Sunday, 15th December 2024

ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾದ ಛಲಪತಿ

ದಂಡುಪಾಳ್ಯದ ಪಾಪಿಗಳ ದಂಡನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿ ಛಲಪತಿ ಈಗ ಮತ್ತೆ ಬಂದಿದ್ದಾರೆ. ಈ ಬಾರಿ ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಪ್ರೀತಿ, ಮೋಸ, ಸೇಡಿನ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ದಂಡುಪಾಳ್ಯದ ಕೆಲವು ಸನ್ನಿವೇಶಗಳಲ್ಲಿ ಬರುತ್ತವೆ. ಅಲ್ಲಿ ಛಲಪತಿ ಮತ್ತೆ ದಂಡುಪಾಳ್ಯದ ಗ್ಯಾಂಗನ್ನು ಮತ್ತೆ ಮುಖಾಮುಖಿಯಾಗಲಿದ್ದಾರೆ.

ಛಲಪತಿಯಾಗಿ ಆರ್ಮುಗಂ ರವಿಶಂಕರ್ ಅಬ್ಬರಿಸಿದ್ದಾರೆ. ರವಿಶಂಕರ್ ತಮ್ಮ ಪಾತ್ರದ ಬಗ್ಗೆ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್ : ಹುಬ್ಬಳ್ಳಿ ಡಾಬಾದಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದೀರ ಈ ಚಿತ್ರದಲ್ಲಿ ನಿಮ್ಮ ಪಾತ್ರ ?
ರವಿಶಂಕರ್ : ಹುಬ್ಬಳ್ಳಿ ಡಾಬಾ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಽಕಾರಿಯ ಪಾತ್ರ. ಈ ಹಿಂದೆ ದಂಡುಪಾಳ್ಯದಲ್ಲಿ ಛಲಪತಿ ಎಂಬ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೆ. ಇಲ್ಲಿಯೂ ಅದೇ ಪಾತ್ರದಲ್ಲಿ ಮತ್ತೆ ಬಂದಿ ದ್ದೇನೆ.

ದಂಡುಪಾಳ್ಯದ ಗ್ಯಾಂಗ್ ನನ್ನನ್ನು ಮುಖಾಮುಖಿಯಾಗುತ್ತದೆ. ಬಳಿಕ ಏನಾಗುತ್ತದೆ ಎಂಬುದನ್ನು ತೆರೆಯಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ. ಅದನ್ನು ಸಿನಿಮಾದಲ್ಲಿಯೇ ನೊಡಿ ತಿಳಿಯಬೇಕು.

ವಿ.ಸಿ : ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣ ?
ರವಿಶಂಕರ್ : ನಿರ್ದೇಶಕ ಶ್ರೀನಿವಾಸ್ ಅವರ ಜತೆ ಈ ಹಿಂದೆ ಕೋಟೆ ಎಂಬ ಚಿತ್ರದಲ್ಲಿ ನಟಿಸಿದ್ದೆ. ಆ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವೇ ಸಿಕ್ಕಿತ್ತು. ಅದರಲ್ಲಿ ಬರುವ ಡೈಲಾಗ್ ತುಂಬಾ ಫೇಮಸ್ ಆಗಿತ್ತು. ಆ ಬಳಿಕ ದಂಡುಪಾಳ್ಳಯ ಸಿನಿಮಾದಲ್ಲಿ ನಟಿಸಿದೆ. ಅದು ನನಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು. ಸೀರೀಸ್ ಆಗಿ ಬಂದ ದಂಡುಪಾಳ್ಯ ಹಿಟ್ ಆಯಿತು. ಆ ಬಳಿಕ ನಿರ್ದೇಶಕರು ಈ ಚಿತ್ರದ ಕಥೆಯನ್ನು ನನಗೆ ಹೇಳಿದರು. ಕಥೆ ಕೆಳಿ ನನಗೆ ತುಂಬಾ ಇಷ್ಟವಾಯಿತು. ನಟಿಸಲು ಸಂತೊಷದಿಂದಲೇ ಒಪ್ಪಿದೆ. ಇದರಲ್ಲಿಯೂ ನನಗೆ ಒಳ್ಳೆಯ ಪಾತ್ರವೇ ಸಿಕ್ಕಿದೆ.

ವಿ.ಸಿ : ಚಿತ್ರದಲ್ಲಿ ಕ್ರೌರ್ಯವೂ ಇರುವಂತಿದೆಯಲ್ಲ ?
ರವಿಶಂಕರ್ : ಚಿತ್ರದಲ್ಲಿ ಮರ್ಡರ್ ಮಿಸ್ಟರಿಯ ಕಥೆ ಇರುವುದರಿಂದ ಹಾಗನ್ನಿಸುತ್ತದೆ. ಇಲ್ಲಿ, ಲವ್, ಸೆಂಟಿಮೆಂಟ್ ಎಲ್ಲವೂ
ಇದೆ. ಟೋಟಲಿ ಒಂದು ಥ್ರಿಲ್ಲರ್ ಕಥೆ ಚಿತ್ರದಲ್ಲಿ ಸಾಗುತ್ತದೆ. ಕುತೂಹಲ ಮೂಡಿಸುತ್ತಾ ಚಿತ್ರ ತೆರೆಯಲ್ಲಿ ಸಾಗುತ್ತದೆ. ಒಂದೇ
ಮಾತಿನಲ್ಲಿ ಹೇಳುವುದಾದರೆ ಚಿತ್ರದಲ್ಲಿ ಮನರಂಜನೆಯೇ ಮುಖ್ಯವಾಗಿದೆ.

ವಿ.ಸಿ : ಚಿತ್ರದ ಬಗ್ಗೆ ನಿರೀಕ್ಷೆ ಹೇಗಿದೆ ?
ರವಿಶಂಕರ್ : ನಿರ್ದೇಶಕರು ಒಳ್ಳೆಯ ಕಣೆದಿದ್ದಾರೆ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಗೂ ತಂದಿದ್ದಾರೆ. ಸಿನಿಮಾದಲ್ಲಿ ನನ್ನ
ಪಾತ್ರಕ್ಕೂ ಮಹತ್ವವಿದೆ. ಹಾಗಾಗಿ ಚಿತ್ರ ಗೆಲ್ಲುವ ವಿಶ್ವಾಸವಿದೆ. ನನಗೆ ಮತ್ತಷ್ಟು ಪ್ರಸಿದ್ಧಿ ತಂದುಕೊಡಲಿದೆ ಎಂಬ ವಿಶ್ವಾಸವೂ ಇದೆ.

*

ಈ ಚಿತ್ರದ ಹೆಮ್ಮೆಯ ವಿಷಯವೆಂದರೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಎಂಭತ್ತರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ನಿರ್ದೇಶಕರಿಗೆ ಅವರಿಗೆ ಅವಕಾಶ ನೀಡಿದ್ದಾರೆ. ಇದು ನಮ್ಮ ಚಿತ್ರತಂಡಕ್ಕೂ ಸಂತಸ ತಂದಿದೆ. ನಾನು ಇಳಯರಾಜ ಅವರ ಅಭಿಮಾನಿಯಾಗಿದ್ದು, ಈ ಹಾಡು ನನ್ನ ಜನಪ್ರಿಯ
ಗೀತೆಯಾಗಿದೆ.