Thursday, 12th December 2024

ಮಾರ್ಚ್‌‌ನಲ್ಲಿ ಜಾಲಿ ಲೈಫ್‌

ಸಂಗೀತ ನಿರ್ದೇಶಕರಾಗಿ, ನಟರಾಗಿ ಖ್ಯಾತರಾಗಿರುವ ಸಾಧುಕೋಕಿಲ ನಿರ್ದೇಶಕಾರಾಗಿಯೂ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಪ್ರಸ್ತುತ ಅವರ ನಿರ್ದೇಶನದ ಜಾಲಿಲೈಫ್ ಚಿತ್ರ ಮಾರ್ಚ್ ನಲ್ಲಿ ಸೆಟೇರಲಿದೆ.

ಈ ಹಿಂದೆ ತ್ರಿಕೋನ ಚಿತ್ರ ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರವನ್ನು ಪೊಲೀಸ್ ಪ್ರಕ್ಕಿ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.
ಕಥೆ, ಚಿತ್ರಕಥೆಯನ್ನು ರಾಜಶೇಖರ್ ಅವರೆ ಬರೆದಿದ್ದಾರೆ. ತಮ್ಮ ಸಂಸ್ಥೆ ಮೂಲಕ ಈ ವರ್ಷ ನಾಲ್ಕು ಚಿತ್ರಗಳನ್ನು ನಿರ್ಮಿಸುವುದಾಗಿ ರಾಜಶೇಖರ್ ತಿಳಿಸಿದ್ದಾರೆ.

ತಾರಾಗಣದ ಆಯ್ಕೆಗಾಗಿ ಸುಚೀಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ವಿಭಿನ್ನವಾಗಿ ಆಡಿಶನ್ ನಡೆಸಲಾಯಿತು. ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾ ಮೂಲಕ ಸುಮಾರು 500 ರಿಂದ 600ಜನರನ್ನು ಆಡಿಶನ್ ಗೆ ಆಗಮಿಸಿದ್ದು, 18 ಪ್ರತಿಭೆ ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಐದು ಹಾಡುಗಳಿದ್ದು, ಸಾಧುಕೋಕಿಲ ಸಂಗೀತ ನೀಡುತ್ತಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುಚೀಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.