Sunday, 15th December 2024

ಸ್ಪೂಕಿ ಕಾಲೇಜ್‌ನಲ್ಲಿ ಹಾರರ್‌ ಸದ್ಧು

ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಶ್ರೀದೇವಿ ಎಂಟರ್‌ಟೇನರ‍್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಸ್ಪೂಕಿ ಕಾಲೇಜ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.

ರೊಮ್ಯಾಂಟಿಕ್ ಹಾಡು ಇದಾಗಿದ್ದು, ಕಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿ ಕೊಂಡಿದೆ. ಈ ಹಾಡಿನಲ್ಲಿ ಕನ್ನಡದ ಪ್ರಸಿದ್ಧ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರಂತೆ. ಅದು ಯಾರು ಎಂಬುದನ್ನು ಚಿತ್ರ ತಂಡ ಗುಟ್ಟಾಗಿ ಇಟ್ಟು ಕೊಂಡಿದೆ. ಹಾರಾರ್, ಕಾಮಿಡಿ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜೆ.ಭರತ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಣೆಯನ್ನು ಭರತ್ ಅವರೆ ಬರೆದಿ ದ್ದಾರೆ.

ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ಸ್ಪೂಕಿ ಕಾಲೇಜ್‌ನ ನಾಯಕನಾಗಿ ನಟಿಸು ತ್ತಿದ್ದಾರೆ. ದಿಯಾ ಚಿತ್ರದ ಮೂಲಕ ಪ್ರಸಿದ್ಧಿ ಪಡೆದ ಖುಷಿ ರವಿ ನಾಯಕಿಯಾಗಿ ಬಣ್ಣಹಚ್ಚಿ ದ್ದಾರೆ. ಅಜಯ್ ಪೃಥ್ವಿ, ಹನುಮಂತೇಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯಾ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಧಾರವಾಡದಲ್ಲಿರುವ ೧೦೩ ವರ್ಷಗಳ ಹಿಂದಿನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು ವಾಗಿದೆ. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಜತೆಗೆ ದಾಂಡೇಲಿಯ ದಟ್ಟ ಅರಣ್ಯದಲ್ಲಿಯೂ ಶೂಟಿಂಗ್ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ. ಈ ಹಿಂದೆಯೂ ಹಲವು ಹಾರಾರ್ ಚಿತ್ರಗಳು ಮೂಡಿಬಂದಿವೆಯಾದರೂ, ಸೂಕಿ ಕಾಲೇಜ್‌ನಲ್ಲಿ ಒಂದಷ್ಟು ವಿಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಸಾಮಾನ್ಯವಾಗಿ ಎಲ್ಲಾ ಕಾಲೇಜಿನಲ್ಲಿ ಲವ್ ಸ್ಟೋರಿ ನೋಡಬಹುದು. ಆದರೆ ದೆವ್ವದ ಸ್ಟೋರಿ ನೋಡಬೇಕಾದರೆ ಸ್ಪೂಕಿ ಕಾಲೇಜ್‌ಗೆ ಬರಬೇಕು ಎನ್ನುತ್ತಾರೆ ನಿರ್ದೇಶಕ ಭರತ್. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್
ಸಂಗೀತ ಹಾಗೂ ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ಸ್ಪೂಕಿ ಕಾಲೇಜ್‌ನ ಅಂದವನ್ನು ಹೆಚ್ಚಿಸಿದೆ.