Thursday, 12th December 2024

ಬಿರುಸಿನಿಂದ ಸಾಗಿದ ಡವ್‌ ಮಾಸ್ಟರ್‌

ಕೆಲವರು ಸಾಕುಪ್ರಾಣಿಗಳನ್ನು ತಮ್ಮ ಮಕ್ಕಳಷ್ಟೇ ಪ್ರೀತಿ ವಾತ್ಸಲ್ಯದಿಂದ ಸಲಹುತ್ತಾರೆ. ಆ ಪ್ರಾಣಿಗೂ ತನ್ನ ಯಜಮಾನನೇ ಸರ್ವಸ್ವ. ಇದೇ ಅಂಶವನ್ನು ಮುಖ್ಯವಾಗಿಟ್ಟು ಕೊಂಡು ಡವ್ ಮಾಸ್ಟರ್ ಸಿನಿಮಾ ಸಿದ್ಧವಾಗುತ್ತಿದೆ.

ತಬಲ ನಾಣಿ ಚಿತ್ರದ ನಾಯಕನಾಗಿದ್ದು ರಾಕಿ ಎಂಬ ಶ್ವಾನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಉತ್ತರಹಳ್ಳಿ ಬಳಿಯ ಮನೆಯೊಂದರಲ್ಲಿ ಶೂಟಿಂಗ್ ನಡೆಯುತ್ತಿದೆ. ನಾನು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ನಿರ್ಮಾಪಕರ ಬಳಿ ಕಥೆ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡರು. ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಬಂಧದ ಮೌಲ್ಯ ತಿಳಿಸುವ ಕಥೆ. ನಾನೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ ಎಂದರು ನಿರ್ದೇಶಕ ಆರ್ಯ.

ಮತ್ತೆ ಬಂದ ಶಕೀಲಾ: ತುಂಬಾ ದಿನಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯಿ ಸುತ್ತಿರುವುದು ಸಂತಸ ತಂದಿದೆ. ಈ ಹಿಂದೆ ನಟಿಸಿರುವ ಚಿತ್ರಗಳಿಗಿಂತ ವಿಭಿನ್ನ ಪಾತ್ರ ದಲ್ಲಿ ಈ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಶಕೀಲಾ ತಮ್ಮ ಪಾತ್ರದ ಪರಿಚಯ ಮಾಡಿಕೊಂಡರು. ನವೀನ್ ಪಡೀಲ್, ಸುಂದರ್, ಕುರಿ ಪ್ರತಾಪ್, ಮಿತ್ರ, ಕಾಕ್ರೋಜ್ ಸುಧಿ, ಗಿರೀಶ್ ಜತ್ತಿ, ಗೋವಿಂದೇ ಗೌಡ, ಸ್ವಪ್ನಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕಿರಣ್ ಛಾಯಾಗ್ರಹಣ ಚಿತ್ರಕ್ಕಿದೆ.

***

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರಕ್ಕೆ ಕಥೆಯೇ ಹೀರೋ. ಎರಡನೇ ಹೀರೋ ನಮ್ಮ ರಾಕಿ. ನಾನು ನಾಯಿ ಯನ್ನು ಪ್ರೀತಿಯಿಂದ ಮಗನಂತೆ ಸಾಕಿರುತ್ತೇನೆ. ಕೊನೆಗೆ ಆ ನಾಯಿಯಿಂದ ನಿಮಗೆ ಕೆಡಕಾಗುತ್ತದೆ ಎಂದು ತಿಳಿದಾಗ, ನಾನು ಏನು ಮಾಡುತ್ತೇನೆ ಎಂಬುದನ್ನು ನೀವು ಚಿತ್ರದಲ್ಲಿ ನೋಡಬೇಕು. ಎಲ್ಲರೂ ಗಂಡಿಗೆ ಹೆಣ್ಣು ಹುಡುಕಲು ಹೋಗುತ್ತಾರೆ. ನಾವು
ಇದರಲ್ಲಿ ನಮ್ಮ ರಾಕಿಗೆ ಕನ್ಯಾನ್ವೇಷಣೆ ಮಾಡುತ್ತೇವೆ.
– ತಬಲನಾಣಿ ನಟ

ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ ಬಹು ದಿನಗಳಿಂದಲೂ ಇತ್ತು. ಅದಕ್ಕಾಗಿ ಒಳ್ಳೆಯ ಕಥೆಗೆ ಅರಸುತ್ತಿದ್ದೆ. ಮನಸಿ ಗೊಪ್ಪುವ ಕಥೆ ಸಿಕ್ಕಿತು. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎನ್ನುತ್ತಾರೆ.
-ರೋಷನ್ ಪಾಷಾ ನಿರ್ಮಾಪಕ