Thursday, 12th December 2024

ಫ್ಯಾಂಟಸಿ ಪ್ರಪಂಚದಲ್ಲಿ ವಿಸ್ಮಯದ ಕಥೆ

ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. ಇದೀಗ ಅಂತಹದ್ದೇ ಥ್ರಿಲ್ಲರ್ ಸಿನಿಮಾವೊಂದು ಚಂದನವನ ದಲ್ಲಿ ಸಿದ್ಧವಾಗಿದೆ. ಪ್ರಸ್ತುತ ಫ್ಯಾಂಟಸಿ ಸದ್ದು ಜೋರಾಗೇ ಇದೆ. ಹೊಸಬರೇ ಸೇರಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಯಾಗಿದ್ದು ಗಮನಸೆಳೆಯುತ್ತಿದೆ. ಜೋಕರ್‌ನಂತೆ ಮುಖಕ್ಕೆ ಬಣ್ಣಹಚ್ಚಿಕೊಂಡ ಪುಟ್ಟ ಹುಡುಗ. ಆತನ ಕೈಯಲ್ಲಿ ರಕ್ತಸಿಕ್ತವಾದ ಚಾಕು, ಇದನ್ನು ಗಮನಿಸಿದರೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಎನ್ನುವುದು ಖಚಿತವಾಗುತ್ತದೆ.

ಪ್ರಶಾಂತ್.ಟಿ.ಆರ್

ಫ್ಯಾಂಟಸಿ ಒಂದು ಕಾಲ್ಪನಿಕ ಕಥಾಹಂದರದ ಚಿತ್ರ. ಆದರೂ ಚಿತ್ರದ ಕಥೆ ನೈಜತೆಗೆ ಹತ್ತಿರವಾಗಿದೆ. ನಮ್ಮ ಸುತ್ತಮುತ್ತ ನಡೆದ, ನಡೆಯುತ್ತಿರುವ, ಕೆಲವೊಂದು ಘಟನೆ ಗಳನ್ನು ಆರಿಸಿ ಚಿತ್ರದ ಕಥೆ ಹೆಣೆದಿದ್ದಾರೆ ನಿರ್ದೇಶಕ ಪವನ್‌ಕುಮಾರ್. ನಾಲ್ಕು ಪ್ರಮುಖ ಪಾತ್ರಗಳ ಸುತ್ತಲೇ ಚಿತ್ರದ ಕಥೆ ಸುತ್ತುತ್ತದೆ. ಅದೊಂದು ಸುಂದರ ಸಂಸಾರ, ಯಾವು ದಕ್ಕೂ ಕೊರತೆ ಇರದ ಶ್ರೀಮಂತ ಕುಟುಂಬ. ಮನೆಯೊಡೆಯ ತನ್ನ ಮಡದಿ , ಮಗುವಿ ನೊಂದಿಗೆ ಸುಂದರ ಬದುಕು ಕಟ್ಟಿಕೊಂಡಿರುತ್ತಾನೆ. ಆದರೆ ಇದ್ದಕ್ಕಿದ್ದಂತೆ, ಆ ಸಂಸಾರ ದಲ್ಲಿ ಬಿರುಗಾಳಿ ಬೀಸುತ್ತದೆ.

ಪರಿಣಾಮ, ಸಂಸಾರವೇ ಅಲ್ಲೋಲ ಕಲ್ಲೋಲವಾಗುತ್ತದೆ. ಇದ್ದ ಒಬ್ಬ ಮುದ್ದಾದ ಮಗು ನೊಂದು ಆಸ್ಪತ್ರೆ ಸೇರುತ್ತದೆ. ಅಷ್ಟಕ್ಕೂ ಆ ಸಂಸಾರ ಮುರಿಯರಲು ಕಾರಣವಾದರೂ ಏನು? ಆ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದಾದರು ಯಾರು, ಹೀಗೆ ಒಂದೊಂದೇ ಪ್ರಶ್ನೆ ಗಳು ಬಿಚ್ಚಿಕೊಳ್ಳತ್ತಾ ಸಾಗುತ್ತದೆ. ಶೀರ್ಷಿಕೆಗೆ ತಕ್ಕಂತೆ ಭ್ರಮೆ ಮತ್ತು ವಾಸ್ತವದ ನಡುವೆ ಇಡೀ ಕಥೆ ತೆರೆದುಕೊಳ್ಳಲಿದ್ದು, ರೋಚಕ ಟ್ವಿಸ್ಟ್‌ಗಳು ಕುತೂಹಲ ಮೂಡಿಸುತ್ತ ಸಾಗ ಲಿದೆ.

ಮುಗ್ದ ಮನಸಿನ ಪ್ರತಿಬಿಂಬ

ಡ್ರಾಮಾ ಜ್ಯೂನಿಯರ್ಸ್ ಸೀಸನ್? 3ರ ಸ್ಪರ್ಧಿ ಅನುರಾಗ್?, ಫ್ಯಾಂಟಸಿ ಸಿನಿಮಾದ ಕೇಂದ್ರ ಬಿಂದು. ಚಿತ್ರದಲ್ಲಿ ಆತನ ಮಾನಸಿಕ ಸ್ಥಿತಿಗತಿ ಹೇಗೆಲ್ಲ ಬದಲಾಗುತ್ತದೆ. ಅದರಿಂದ ಎದುರಾಗುವ ಅನಾಹುತಗಳೇನು ಎಂಬುದೇ ಚಿತ್ರದ ತಿರುಳು. ಇದು ಒಂದು ಮನೆ ಯಲ್ಲಿ ನಡೆಯುವ ಕಥೆ, ದೊಡ್ಡ ಬಂಗಲೆಯಲ್ಲಿ ಬೇರೆಯವರ ಸಂಪರ್ಕವೇ ಇಲ್ಲದಿದ್ದಾಗ, ಕಾಡುವ ಒಂಟಿತನ, ಮಾನಸಿಕ ನೋವು ಇವೆಲ್ಲವೂ ಇಲ್ಲಿ ಬಿಂಬಿತವಾಗಿದೆ. ಪ್ರೀತಿಯಿಂದ ವಂಚಿತವಾಗಿ ಚಡಪಡಿಸುವ ಮಗುವಾಗಿ ಅನುರಾಗ್ ನಟಿಸಿದ್ದಾರೆ. ತಂದೆಯಾಗಿ ಹೇಮಂತ್ ಕಾಣಿಸಿಕೊಂಡಿದ್ದಾರೆ.

ಬಿಬ್‌ಬಾಸ್ ಬೆಡಗಿ ಇಲ್ಲಿ ಖಳನಟಿ
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿತ್ತು. ಈ ಧಾರಾವಾಹಿಯಲ್ಲಿ ಖಳನಟಿಯಾಗಿ ಕಾಣಿಸಿ ಕೊಂಡ ನಟಿ ಪ್ರಿಯಾಂಕಾ, ಫ್ಯಾಂಟಸಿ ಚಿತ್ರದ ಮೂಲಕವೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿಯೂ ಖಳನಟಿಯಾಗಿ ಯೇ ಬಣ್ಣಹಚ್ಚಿದ್ದು, ಮೊದಲ ಚಿತ್ರದಲ್ಲೇ ಹೊಸ ಛಾಪು ಮೂಡಿಸಲು ರೆಡಿ ಯಾಗಿದ್ದಾರೆ. ಹಾಗಾದರೆ ಚಿತ್ರದಲ್ಲಿ ಬರುವ ಸುಂದರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸುವಲ್ಲಿ ಈ ಖಳನಟಿಯ ಕೈವಾಡವೂ ಇದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅದೆಲ್ಲಕ್ಕೂ ಚಿತ್ರದಲ್ಲಿಯೇ ಉತ್ತರ ಸಿಗಲಿದೆ ಎನ್ನುತ್ತಾರೆ ನಿರ್ದೇಶಕರು.

ಸ್ಪೂರ್ತಿ ತುಂಬಿದ ಚಿತ್ರ
ಪವನ್ ಮೊದಲ ಬಾರಿಗೆ ನಿರ್ದೇಶಕರಾಗಿ ಫ್ಯಾಟಸಿ ಎಂಬ ಕಥೆಯನ್ನು ತೆರೆಗೆ ಹೊತ್ತು ತರುತ್ತಿದ್ದಾರೆ.? ಡ್ರೀಮ್? ಫಿಲಂಸ್? ಲಾಂಛನದಲ್ಲಿ ಸಿದ್ಧವಾಗಿರುವ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣವನ್ನೂ ಮಾಡಿ ದ್ದಾರೆ. ಈ ಹಿಂದೆ. ಸಂಹಾರ, ಅಮ್ಮ ಐ ಲವ್ ಯು, ಆದ್ಯ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪವನ್, ಈಗ ನಿರ್ದೇಶಕ ರಾಗಲು ಚಿರಂಜೀವಿ ಸರ್ಜಾ ಅವರೇ ಸ್ಫೂರ್ತಿಯಂತೆ. ತಾನು ನಿರ್ದೇಶಕನಾದ ಮೇಲೆ ಚಿರು ಅವರ ಚಿತ್ರಕ್ಕೆ ಮೊದಲು ಆಕ್ಷನ್‌ ಕಟ್ ಹೇಳಬೇಕು ಎಂದುಕೊಂಡಿ ದ್ದರಂತೆ.

ಆದರೆ ಪವನ್ ಆಸೆ ಈಡೇರಲೇ ಇಲ್ಲ. ಚಿರು ಅವರನ್ನು ಕಳೆದುಕೊಂಡ ನೋವು ಅವರಲ್ಲಿದೆ. ಫ್ಯಾಂಟಸಿ ಚಿತ್ರವನ್ನು ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಮ್ಮಿಕೊಂಡಿದ್ದ ಚಿತ್ರತಂಡ, ಅದರಂತೆ ಬೆಂಗಳೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಮುಂದಿನ ಹಂತದ ಚಿತ್ರೀ ಕರಣ ಮಡಿಕೇರಿಯಲ್ಲಿ ನವೆಂಬರ್‌ನಿಂದ ಪ್ರಾರಂಭವಾಗಲಿದೆ. ಇನ್ನು ಕೆಲವು ದಿನಗಳ ಚಿತ್ರೀಕರಣ ಬಾಕಿಯಿದ್ದು, ಬಳಿಕ ಪೋಸ್ಟ್‌ ಪೊಡಕ್ಷನ್ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದೆ. ಜನವರಿಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.