Sunday, 15th December 2024

ನಗುವಿನ ಹೂಗಳ ಪ್ರೀತಿಯ ಕಥೆ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪ್ರೇಮ ಕಥೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳ ಸಾಲಿಗೆ ಈಗ ನಗುವಿನ ಹೂಗಳ ಮೇಲೆ ಚಿತ್ರ ಕೂಡ ಸೇರ್ಪಡೆ ಯಾಗಿದೆ. ಶೀರ್ಷಿಕೆ ಕೇಳಿದಾಕ್ಷಣ ಇದು ಪ್ರೇಮ ಕಥೆಯ ಸಿನಿಮಾ ಎಂಬುದು ಖಚಿತವಾಗುತ್ತದೆ.

ವರನಟ ಡಾ.ರಾಜ್‌ಕುಮಾರ್ ಹಾಡಿರುವ ನಗುವಿನ ಹೂಗಳ ಮೇಲೆ ಸಾಲು ಗಳಿಂದ ಸ್ಪೂರ್ತಿ ಪಡೆದು ಈ ಶೀರ್ಷಿಕೆಯನ್ನು ಇಡಲಾಗಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ವೆಂಕಟ್ ಭಾರದ್ವಜ್ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿ ದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗೊಳಿಸಿರುವ ಅಭಿಷೇಕ್ ರಾಮದಾಸ್ ನಾಯಕ ನಾಗಿ ನಟಿಸಿದ್ದು ಶರಣ್ಯಾ ಶೆಟ್ಟಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.

ಬಲರಾಜ್ ವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಭಟ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಸತ್ಯಸಾಯಿ ಆರ್ಟ್ಸ್ ಬ್ಯಾನರ್‌ನಲ್ಲಿ ರಾಧಾ ಮೋಹನ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಾಣ್ ಮೆಹ್ತಾ ಸಂಗೀತ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ, ಪಿ.ಚಂದ್ರ ಸಂಕಲನ, ಕಬ್ಬಡಿ ನರೇಂದ್ರಬಾಬು, ಚಿದಂಬರ ನರೇಂದ್ರ, ಕಿರಣ್ ರಾಜ್ ಸಾಹಿತ್ಯ ಈ ಸಿನಿಮಾಕ್ಕಿದೆ.