Saturday, 27th July 2024

ಗಿಫ್‌ಟ್‌ ಬಾಕ್‌ಸ್‌‌ನಲ್ಲಿ ಸಸ್ಪೆೆನ್‌ಸ್‌ ಕಥೆ

ಮಾನವ ಕಳ್ಳ ಸಾಗಾಣಿಕೆ ಮತ್ತು ಲಾಕ್‌ಡ್ ಇನ್ ಸಿಂಡ್ರೋೋಮ್ ಎನ್ನುವ ನರರೋಗ ಸಮಸ್ಯೆೆ ಕುರಿತಾದ ಕತೆಯು ‘ಗಿಫ್‌ಟ್‌ ಬಾಕ್‌ಸ್‌’ ಚಿತ್ರದಲ್ಲಿ ತೋರಿಸಲಾಗಿದೆ. ಸವಾಲು, ಹೋರಾಟ ಮತ್ತು ಬೆಳವಣಿಗೆಗಳು ಜೀವನದಲ್ಲಿ ಬರುವ ಕಷ್ಟಗಳು. ಇವು ಒಂದಕ್ಕೊೊಂದು ನಂಟು ಹೊಂದಿರುವ ಘಟನೆಗಳು, ಭಯಾನಕ ಅನುಭವಗಳು, ಸಂಬಂಧಗಳ ನಡುವೆ ಸಂಬಂಧವಿಲ್ಲದ ಸಂವಹನ, ಮಾನವ ಜೀವನದ ಅನಾವರಣವನ್ನು ಹೇಳ ಹೊರಟಿದೆ. ಸನ್ನಿಿವೇಶಗಳು ನೈಜವಾಗಿರಲೆಂದು ಮಾನವ ಕಳ್ಳ ಸಾಗಾಣಿಕೆ ಮಾಡಿದ್ದಕ್ಕೆೆ ಶಿಕ್ಷೆ ಅನುಭವಿಸಿ ಹೊರಬಂದವನಿಂದ ಮಾಹಿತಿ ಪಡೆದುಕೊಂಡು ಅದರಂತೆ ದೃಶ್ಯಗಳನ್ನು ರೂಪಿಸಲಾಗಿದೆ. ‘ಪಲ್ಲಟ’ ಚಿತ್ರಕ್ಕೆೆ 2016ರ ರಾಜ್ಯ ಪ್ರಶಸ್ತಿಿ ಪಡೆದ ರಘು.ಎಸ್.ಪಿ ರಚನೆ, ಚಿತ್ರಕತೆ ಬರೆದು ಸೈಕಾಲಾಜಿಕಲ್ ಥ್ರಿಿಲ್ಲರ್ ಸಿನಿಮಾಕ್ಕೆೆ ಆ್ಯಕ್ಷನ್ ಕಟ್ ಹೇಳಿದ್ದಾಾರೆ. ಸಂಪೂರ್ಣ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದ್ದು, ಎಲ್ಲವನ್ನು ಸಿಂಕ್ ಸೌಂಡ್ ಮೂಲಕ ಧ್ವನಿಯನ್ನು ದಾಖಲಿಸಿರುವುದು ವಿಶೇಷ.

ನಂಬಿದವರಿಗೆ ಸುಳ್ಳು ಹೇಳುವ, ನಂಬಿಕೆ ದ್ರೋಹ ಹಾಗೂ ಅಮಾಯಕ ಹೆಣ್ಣು ಮಕ್ಕಳು ಭೋಗದ ವಸ್ತುವಂತೆ ಕಾಣಿಸುತ್ತದೆ. ಪಾಪ ಪ್ರಜ್ಞೆೆಯ ಮನಸ್ಸು ನಿದ್ದೆೆಯನ್ನು ಕಸಿದುಕೊಳ್ಳುತ್ತದೆ. ಕನಸುಗಳು ಆತನನ್ನು ಭೇಟೆಯಾಡುವ ಪರಿ ವಿನಾಶದಂಚಿಗೆ ತಂದು ನಿಲ್ಲಿಸುತ್ತವೆ. ಇಂತಹ ಗುಣ ಇರುವ ಪಾತ್ರದಲ್ಲಿ ರಿತ್ವಿಿಕ್‌ಮಠದ್ ನಾಯಕನಾಗಿ ನಟಿಸಿದ್ದು, ಇದು ಇವರ ಮೊದಲ ಚಿತ್ರವೂ ಹೌದು. ನಾಯಕಿಯರಾಗಿ ಅಮಿತಾಕುಲಾಲ್ ಹಾಗೂ ದೀಪ್ತಿಿಮೋಹನ್ ಇಬ್ಬರು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ತಾರಾಗಣದಲ್ಲಿ ಮುರಳಿಗುಂಡಣ್ಣ, ಶಿವಾಜಿರಾವ್‌ಜಾಧವ್, ಪ್ರಸಾದ್‌ಹುಣಸೂರ್, ಪ್ರೊೊ.ಲಕ್ಷೀಚಂದ್ರಶೇಖರ್, ಇಂದಿರಾನಾಯರ್ ಮುಂತಾದವರು ನಟಿಸಿದ್ದಾಾರೆ. ರಘುದೀಕ್ಷಿತ್ ಸಹೋದರ ವಾಸು ದೀಕ್ಷೀತ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ಧಾಾರೆ. ಛಾಯಾಗ್ರಹಣ ರಾಘವೇಂದ್ರ.ಎಂ.ಬಿ, ಸಂಕಲನ ಗುರುಸ್ವಾಾಮಿ.ಟಿ, ಪ್ರಸಾಧನ ಉಮಾಮಹೇಶ್ವರ ಅವರದಾಗಿದೆ. ಇಬ್ಬರು ರಾಷ್ಟಪ್ರಶಸ್ತಿಿ ವಿಜೇತರಾದ ಮಹಾವೀರ್‌ಸಾಬಣ್ಣವರ್ ಧ್ವನಿಮುದ್ರಣ, ಬಿಂದುಮಾಲಿನಿ ಗಾಯನ ಚಿತ್ರಕ್ಕಿಿದೆ. ಒಂದಷ್ಟು ಸಿನಿಮಾ ಮೋಹಿಗಳು ಸೇರಿಕೊಂಡು ಹಳ್ಳಿಿ ಚಿತ್ರ ಸಂಸ್ಥೆೆ ಮೂಲಕ ನಿರ್ಮಾಣ ಮಾಡಿದ್ದಾಾರೆ. ಚಿತ್ರದ ಧ್ವನಿಸುರುಳಿಯನ್ನು ಡಾಲಿ ಧನಂಜಯ್ ಮತ್ತು ಇತರೆ ಗಣ್ಯರು ಬಿಡುಗಡೆ ಮಾಡಿ ಚಿತ್ರತಂಡಕ್ಕೆೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!