Sunday, 15th December 2024

ಕಬ್ಜ ತಂಡ ಸೇರಿದ ಕಿಚ್ಚ

ಕಿಚ್ಚ ಸುದೀಪ್ ತಮ್ಮ ಬಹು ನಿರೀಕ್ಷೆಯ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಗೆ ಎದಿರು ನೋಡುತ್ತಿದ್ದಾರೆ. ಈ ನಡುವೆ ಕಬ್ಜ ಚಿತ್ರದಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಆರ್.ಚಂದ್ರ ನಿರ್ಮಿಸಿ, ನಿರ್ದೇಶಿಸುತ್ತಿರುವ ಕಬ್ಜ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮತ್ತೊಂದು ಮುಖ್ಯ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದು, ಭಾರ್ಗವ್ ಭಕ್ಷಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಸುದೀಪ್ ಕಬ್ಜ ಚಿತ್ರತಂಡ ಸೇರಿದ್ದಾರೆ. ಕಬ್ಜ ಅಂಡರ್ ವರ್ಲ್ಡ್ ಕಥೆಯ ಸಿನಿಮಾವಾಗಿದ್ದು, ರೆಟ್ರೋ ಲುಕ್‌ನಲ್ಲಿ ಮೂಡಿಬರುತ್ತಿದೆ. ಹೈಬಜೆಟ್ ಸಿನಿಮಾ ಇದಾಗಿದ್ದು, ಚಿತ್ರಕ್ಕಾಗಿ ಅದ್ಧೂರಿ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗುತ್ತಿದೆ.

ಕಬ್ಜ ಚಿತ್ರದಲ್ಲಿ ಸುದೀಪ್ ಭಾರ್ಗವ್ ಭಕ್ಷಿ ಎನ್ನುವ ಮಾಫಿಯ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೇ ಭಾರ್ಗವ್ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಇದರಲ್ಲಿ ಕಿಚ್ಚ ಖದರ್ ಲುಕ್‌ನಲ್ಲಿ ಕಂಗೊಳಿಸಿದ್ದರು. ಈ ಹಿಂದೆ ಮುಕುಂದು ಮುರಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಉಪೇಂದ್ರ ಹಾಗೂ ಸುದೀಪ್ ಮತ್ತೆ ಈ ಚಿತ್ರದಲ್ಲಿ ಒಂದಾ ಗಿದ್ದಾರೆ.

ನವಾಬ್ ಷಾ, ಪ್ರಕಾಶ್ ರಾಜ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಗಾಗಿ ಕಬ್ಜ ತಾರಾಗಣದಲ್ಲಿಯೇ ಕುತೂಹಲ ಕೆರಳಿಸಿದೆ.