತ್, ಮಂಡ್ಯ ರಮೇಶ್, ಚಿಕ್ಕಣ್ಣ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸೊಂಟ ಬಳುಕಿಸಿದ ಸನ್ನಿ
ಚಾಂಪಿಯನ್ ಆಕ್ಷನ್ ದೃಶ್ಯಗಳಿಂದ ಮಾತ್ರವಲ್ಲ ಹಾಡುಗಳಿಂದಲೂ ಸಖತ್ ಸದ್ದು ಮಾಡುತ್ತಿದೆ. ಡಿಂಗರ್ ಬಿಲ್ಲಿ.. ಹಾಡಿನಲ್ಲಿ ಬಿಚ್ಚಮ್ಮ ಸನ್ನಿ ಲಿಯೋನ್ ಸೊಂಟು ಬಳುಕಿಸಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಈ ಹಾಡಿಗಾಗಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಈ ಚಿತ್ರದ ಮೂಲಕ ಸನ್ನಿ ಲಿಯೋನ್ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿಯಾಗಿದ್ದಾರೆ.

***

ನಾನು ಮುಂದೊಂದು ದಿನ ಸಿನಿಮಾ ನಿರ್ಮಾಣ ಮಾಡುತ್ತೇನೆ, ಅದರಲ್ಲಿ ನೀನೆ ನಾಯಕನಾಗಿ ನಟಿಸಬೇಕು ಎಂದು ಸಚಿನ್ ಧನಪಾಲ್‌ಗೆ ಹೇಳಿದ್ದೆ. ಹದಿನಾಲ್ಕು ವರ್ಷಗಳ ಹಿಂದೆ ಆಡಿದ್ದ ಮಾತು ಈಗ ನಿಜವಾಗಿದೆ. ಮೊದಲು ಕರೋನಾ ಕಾಡಿತು. ಬಳಿಕ
ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಹಠಾತ್ ನಿಧನರಾದರು. ಹೀಗೆ ಹಲವು ಅಡೆತಡೆಗಳು ಎದುರಾದರೂ ಎಲ್ಲವನ್ನು ನಿಭಾಯಿಸಿ ಚಿತ್ರವನ್ನು ಪೂರ್ಣಗೊಳಿಸಿದ್ದೇವೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ.

-ಶಿವಾನಂದ.ಎಸ್.ನೀಲಣ್ಣನವರ್ ನಿರ್ಮಾಪಕ