೨೦೧೪ರಲ್ಲಿ ತೆರೆಗೆ ಬಂದ ದೃಶ್ಯ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸತನ ತಂದಿತು. ಇದು ಮಲಯಾಳಂನ ದೃಶ್ಯಂ ಚಿತ್ರದ ರಿಮೇಕ್ ಆಗಿದ್ದರೂ, ಕನ್ನಡ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿದರು. ಈ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಂಡಿತು.
ರಾಜೇಂದ್ರ ಪೊನ್ನಪ್ಪನಾಗಿ ತೆರೆಯಲ್ಲಿ ದರ್ಶನ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಯಾದರು. ಈಗ ಏಳು ವರ್ಷಗಳ ಬಳಿಕ ದೃಶ್ಯ ೨ ತೆರೆಗೆ ಬರು ತ್ತಿದೆ. ಈಗಾಗಲೇ ದೃಶ್ಯಂ ೨ ಮಲಯಾಳಂನಲ್ಲಿ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಅಂತೆಯೇ ಈಗ ಕನ್ನಡದಲ್ಲಿಯೂ ದೃಶ್ಯ ೨ ಮೂಡಿಬಂದಿದ್ದು, ಸಿನಿಪ್ರಿಯರು ಚಿತ್ರ ವನ್ನು ಮೆಚ್ಚುತ್ತಾರೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ದೃಶ್ಯ ೨ ಮಲಯಾಳಂ ಚಿತ್ರದಂತೆಯೇ ಯಥಾವತ್ತಾಗಿ ಮೂಡಿಬಂದಿದೆ ಎಂಬ ಸುಳಿವಿದೆ. ಅದು ಈಗಾಗಲೇ ಟ್ರೇಲರ್ನಲ್ಲಿ ಸಾಬೀತಾಗಿದೆ. ಆದರೆ ಈ ಸಿನಿಮಾದಲ್ಲಿ ಒಂದಷ್ಟು ಬದಲಾ ವಣೆ ಮಾಡಿಕೊಳ್ಳಲಾಗಿದೆ. ಅದನ್ನು ತೆರೆಯಲ್ಲಿ ನೋಡಿದಾಗ ತಿಳಿಯುತ್ತದೆ ಎನ್ನುತ್ತಾರೆ ನಿರ್ದೇಶಕ ಪಿ.ವಾಸು. ದೃಶ್ಯ ಕ್ರೈಂ ಥ್ರಿಲ್ಲರ್, ಫ್ಯಾಮಿಲಿ ಸೆಂಟಿಮೆಂಟ್ನ ಸಿನಿಮಾ. ಮೊದಲ ಭಾಗದಲ್ಲಿ ಬಲು ಜಾಣ್ಮೆಯಿಂದ ಕೊಲೆಯ ಪ್ರಕರಣವನ್ನು ಮುಚ್ಚಿ ಹಾಕಿದ ರಾಜೇಂದ್ರ ಪೊನ್ನಪ್ಪ, ಎರಡನೇ ಭಾಗದಲ್ಲಿ ಆ ಕೊಲೆಯ ಕೇಸ್ ರೀ ಓಪೆನ್ ಆದಾಗ ಅದರಿಂದ ಎದುರಾ ಗುವ ಸಂಕಷ್ಟದಿಂದ ಹೇಗೆ ತನ್ನ ಫ್ಯಾಮಿಲಿಯನ್ನು ಕಾಪಾಡುತ್ತಾನೆ. ಅದಕ್ಕಾಗಿ ಯಾವ ತಂತ್ರ ಹೆಣೆಯುತ್ತಾನೆ ಎಂಬುದೇ ಚಿತ್ರದ ಸಸ್ಪೆನ್ಸ್.
ಭಾವನಾತ್ಮಕ ದೃಶ್ಯ: ದೃಶ್ಯ ೨ ಮಲಯಾಳಂನ ರಿಮೇಕ್ ಆಗಿದೆ. ಅದೇ ರೀತಿಯ ಕಥೆ ಚಿತ್ರದಲ್ಲಿದೆ. ಅದರ ಜತೆಗೆ ಇಲ್ಲಿ ಒಂದ ಷ್ಟು ಭಾವನಾತ್ಮಕ ಅಂಶಗಳನ್ನು ಸೇರಿಸಲಾ ಗಿದೆ. ದೃಶ್ಯ ಕೌಟುಂಬಿಕ ಕಥೆಯ ಚಿತ್ರವಾಗಿರುವುದರಿಂದ ಇಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ತಂದೆ ತನ್ನ ಮಡದಿ, ಮಕ್ಕಳನ್ನು ಹೇಗೆ ಸಲಹುತ್ತಾನೆ. ತನಗೆ ಸಂಕಷ್ಟ ಎದುರಾಗಿದೆ ಎಂಬ ಭಯ ಕಾಡುತ್ತಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೇ, ಮಡದಿ, ಮಕ್ಕಳಿಗೆ ಹೇಗೆ ಧೈರ್ಯ ತುಂಬುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಮನ ಮುಟ್ಟುವಂತೆ ಹೇಳುವ ಪ್ರಯತ್ನ ಮಾಡಲಾಗಿದೆ.
ಜತೆಗೆ ಈ ಭಾಗದಲ್ಲಿ ಒಂದು ಹಾಡನ್ನು ಸೇರಿಸಲಾಗಿದೆ. ಈ ಸನ್ನಿವೇಶ ಪ್ರೇಕ್ಷಕರನ್ನು ಸೆಳೆಯುತ್ತದೆ. ಪ್ರತಿ ಕುಟುಂಬವೂ ಈ ಸನ್ನಿ ವೇಶಕ್ಕೆ ಕನೆಕ್ಟ್ ಆಗುತ್ತದೆ. ರಾಜೇಂದ್ರ ಪೊನ್ನಪ್ಪನ ಚಾಣಾಕ್ಷತನದಿಂದ, ಆತನ ಕುಟುಂಬದಿಂದ ದೊಡ್ಡ ಆಪತ್ತಿನಿಂದ ಹೇಗೆ
ಪಾರಾಗುತ್ತದೆ ಎಂಬುದೇ ಚಿತ್ರದ ಸಸ್ಪೆನ್ಸ್ ಆಗಿದೆಯಂತೆ.
ಕಥೆಗಾರರಾದ ಅನಂತ್ನಾಗ್: ದೃಶ್ಯ ೨ ಚಿತ್ರದಲ್ಲಿ ಹಿರಿಯ ನಟ ಅನಂತ್ನಾಗ್ ನಟಿಸದ್ದಾರೆ ಎಂಬುದು ಚಿತ್ರದ ಮತ್ತೊಂದು ವಿಶೇಷ. ಹಾಗಾಗಿ ಚಿತ್ರವನ್ನು ಕಣ್ತುಂಬಿಕೊಳ್ಳಲೇ ಬೇಕು ಎಂದು ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇಲ್ಲಿ ಅನಂತ್ನಾಗ್ ಸ್ಟೋರಿ ರೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಇಡೀ ಚಿತ್ರಕ್ಕೆ ಟ್ವಿಸ್ಟ್ ನೀಡುವ ಪಾತ್ರವಾಗಿದ್ದು, ಈ ಪಾತ್ರಕ್ಕೆ ಅನಂತ್ ನಾಗ್ ಅವರೇ ಸೂಕ್ತ ಎಂದು ನಿರ್ಧರಿಸಿದ ನಿರ್ದೇಶಕರು ಅವರನ್ನು ಪ್ರೀತಿಯಿಂದ ಚಿತ್ರಕ್ಕೆ ಕರೆತಂದಿದ್ದಾರೆ. ಅಂದುಕೊಂಡಂತೆ ಈ ಪಾತ್ರ ಬಲು ಅಚ್ಚುಕಟ್ಟಾಗಿ ಮೂಡಿಬಂದಿದೆ.