Sunday, 8th September 2024

ಗರುಡನ ಆಗಮನ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲಿ ಪಂಚಿಂಗ್ ಆಗಿರುವ ಟೈಟಲ್‌ನ ಸಿನಿಮಾ ಗರುಡ ಈ ವಾರ ತೆರೆಗೆ ಬಂದಿದೆ. ಗರುಡ ಆಕ್ಷನ್ ಸಿನಿಮಾ ಎನ್ನುವುದು ಶಿರ್ಷಿಕೆಯಲ್ಲಿಯೇ ಸ್ಪಷ್ಟ ವಾಗುತ್ತದೆ.

ಹಾಗಂತ ಗರುಡ ಸಾಹಸ ಪ್ರಧಾನ ಕಥೆಗೆ ಸೀಮಿತವಾಗಿಲ್ಲ. ಇಲ್ಲಿ ಕೌಟುಂಬಿಕ ಕಥೆಯ ಆಯಾಮವಿದೆ. ಮನಸೆಳೆಯುವ ಸೆಂಟಿಮೆಂಟ್ ಸ್ಟೋರಿಯೂ ಇದೆ. ಅದನ್ನು ಎಲ್ಲರಿಗೂ ರುಚಿಸುವಂತೆ ತೆರೆಗೆ ತಂದಿದ್ದಾರೆ ನಿರ್ದೇಶಕ ಧನಕುಮಾರ್. ಗರುಡ ಅಂದಾಕ್ಷಣ ನಮಗೆಲ್ಲಾ ನೆನೆಪಿಗೆ ಬರುವುದು ನಿಖರ ಭೇಟೆ. ಈ ಚಿತ್ರದಲ್ಲಿಯೂ ಗರುಡ ಖಂಡಿತಾ ಭೇಟೆಯಾಡುತ್ತದೆ. ಅದು ಯಾರು ಎಂಬುದನ್ನು ಚಿತ್ರ ನೋಡಿದ ಮೇಲೆಯೇ ತಿಳಿಯುತ್ತದೆ.

ಭಾವನಾತ್ಮಕ ನೆಲೆಗಟ್ಟು

ಗರುಡ ಚಿತ್ರದಲ್ಲಿ ಭಾವನಾತ್ಮಕತೆಯ ಕಥೆಯನ್ನು ಹೆಣೆದಿದ್ದಾರೆ ಸಿದ್ದಾರ್ಥ್. ಈ ಹಿಂದೆ ಸಿದ್ಧಾರ್ಥ ಸಿಪಾಯಿ ಚಿತ್ರದಲ್ಲಿ ನಟಿಸಿದ್ದರು. ಸಾಹಸ ಪ್ರಧಾನ ಕಥೆಯ ಆ ಚಿತ್ರ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಲಿಲ್ಲ. ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಅಂಶಗಳು ಇಲ್ಲದಿರುವುದನ್ನು ಮನಗಂಡ ಸಿದ್ದಾರ್ಥ, ಕೌಟುಂಬಿಕ ಕಥೆಗೆ ಹೆಚ್ಚು ಆದ್ಯತೆ ನೀಡಿ ಹೊಸ ಕಥೆಯನ್ನು ರಚಿಸಿದರು. ಧನಕುಮಾರ್ ಆ ಕಥೆಯನ್ನು ಸಿನಿಮಾ ರೂಪದಲ್ಲಿ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ.

ಸೆಂಟಿಮೆಂಟ್‌ಗೂ ಸೈ ಆಕ್ಷನ್‌ಗೂ ಸೈ

ಚಿತ್ರದ ನಾಯಕ ಆಂಗ್ರಿ ಯಂಗ್ ಮ್ಯಾನ್. ಕಾಲೇಜು ದಿನಗಳಲ್ಲಿಯೂ ಸ್ನೇಹಿತರಿಗೆ ಪ್ರಾಣಕ್ಕೆ ಪ್ರಾಣಕೊಡುವ ವ್ಯಕ್ತಿತ್ವ ಆತನದ್ದು, ತನ್ನ ತಂಟೆಗೆ ಬಂದವರನ್ನು ಮುಲಾಜಿಲ್ಲದೆ ಹೆಡೆಮುರಿ ಕಟ್ಟುವ ಧೈರ್ಯ ವಂತ. ಅಂತೆಯೇ ಬೇರೆಯವರ ಸಂಕಷ್ಟಕ್ಕೆ ಮಿಡಿ ಯುವ ಮಾನವೀಯ ಗುಣವೂ ಈತನಲ್ಲಿರುತ್ತದೆ. ಇದೇ ಈತನಿಗೆ ಮುಳುವಾಗುತ್ತದೆ. ಅದೊಂದು ಘಟನೆಯಿಂದ ನಾಯಕ ತನ್ನ ಕುಟುಂಬದಿಂದಲೇ ದೂರವಾಗುವ ಸಂದರ್ಭ ಎದುರಾಗು ತ್ತದೆ. ಅಷ್ಟಕ್ಕೂ ನಾಯಕ ಮಾಡಿದ ತಪ್ಪಾದರು ಏನು, ಆತ ತನ್ನ ತುಂಬು ಕುಟುಂಬವನ್ನು ಯಾಕೆ ತೊರೆಯುತ್ತಾನೆ ಎಂಬುದೇ ಚಿತ್ರದ ಸ್ಟೋರಿ.

ಕಾಳಿಂಗನ ವಿಷವ್ಯೂಹ
ಆತ ಕಾಳಿಂಗ, ಆತನನ್ನು ಕಂಡರೆ ಎಲ್ಲರಿಗೂ ಭಯ. ಯಾವ ಪೊಲೀಸರಿಗೂ ಹೆದರುವ ವ್ಯಕ್ತಿ ಅವನಲ್ಲ. ಆದರೆ ಗರುಡನನ್ನು ಕಂಡರೆ ಕಾಳಿಂಗ ಥರಗುಟ್ಟುತ್ತಾನೆ. ಗರುಡ, ಕಾಳಿಂಗ ಮುಖಾಮುಖಿಯಾದರೆ ಅಲ್ಲಿ ಕಂಪನವೇ ಆಗುತ್ತದೆ. ಈ ಕಾಳಿಂಗ ಯಾರು, ಆತನಿಗೂ ಗರುಡನಿಗೂ ಯಾಕೆ ದ್ವೇಷ ಎಂಬ ವಿಚಾರ ಕೊನೆಯ ವರೆಗೂ ಕಾಡುತ್ತಾ ಸಾಗುತ್ತದೆ. ಇವನೇ ಗರುಡ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅದು ಪೊಲೀಸ್ ಅಧಿಕಾರಿಯಾಗಿ. ಕಿಟ್ಟಿಯ ಪಾತ್ರಕ್ಕೆ ಬಹಳ ಮಹತ್ವ ಇದೆ. ಹಾಗಾಗಿ ಇಲ್ಲಿ ಗರುಡ ಯಾರು ಎಂಬ ಕುತೂಹಲವೂ ಕಾಡುತ್ತದೆ. ಇನ್ನು ರಮೇಶ್ ಭಟ್ ನಿವೃತ್ತ ಸೇನಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಗ್ಲಾಮರ್ ಗೊಂಬೆ ಆಶಿಕಾ
ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ಹಾಗೂ ಐಂದ್ರಿತಾ ರೈ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ದಲ್ಲಿ ಆಶಿಕಾ ಗ್ಲಾಮರ್ ಗೊಂಬೆಯಾಗಿ ಕಂಗೊ
ಳಿಸಿದ್ದಾರೆ. ಬೀಚ್ ಸೈಡ್‌ನಲ್ಲಿ ಬಿಯರ್ ಬಾಟಲ್ ಹಿಡಿದು ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಐಂದ್ರಿತಾ ರೇ ಕೂಡ ತಮ್ಮ ನಟನೆಯ ಮೂಲಕವೇ ಗಮನಸೆಳೆದಿದ್ದಾರೆ.

error: Content is protected !!