ದೊಡ್ಮೆಯ ಕುಡಿ ಧೀರನ್ ರಾಮ್ಕುಮಾರ್ ಚಂದನವನಕ್ಕೆ ಭರ್ಜರಿ ಎಂಟ್ರಿಕೊಟ್ಟಿದ್ದಾರೆ. ಮೊದಲ ಚಿತ್ರದಲ್ಲಿಯೇ ಶಿವನ ಅವತಾರ ತಾಳಿ ಮಿಂಚಿದ್ದಾರೆ. ಲಾಂಗ್ ಹಿಡಿದು ಅಬ್ಬರಿಸಿದ್ದಾರೆ. ಧೀರನ್ ಅಭಿನಯದ ಶಿವ ೧೪೩ ರಾಜ್ಯಾದ್ಯಂತ ಅದ್ಧೂರಿ ಯಾಗಿ ತೆರೆಗೆ ಬಂದಿದೆ.
ಟ್ರೇಲರ್ ಮೂಲಕವೇ ಕುತೂಹಲ ಕೆರಳಿಸಿದ್ದ ಶಿವನನ್ನು ಕಣ್ತಂಬಿಕೊಳ್ಳಲು ಸಿನಿಪ್ರಿಯರು ಕಾತರ ರಾಗಿದ್ದಾರೆ. ಚಿತ್ರದಲ್ಲಿ ಶಿವನ ಗತ್ತಿದೆ. ಮುತ್ತಿನ ಗಮ್ಮತ್ತು ಇದೆ. ನವಿರಾದ ಪ್ರೇಮ ಕಥೆ ಎಲ್ಲರನ್ನೂ ಸೆಳೆಯಲಿದೆ. ಶಿವ ೧೪೩ ಟ್ರೇಲರ್ ನೋಡಿದರೆ ಇದು ರೌಡಿಸಂ ಕಥೆಯ ಚಿತ್ರವೇ ಎಂದು ಅನ್ನಿಸಬಹುದು. ಆದರೆ ಖಂಡಿತಾ ಇಲ್ಲ, ಇದು ನವಿರಾದ ಪ್ರೇಮ ಕಥೆಯ ಸುಂದರ ಚಿತ್ರ ಎನ್ನುತ್ತಾರೆ ನಿರ್ದೇಶಕ ಅನಿಲ್ ಕುಮಾರ್. ಹಾಗಂತ ಪ್ರೇಮಕಥೆಗಷ್ಟೇ ಸೀಮಿತವಾಗಿಲ್ಲ, ಎಲ್ಲರಿಗೂ ಅನ್ವಿಯಿಸುವ ಕಥೆ ಚಿತ್ರದಲ್ಲಿ ಅಡಕ ವಾಗಿದೆ ಅದನ್ನು ತೆರೆಯಲ್ಲಿ ನೋಡದಿರೆ ಚಂದ ಎನ್ನುತ್ತಾರೆ ನಿರ್ದೇಶಕರು.
ಮುಗ್ಧ ಯುವಕನ ಲವ್ ಸ್ಟೋರಿ
ಶಿವ ೧೪೩ ಚಿತ್ರದ ಟ್ರೇಲರ್ ನೋಡಿದರೆ, ರಗಡ್ ಲುಕ್ನಲ್ಲಿ ಪ್ರತ್ಯಕ್ಷವಾಗುವ ಶಿವ ಎಲ್ಲರ ಗಮನ ಸೆಳೆಯುತ್ತಾನೆ. ಹೊಸತನ ಚಿತ್ರದಲ್ಲಿ ಹಾಸು ಹೊಕ್ಕಾಗಿದೆ. ಮುಗ್ಧತೆಯನ್ನೇ ಮೈಗೂಡಿಸಿಕೊಂಡ ಯುವಕನಲ್ಲಿ ಚಿಗುರುವ ಪ್ರೀತಿ. ಸಮಯ ಸಂದರ್ಭಕ್ಕೆ ಸಿಲುಕಿ ಆತ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಕಥೆ. ಇದರ ಜತೆಗೆ ಪ್ರೀತಿಯ ಆಯಾಮ, ಯಾವುದು ನಿಷ್ಕಲ್ಮಶ ಪ್ರೀತಿ, ಈ ಹುಂಬುತನದಲ್ಲಿ ನಾವು ಹೇಗೆ ತಪ್ಪು ಮಾಡುತ್ತೇವೆ. ತಪ್ಪು ಮಾಡದಂತೆ ನಾವು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಚಿತ್ರದಲ್ಲಿ ಮನಮುಟ್ಟುವಂತೆ ಹೇಳುವ ಪ್ರಯತ್ನ ಮಾಡಲಾಗಿದೆ.
ಡಬಲ್ ಶೇಡ್ನಲ್ಲಿ ಧೀರನ್
ಈ ಚಿತ್ರದಲ್ಲಿ ಧೀರನ್ ಅದ್ಭುತ ಅಭಿನಯ ತೋರಿದ್ದಾರೆ. ಚಿತ್ರಕ್ಕೆ ಅಗತ್ಯ ತಯಾರಿ ನಡೆಸಿದ್ದು, ಡಬಲ್ ಶೇಡ್ನಲ್ಲಿ ಮಿಂಚಿದ್ದಾರೆ. ಡ್ಯಾನ್ಸ್ಗೂ ಸೈ, ಆಕ್ಷನ್ಗೂ ಸೈ ಎನಿಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಮುಗ್ಧತೆಯಿಂದ ಗಮನಸೆಳೆದರೆ, ಮತ್ತೊಮ್ಮೆ ರಗಡ್ ಅವತಾರದಲ್ಲಿ ಮಿಂಚಿದ್ದಾರೆ. ಲಾಂಗ್ ಹಿಡಿದು ಅಬ್ಬರಿಸಿದ್ದಾರೆ. ಮಾನ್ವಿತಾ ನಾಯಕಿಯಾಗಿ ನಟಿಸಿದ್ದು, ಅವರು ಕೂಡ ಡಬ್ಬಲ್ ಶೇಡ್ನಲ್ಲಿಯೇ ಕಂಗೊಳಿಸಿದ್ದಾರೆ. ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ. ೨೬.೦೮.೨೦೨೨ ಬೆಂಗಳೂರು. ಶುಕ್ರವಾರ
ಮುತ್ತಿನ ಮತ್ತು ಗಮ್ಮತ್ತು..
ಈ ಹಿಂದೆಯೇ ಶಿವ ೧೪೩ ಚಿತ್ರದ ಹಾಡು ಬಿಡುಗಡೆಯಾಗಿತ್ತು. ರೊಮ್ಯಾಂಟಿಕ್ ಗಾನ ಮುತ್ತಿನ ಮತ್ತು ಏರಿಸಿತ್ತು. ಽರನ್ ಹಾಗೂ ಮಾನ್ವಿತಾ ಈ ಹಾಡಿನಲ್ಲಿ ಕಾಣಿಸಿಕೊಂಡು ಮುತ್ತಿನ ಮತ್ತೇರಿಸಿದರು. ಚಿತ್ರದ ಕಥೆ ಏನು ಬಯಸುತ್ತದೆಯೋ ಅದೆಲ್ಲವೂ ಚಿತ್ರದಲ್ಲಿದೆ. ಅನಗತ್ಯವಾಗಿ ಯಾವುದನ್ನು ತುಂಬಿಸಿಲ್ಲ. ಈ ಹಾಡು ಕೂಡ ಕಥೆಗೆ ಪೂರಕವಾಗಿದೆ. ತೆರೆಯಲ್ಲಿ ಚಿತ್ರ ನೋಡಿದ ಬಳಿಕ ಹಾಡಿನ ಮಹತ್ವ ತಿಳಿಯುತ್ತದೆಯಂತೆ.
***
ಶಿವ ೧೪೩ ತೆಲುಗು ಚಿತ್ರದ ರಿಮೇಕ್ ಆದರೂ, ಆ ಚಿತ್ರಕ್ಕಿಂತ ಭಿನ್ನವಾಗಿದೆ. ಇಲ್ಲಿ ಕ್ಲೈಮ್ಯಾಕ್ಸ್ ಬದಲಾಯಿಸಿದ್ದೇವೆ. ಸಂಭಾ ಷಣೆಯೂ ಹೊಸದಾಗಿದೆ. ಹಾಡುಗಳು ಕೂಡ ಕೇಳಲು ಮಧುರವಾಗಿವೆ. ಮೊದಲಾರ್ಧ ಲವ್, ಸೆಂಟಿಮೆಂಟ್ನಲ್ಲಿ ಸಾಗಿದರೆ, ಕ್ಲೈಮ್ಯಾಕ್ಸ್ನಲ್ಲಿ ಥ್ರಿಲ್ಲರ್ ಅಂಶಗಳನ್ನು ಬೆರೆಸಿದ್ದು ರೋಚಕತೆಯಿಂದ ಕಟ್ಟಿಕೊಡಲಾಗಿದೆ. ಪ್ರೇಕ್ಷಕರಿಗೆ ಯಾವೆಲ್ಲಾ ಅಂಶಗಳು ಬೇಕೋ ಅದೆಲ್ಲವೂ ಚಿತ್ರದಲ್ಲಿದೆ.
– ಅನಿಲ್ ಕುಮಾರ್ ನಿರ್ದೇಶಕ