ಕಿಚ್ಚ ಸುದೀಪ್ಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಿಚ್ಚನಿಗೆ ಅನೇಕ ಗೌರವಗಳು ಸಂದಿವೆ. ಭಾರತೀಯ ಅಂಚೆ ಇಲಾಖೆಯು ಕಿಚ್ಚ ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಯನ್ನು ಹೊರ ತರುತ್ತಿದೆ. ಇಪ್ಪತ್ತೈದು ವರ್ಷಗಳ ಸಿನಿಜರ್ನಿಯನ್ನು ಪೂರ್ಣ ಗೊಳಿಸಿರುವ ಸುದೀಪ್ ಅವರ ಸಾಧನೆಯನ್ನು ಗುರುತಿಸಿರುವ ಭಾರತೀಯ ಅಂಚೆ ಇಲಾಖೆಯೂ ಅದನ್ನು ಅಂಚೆ ಲಕೋಟೆಯ ಮೂಲಕ ಸ್ಮರಣೀಯ ವಾಗಿಸುತ್ತಿದೆ.
ಪುರಿ ಬೀಚ್ನಲ್ಲಿ ಅರಳಿದ ಕಿಚ್ಚನ ಕಲಾಕೃತಿ: ಸುದೀಪ್ ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೆಯಾದ
ಛಾಪು ಮೂಡಿಸಿ, ಪ್ರಸಿದ್ಧಿ ಪಡೆದಿದ್ದಾರೆ. ಹಾಗಾಗಿ ಕಿಚ್ಚನಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಅವರ ಜನ್ಮದಿನವನ್ನು ಸ್ಮರಣೀಯ ವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಪ್ರಸಿದ್ಧ ಮರಳು ಶಿಲ್ಪಿ ಮಾನಸ್ ಕುಮಾರ್, ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸಿದ್ದಾರೆ. ಆ ಮೂಲಕ ಜನ್ಮ ದಿನದ ಶುಭಾಶಯಗಳನ್ನು
ತಿಳಿಸಿದ್ದಾರೆ. ಈ ಶಿಲ್ಪವು ಇಪ್ಪತ್ತು ಅಡಿ ಅಗಲ ಏಳು ಅಡಿ ಎತ್ತರವಿದೆ.
ಇದಕ್ಕಾಗಿ ಸುಮಾರು ಇಪ್ಪತ್ತು ಟನ್ ಮರಳನ್ನು ಬಳಸಲಾಗಿದೆ. ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರ ವಾಗುತ್ತಿರುವ ಎರಡನೇ ಕಲಾವಿದ ಕಿಚ್ಚ ಸುದೀಪ್. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ ಎಪ್ಪತ್ತನೇ ಜನ್ಮದಿನ ಪ್ರಯುಕ್ತ ಪುರಿ ಕಡಲ ತೀರದಲ್ಲಿ ಮರಳು ಶಿಲ್ಪ ರಚಿಸಲಾಗಿತ್ತು.