Sunday, 15th December 2024

ಧರಣಿ ಮಂಡಲ ಮಧ್ಯದೊಳಗಿಂದ ಬಂದ ಟೀಸರ್‌

ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಹಾಗೂ ಐಶಾನಿ ಶೆಟ್ಟಿ ಜತೆಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ತನ್ನೊಳಗೆ ಬಚ್ಚಿಟ್ಟುಗೊಂಡಿರುವ ಹರಿತವಾದ ಹಾಗೂ ವಿಭಿನ್ನ ಕಥಾನಕದ ಸುಳಿವು ಟೀಸರ್ ಮೂಲಕ ಅನಾವರಣಗೊಂಡಿದೆ. ಪ್ರೀತಿ, ಪ್ರೇಮ, ಕುಟುಂಬದ ಸುತ್ತ ಹೆಣಿದಿರುವ ಟೀಸರ್ ನೋಡುಗರ ನಿರೀಕ್ಷೆ ಯನ್ನು ಹೆಚ್ಚಿಸಿದೆ. ಕ್ರೈಂ ಥ್ರಿಲ್ಲರ್ ಜತೆಗೆ ಡ್ರಗ್ಸ್ ಮಾಫಿಯಾದ ಕಥೆಯೂ ಚಿತ್ರದಲ್ಲಿದೆ.

ಇದೊಂದು ಡಿಫರೆಂಟ್ ಕಥೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿರುವ ಧರಣಿ ಮಂಡಲ ಮಧ್ಯದೊಳಗೆ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸದ್ಧು ಮಾಡುತ್ತಿದೆ. ಈ ಚಿತ್ರದಲ್ಲಿ ಐಶಾನಿ ಶೆಟ್ಟಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ನವೀನ್ ನಾಯಕನಾಗಿ ನಟಿಸಿದ್ದಾರೆ. ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯಾ, ಶಾಂಭಾವಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕ ಪುರಿ ಜಗನ್ನಾಥ್ ಅವರ ಜತೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಶ್ರೀಧರ್ ಶಿಕಾರಿಪುರ, ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆ ಮೂಲಕ ಚಂದನವನದಲ್ಲಿ ನಿರ್ದೇಶಕರಾಗಿ ಗುರುತಿಸಿ ಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಓಂಕಾರ್ ಬಂಡವಾಳ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಕಾರ್ತಿಕ್ ಚನ್ನೋಜಿ ರಾವ್ ಸಂಗೀತ, ಉಜ್ವಲ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ.