Friday, 13th December 2024

ದಶಾವತಾರ ತಾಳಿದ ಅಧ್ಯಕ್ಷ ಶರಣ್

ಪ್ರಶಾಂತ್ .ಟಿ.ಆರ್

ಶರಣ್ ಸಿನಿಮಾ ಎಂದರೆ ಏನಾದರು ಸ್ಪೆಷಲ್ ಇದ್ದೇ ಇರುತ್ತದೆ. ಸೆಂಟಿಮೆಂಟ್ ಜತೆಗೆ, ಭರಪೂರ ಕಾಮಿಡಿಯೂ ಬೆರೆತಿರುತ್ತದೆ. ಹಾಗಾಗಿಯೇ ಶರಣ್ ಚಿತ್ರ ನೊಡಲು ಪ್ರೇಕ್ಷಕರು ಕಾದುಕುಳಿತಿರುತ್ತಾರೆ. ಶರಣ್ ಅಭಿನಯದ ಸಿನಿಮಾ ತೆರೆಗೆ ಬರದೆ ಮೂರು ವರ್ಷಗಳೇ ಕಳೆದಿವೆ. ಈಗ ತಮ್ಮ ಅಭಿಮಾನಿಗಳಿಗಾಗಿ ಹೊಸ ಅವತಾರ ಎತ್ತಿರುವ ಶರಣ್ ಅವತಾರ ಪುರುಷನಾಗಿ ಭರ್ಜರಿಯಾಗಿಯೇ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ದಶಾವತಾರ ತಾಳಿ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಿದ್ದಾರೆ.

ಅವತಾರ ಪುರುಷ ಕನ್ನಡ ಚಿತ್ರರಂಗದಲ್ಲಿಯೇ ಬಲು ಸ್ಪೆಷಲ್ ಸಿನಿಮಾ, ಕಳೆದ ೧೫ ವರ್ಷಗಳಲ್ಲಿ ಇಂತಹ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈ ಹಿಂದೆ ಆಪ್ತರ ಕ್ಷಕ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಬಗೆ ಬಗೆಯ ಗೆಟಪ್‌ನಲ್ಲಿ ಮಿಂಚಿದ್ದರು. ಈಗ ಶರಣ್ ಅಂತಹ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವತಾರ ಪುರುಷ, ಶರಣ್ ಸಿನಿಮಾ ಎಂದಾಕ್ಷಣ ಇದು ಕಾಮಿಡಿಗೆ ಸೀಮಿತವಾಗಿಲ್ಲ. ಇಲ್ಲಿ ಎಲ್ಲರನ್ನೂ ಅಚ್ಚರಿಯಲ್ಲಿ ತೇಲಿಸುವ ಬ್ಲಾಕ್ ಮ್ಯಾಜಿಕ್ ಕಥೆಯೂ ಇದೆ. ಕನ್ನಡ ಚಿತ್ರರಂಗದ ಕ್ರಿಯೇಟಿವ್ ಡೈರೆಕ್ಟರ್ ಆಗಿರುವ ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶಿಸಿರು ವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಜಬರ್ದಸ್ಥಾಗಿ ಬಂದ ರ‍್ಯಾಂಬೋ
ಅಧ್ಯಕ್ಷ ಇನ್ ಅಮೇರಿಕಾ ಬಳಿಕ ಶರಣ್ ನಟಿಸಿರುವ ಚಿತ್ರವಿದು. ಈ ಚಿತ್ರದಲ್ಲಿ ಶರಣ್ ದಶಾವತಾರ ತಾಳಿದ್ದಾರೆ. ಚಿತ್ರದಲ್ಲಿ ಶರಣ್ ನಡೆದು ಬಂದ ಹಾದಿಯ ಬಗ್ಗೆಯೂ ಕಥೆ ಹೆಣೆಯಲಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಶರಣ್‌ಗೆ ಈ ಚಿತ್ರ ಸಾಕಷ್ಟು ಹೊಸತನವನ್ನು ತಂದಿದೆ. ಸಿನಿಮಾದ ಮೊದಲಾರ್ಧ ಕಾಮಿಡಿ ಕಥೆಯಲ್ಲಿ ಸಾಗಿದರೆ ಎರಡನೇ ಭಾಗದಲ್ಲಿ ಬ್ಲಾಕ್ ಮ್ಯಾಜಿಕ್ ಕಥೆ ಅಡಕವಾಗಿದೆ. ಇಲ್ಲಿ ಮಾಟ ಮಂತ್ರ, ಯಂತ್ರ ತಂತ್ರದ ಬಗ್ಗೆಯೂ ಹೇಳಲಾ ಗಿದೆ.

ಕಾಮಿಡಿಗೆ ಸೀಮಿತವಾಗಿದ್ದ ಶರಣ್, ಹ್ಯೂಮರಸ್ ಕಥೆಯಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸುತ್ತದೆ. ನಿರ್ದೇಶ ಕರು ಕಥೆ ಹೇಳಿದಾಗ ತುಂಬಾ ಇಂಟರೆಸ್ಟಿಂಗ್ ಅನ್ನಿಸಿತು. ಈ ಚಿತ್ರದಲ್ಲಿ ನಟಿಸುವುದು ತುಂಬಾನೇ ಚಾಲೆಂಜಿಂಗ್ ಅನ್ನಿಸಿತು. ನಿರ್ದೇಶಕರು ಹೇಳಿದಂತೆ ನಟಿಸಿದೆ. ಎಲ್ಲರ ಸಹಕಾರದಿಂದ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ಶರಣ್.

ಸಂಕಷ್ಟ ನಿವಾರಕ
ನಾಯಕ ಯಾರೇ ಕಷ್ಟದಲ್ಲಿದ್ದರೂ ಅಲ್ಲಿಗೆ ಧಾವಿಸುವ ಗುಣವನ್ನು ಹೊಂದಿರುತ್ತಾನೆ. ಹೀಗೆ ಸಂಪ್ರದಾಯಸ್ಥ ಕುಟುಂಬದಲ್ಲಿ ಸಮಸ್ಯೆ ತಲೆದೋರಿದಾಗ ಹೊಸ ಅವತಾರದಲ್ಲಿ ಅಲ್ಲಿಗೆ ಪ್ರತ್ಯಕ್ಷವಾಗುತ್ತಾನೆ. ಸಮಸ್ಯೆ ಪರಿಹರಿ ಸಲು ಮುಂದಾಗುತ್ತಾನೆ. ಇಂತಹ ಹಲವು ಸಂದರ್ಭಗಳನ್ನು ಚಿತ್ರದಲ್ಲಿ ರೋಚಕ ವಾಗಿ ಕಟ್ಟಿಕೊಡಲಾಗಿದೆ. ಈ ಹಿಂದೆ ತೆರೆಗೆ ಬಂದ ಸಿನಿಮಾಗಳು ಶರಣ್‌ಗೆ ಅಷ್ಟಾಗಿ ಪ್ರಸಿದ್ಧಿ ತಂದುಕೊಡಲಿಲ್ಲ. ಹಾಗಾಗಿ ಈ ಚಿತ್ರ ಶರಣ್‌ಗೆ ಮತ್ತೊಂದು ಬಿಗ್‌ಬ್ರೇಕ್ ನೀಡುವ ನಿರೀಕ್ಷೆಯಿದೆ.

ರೋಚಕತೆಯ ಅನಾವರಣ
ನಿರ್ದೇಶಕ ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎನ್ನುವುದೇ ವಿಶೇಷ. ನಿರ್ದೇಶಕರು ಹೆಸರಿಗಷ್ಟೇ ಸಿಂಪಲ್ ಆದರೆ ಅವರ ಕಥೆ, ಅದನ್ನು ತೆರೆಗೆ ತರುವ ರೀತಿ ತುಂಬಾ ಅದ್ಧೂರಿಯಾಗಿರುತ್ತದೆ. ಅವತಾರಪುರುಷ ಹೈಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾವಾಗಿದೆ. ನಿರ್ದೇಶಕ ಸುನಿ, ದೊಡ್ಡ ಕಥೆಯನ್ನು ರಚಿಸಿ ಅದನ್ನು ವೆಬ್ ಸೀರಿಸ್ ಮಾಡಲು ಸಿದ್ಧತೆ ನಡೆಸಿದ್ದರು. ಆ ಕಥೆಯನ್ನು ನಿರ್ದೇಶಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಹೇಳಿದರು. ಕಥೆ ಕೇಳಿ ಮೆಚ್ಚಿದ ನಿರ್ಮಾಪಕರು ಈ ಕಥೆಯನ್ನು ಸಿನಿಮಾ ರೂಪದಲ್ಲಿಯೇ ತೆರೆಗೆ ತರಲು ನಿರ್ಧರಿಸಿದ್ದಾರೆ. ಅದರಂತೆ ಈ ಕಥೆ ಹೊಸ ಅವತಾರ ತಾಳಿದೆ.

ಒಂದಾದ ಭಲೇ ಜೋಡಿ
ಶರಣ್ ಹಾಗೂ ಆಶಿಕಾ ರಂಗನಾಥ್ ರ‍್ಯಾಂಬೋ ೨ ಚಿತ್ರದಲ್ಲಿ ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದರು. ಈಗ ಅವತಾರಪುರುಷ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ರ‍್ಯಾಂಬೋ ೨ ಚಿತ್ರದಲ್ಲಿ ಚುಟು ಚುಟು.. ಹಾಡು ಹಾಡಿ ಸಂಗೀತ ಪ್ರಿಯರ ಮನಗೆದ್ದಿದ್ದ ಈ ಜೋಡಿ, ಇಲ್ಲಿ ಹೀರೋ ಹೋಂಡ… ಹಾಡಿನ ಮೂಲಕ ರಂಜಿಸಲಿದ್ದಾರೆ. ಹಿರಿಯ ನಟ ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಮಂತ್ರವಾದಿಯಾಗಿ ಕಾಣಿಸಿಕೊಂಡಿದ್ದಾರೆ.
ಸಾಧು ಕೋಕಿಲ ಮಂತ್ರವಾದಿಯಾಗಿ ನಟಿಸಿದ್ದು, ಕಾಮಿಡಿ ಕಚಗುಳಿ ಇಡಲಿದ್ದಾರೆ. ಉಳಿದಂತೆ ಭವ್ಯಾ, ಅಶುತೋಷ್ ರಾಣ, ಬಾಲಾಜಿ ಮನೋಹರ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.