Saturday, 14th December 2024

ಲವ್ ಯೂ ರಚ್ಚೂಗೆ ಧ್ರುವ ಸರ್ಜಾ ಸಾಥ್

ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ಲವ್ ಯು ರಚ್ಚು ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಯಾಗಿದ್ದು, ಡಿಸೆಂಬರ್ 31ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.

ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಚಿತ್ರಕ್ಕೆ ಈಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ.
ಇದು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತಂದಿದೆ. ಚಿತ್ರದ ಟ್ರೇಲರ್ ರಿಲೀಸ್‌ಗೆ ಸಿದ್ಧವಾಗಿದ್ದು, ಗುರುವಾರ ಧ್ರುವ ಸರ್ಜಾ ಬಿಡುಗಡೆ ಮಾಡಲಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಸಿನಿಮಾದಲ್ಲಿ ನವಿರಾದ ಪ್ರೇಮಕಥೆಯಿದೆ. ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆ. ರಚಿತಾ ಚಿತ್ರದ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಶಾಂಕ್ ಎಸ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ, ಅರುಣ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಚಂದನವನಕ್ಕೆ ಚರಿಷ್ಮಾ: ಲವ್ ಯು ರಚ್ಚು ಚಿತ್ರದಲ್ಲಿ  ಅಜಯ್ ರಾವ್ ಮಗಳು ಚರಿಷ್ಮಾ ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸ ಬೇಕಾಗಿತ್ತು. ಅಜಯ್ ರಾವ್ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿ ವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ನಿಮಾಪಕರು ನಿರ್ಧರಿಸಿದ್ದಾರೆ.

ಅದರಂತೆ ಬೇಬಿ ಚರಿಷ್ಮಾಳನ್ನು ಸಿನಿಮಾಕ್ಕೆ ಕರೆತರಲಾಗಿದೆ. ಸಿನಿಮಾದಲ್ಲಿ ಚರಿಷ್ಮಾ ತುಂಬಾ ಕ್ಯೂಟ್ ಆಗಿ ಕಾಣುತ್ತಾಳೆ ಎನ್ನುತ್ತಾರೆ ನಿರ್ಮಾಪಕ ಗುರು ದೇಶಪಾಂಡೆ. ಉಳಿದಂತೆ ಅಚ್ಯುತ್ ಕುಮಾರ್, ಬಿ.ಸುರೇಶ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.