Thursday, 21st November 2024

ಸಹಜ ಅಭಿನಯದಲ್ಲೇ

ಮನಗೆದ್ದ ನೇತ್ರಾ
ತಾನು ಒಬ್ಬ ನಟ ಅಥವಾ ನಟಿಯಾಗಬೇಕು. ಆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡು ಮಿಂಚಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ಅಷ್ಟಕ್ಕೂ ಚಂದನವನಕ್ಕೆೆ ಎಂಟ್ರಿಿಕೊಡುವುದು ಅಷ್ಟು ಸುಲಭವೇನಲ್ಲ. ಅದಕ್ಕೆೆ ಪ್ರತಿಭೆಬೇಕು, ನಟನೆಯ ಅಭಿರುಚಿ ಇರಬೇಕು. ಎಲ್ಲಕ್ಕೂ ಮುಖ್ಯವಾಗಿ ಪ್ರಾಾಮಾಣಿಕ ಪ್ರಯತ್ನವಿರಬೇಕು. ಇದರ ಜತೆಗೆ ಅವಕಾಶಗಳು ಅರಸಿಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆೆಯೂಬೇಕು. ಹೀಗೆ ಅವಕಾಶಗಳು ಎಷ್ಟು ಜನರಿಗೆ ಸಿಗಬಹುದು. ಅದನ್ನೇ ಕೆಲವರು ಅದೃಷ್ಟ ಎನ್ನುತ್ತಾಾರೆ. ಹೀಗೆ ಇಲ್ಲೊೊಬ್ಬ ನಟಿಯೊಬ್ಬರು ನಟಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾಾರೆ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದಾಾರೆ. ಆಕೆ ಮತ್ತಾಾರು ಅಲ್ಲ, ಮೈಸೂರಿನ ಬೆಡಗಿ ನೇತ್ರಾಾ.

ನೇತ್ರಾಾ ಪ್ರತಿಭಾನ್ವಿಿತ ಯುವತಿ. ಆದರೆ ಎಂದೂ ತಾನು ನಟಿಯಾಗಬೇಕು. ಆಗತೇನೆಂದು ಅಂದುಕೊಂಡವರಲ್ಲ. ಆದರೂ ಬಯಸದೇ ಬಂದ ಭಾಗ್ಯ ಎಂಬಂತೆ ನಟಿಯಾಗಿ ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗಿದ್ದಾಾರೆ.

ಅದೊಂದು ದಿನ ಮೈಸೂರಿನಲ್ಲಿ ಲೇಡೀಸ್ ಕ್ಲಬ್ ರಿಯಾಲಿಟಿ ಶೋ ನಡೆಯುತ್ತಿಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದ ನೇತ್ರಾಾ ‘ಅಂಬಾರಿ’ ಧಾರಾವಾಹಿಯ ನಾಯಕ ನಟನೊಂದಿಗೆ ಸಖತ್ತಾಾಗೆ ಹೆಜ್ಜೆೆ ಹಾಕಿದರು. ಇದನ್ನು ಕಂಡ ಧಾರಾವಾಹಿಯ ನಿರ್ದೇಶಕರು ಸಂತಸಗೊಂಡು ನೇತ್ರಾಾಳಿಗೆ ತಮ್ಮ ಧಾರಾವಾಹಿಯಲ್ಲಿ ನಟಿಸುವಂತೆ ಹೇಳಿದರು. ಅಂತೂ ನೇತ್ರಾಾಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿಿತು. ‘ಅಂಬಾರಿ’ ಧಾರಾವಾಹಿಯಲ್ಲಿ ಸಿಕ್ಕಿಿದ್ದು ಚಿಕ್ಕ ಪಾತ್ರವಾದರೂ ಅಸಡ್ಡೆೆ ತೋರದೆ ಇಷ್ಪಪಟ್ಟು ನಟಿಸಿದರು. ಆ ನಂತರ ನೇತ್ರಾಾ ಲಕ್ ಬದಲಾಯಿತು. ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದಲ್ಲಿಯೂ ನಟಿಸುವ ಅವಕಾಶ ಇವರದ್ದಾಾಯಿತು. ಈ ಚಿತ್ರದಲ್ಲಿ ಚಿಕ್ಕಣ ಅವರೊಂದಿಗೆ ಅಭಿನಯಿಸಿ ಎಲ್ಲರ ಮನಗೆದ್ದರು. ಆ ಬಳಿಕ ‘ಪರ್ಚಂಡಿ’ ಸಿನಿಮಾದಲ್ಲಿಯೂ ಪ್ರೇಕ್ಷಕರನ್ನು ರಂಜಿಸಿದರು. ‘ಮಾನಸಸರೋವರ’ದಲ್ಲಿ ನೈಜ ಅಭಿನಯ ತೋರಿ ಗಮನಸೆಳೆದರು. ಈ ಚಿತ್ರದ ಬಳಿಕ ಅವಕಾಶಗಳು ನೇತ್ರಾಾಳನ್ನು ಅರಸಿ ಬಂದವು.

ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿಿದ್ದ ನೇತ್ರಾಾಗೆ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಒಲಿದುಬಂತು. ತಮಿಳಿನ ‘ಸಿಂಗಪುರ ರಜನಿ’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಬಣ್ಣಹಚ್ಚಿಿದರು. ಆ ಚಿತ್ರದ ಬಳಿಕ ಮತ್ತಷ್ಟು ಚಿತ್ರಗಳಲ್ಲೂ ನಟಿಸುವ ಅವಕಾಶ ನೇತ್ರಾಾಳಿಗೆ ಒಲಿಯಿತು. ಆದರೂ ಕನ್ನಡ ಬಗೆಗಿನ ಒಲವು ನೇತ್ರಾಾರನ್ನು ಕಾಡುತ್ತಿಿತ್ತು. ಹಾಗಾಗಿ ಮತ್ತೆೆ ಕನ್ನಡ ಚಿತ್ರರಂಗದತ್ತಲೇ ವಾಲಿದರು. ಆಗ ಸೆಟ್ಟೇರಿದ್ದ ‘ಗುಲಾಲ್.ಕಾಂ’ ಚಿತ್ರದಲ್ಲಿ ನಟಿಸಲು ಸಂತೋಷದಿಂದಲೇ ಒಪ್ಪಿಿದರು. ಸದ್ಯ ‘ಗುಲಾಲ್.ಕಾಂ’ ಚಿತ್ರೀಕರಣ ಮುಗಿಸಿರುವ ನೇತ್ರಾಾ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಲು ರೆಡಿಯಾಗಿದ್ದಾಾರೆ.

ತನಗೆ ಯಾವ ಪಾತ್ರ ನೀಡಿದರೂ ಅದರಲ್ಲಿ ನಟಿಸಲು ಸಿದ್ಧ ಎನ್ನುವ ನೇತ್ರಾಾ, ಕನ್ನಡದಲ್ಲಿಯೇ ಮುಂದುವರಿಯುವ ಮನಸು ಮಾಡಿದ್ದಾಾರೆ. ಕನ್ನಡದ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಂಡ ಬಳಿಕ ಪರಭಾಷೆಯ ಚಿತ್ರರಂಗದತ್ತ ಗಮನಹರಿಸುವುದಾಗಿ ಹೇಳುತ್ತಾಾರೆ.