Sunday, 15th December 2024

ಡೆಡ್ಲಿ ಕಿಲ್ಲರ್‌ಗೆ ಜಗ್ಗೇಶ್‌ ಸಾಥ್‌

ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನಕ್ಕೆ ಮರಳಿದ್ದು ಡೆಡ್ಲಿ ಕಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ಜನ ವಿಲನ್‌ಗಳು ಹಾಗೂ ಮಹಿಳೆ ಯೊಬ್ಬಳ ಸುತ್ತ ಹೆಣೆಯಲಾದ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು, ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದೆ.

ನವರಸ ನಾಯಕ ಜಗ್ಗೇಶ್ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಐದು ಜನ ವಿಲನ್‌ಗಳು ಜತೆಗೆ ಹುಡುಗಿಯನ್ನು ಪೊಲೀಸರು ಆಂದ್ರದಲ್ಲಿ ಅರೆಸ್ಟ್ ಮಾಡಿ ಕರ್ನಾಟಕಕ್ಕೆ ಕರೆತರುವಾಗ ಮಾರ್ಗ ಮದ್ಯೆ ಅವರು ಕಾಡಿನಲ್ಲಿ ಎಸ್ಕೇಪ್ ಆಗುತ್ತಾರೆ, ಅಲ್ಲಿಂದ ಅವರು ಕಾಡಿನಲ್ಲೇ ಇರುವ ಮನೆಯೊಂದರಲ್ಲಿ ಆಶ್ರಯ ಪಡೆದು ಆ ಮನೆಯಲ್ಲೇ ಎಲ್ಲರೂ ಲಾಕ್ ಆಗಿಬಿಡುತ್ತಾರೆ, ಅಲ್ಲಿ ಅವರಿಗೆ ಮತ್ತಷ್ಟು ವಿಚಿತ್ರ ಅನುಭವಗಳಾಗುತ್ತವೆ.

ಅಲ್ಲಿಂದ ಮುಂದೆ ಅವರು ಪೋಲೀಸರಿಗೆ ಸಿಗುತ್ತಾರ ಇಲ್ಲವೆ ಎಂಬುದೇ ಕುತೂಹಲ. ಚಿತ್ರದ ಬಹುತೇಕ ಕಥೆಯನ್ನು ಕಾಡು ಹಾಗೂ ಮನೆಯೊಂದರಲ್ಲಿ ಶೂಟ್ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ ಎಂದು ನಿರ್ದೇಶಕ ಥ್ರಿಲ್ಲರ್ ಮಂಜು ಹೇಳಿದರು.

*

ಬದುಕಿನಲ್ಲಿ ನಮಗೆ ತುಂಬಾ ಜನ ಸ್ನೇಹಿತರು ಸಿಗುತ್ತಾರೆ. ಆದರೆ ನಾವು ಬಿದ್ದಾಗ ನಮ್ಮ ಜತೆ ಇರುವವರೇ ನಿಜವಾದ ಸ್ನೇಹಿತರು. ಥ್ರಿಲ್ಲರ್ ಮಂಜು, ನಾನು ಆರಂಭದಿಂದಲೂ ಸ್ನೇಹಿತರು. ಆ ದಿನಗಳಲ್ಲಿ ನಾನೂ ತುಂಬಾ ನಿರಾಸೆ, ಸಂಕಟಗಳನ್ನು ಅನುಭವಿಸಿ ದ್ದೇವೆ. ಈಗ ಥ್ರಿಲ್ಲರ್ ಮಂಜು ಸಾಧನೆ ನೋಡಿ ಸಂತಸವಾಗಿದೆ.
-ಜಗ್ಗೇಶ್ ನಟ