ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿ, ಜನಮನ ಮನಸೆಳೆದಿದೆ. ಮುಗ್ಧತೆಯ ಪ್ರತಿ ರೂಪದಂತೆ ಭಾಸವಾಗುವ ಕಮಲಿ, ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿದ್ದಾರೆ. ಸಂಜೆಯಾಯಿತು ಎಂದರೆ ಟಿ.ವಿ ಮುಂದೆ ಹಾಜರಾಗುವ ಪ್ರೇಕ್ಷಕರು, ಕಮಲಿ ದರ್ಶನಕ್ಕೆ ಕಾತರರಾಗಿರುತ್ತಾರೆ. ಮುಗ್ಧ ಹಳ್ಳಿ
ಹುಡುಗಿಯಾಗಿ, ತನಗೆ ಬಂದ ಸಂಕಷ್ಟವನ್ನೆಲ್ಲ ಸಹಿಸಿಕೊಂಡು, ಇತರರಿಗೆ ಕೇಡು ಬಯಸದೆ ನಡೆಯುವ ಕಮಲಿಯ ಗುಣವನ್ನು ಮೆಚ್ಚಿದ್ದಾರೆ.
ಅಯ್ಯೋ ..ಕಮಲಿಗೆ ಯಾಕೆ ಹೀಗಾಯ್ತು. ಈಕೆಗೆ ಇಷ್ಟೊಂದು ಕಷ್ಟಕೊಡುತ್ತಿದ್ದರೂ, ಯಾಕೆ ಅವರ ವಿರುದ್ದ ತಿರುಗಿ ಬೀಳುವುದಿಲ್ಲ. ತನಗೆ ಅನ್ಯಾಯ ಮಾಡುತ್ತಿರುವವರು ಇವರೆ ಎಂದು ಯಾಕೆ ಯಾರೊಂದಿಗೂ
ಹೇಳಿಕೊಳ್ಳುವುದಿಲ್ಲ. ಹೀಗೆ ಪ್ರೇಕ್ಷಕರಲ್ಲಿ ನಾನಾ ಪ್ರಶ್ನೆಗಳು ಕಾಡುತ್ತಿವೆ. ಕಳೆದ ಎರಡು ವರ್ಷದಿಂದ ಮುಗ್ಧ ಕಮಲಿಯನ್ನು ಕಂಡು, ಮರುಗಿದ್ದಾರೆ. ಯಾವಾಗ ಒಳ್ಳೆಯ ಸಮಯ ಬರುತ್ತದೋ, ಕಮಲಿಗೆ ಆಗುತ್ತಿರುವ
ಅನ್ಯಾಯವನ್ನು ಪ್ರತಿಭಟಿಸಲು ಯಾರು ಬರುತ್ತಾರೋ ಎಂಬುದನ್ನು ನೋಡಲು ಕಾದು ಕುಳಿತಿದ್ದಾರೆ.
ಹೀಗಂದುಕೊಳ್ಳುತ್ತಿರುವಾಗಲೇ ಕಮಲಿಯ ಕಷ್ಟಕ್ಕೆ ಧಾವಿಸಲು ಒಬ್ಬಾಕೆ ರೆಡಿಯಾಗಿದ್ದಾಳೆ. ಆಕೆಯೇ ಅಂಬಿಕಾ. ಈ ಅಂಬಿಕಾ ಬಲು ಧೈರ್ಯವಂತೆ. ಒರಟು ಸ್ವಭಾವದ ಹಠಮಾರಿ ಹೆಣ್ಣು ಈಕೆ. ತನ್ನ ವಿರುದ್ದ ಸಂಚು ಮಸೆಯುವವರಿಗೆ ಅಲ್ಲಿಯೇ ಸರಿಯಾದ ಉತ್ತರ ಕೊಡುವಾಕೆ ಈ ಅಂಬಿಕಾ. ಹಾಗಾದರೆ, ಕಮಲಿಯಲ್ಲಿ ಮತ್ತೊಂದು ಪಾತ್ರ ಎಂಟ್ರಿಯಾಗುತ್ತಾ ಎಂದು ಯೋಚಿಸುತ್ತಿರಬಹುದು. ಖಂಡಿತ, ಅಂಬಿಕಾ ಅಖಾಡಕ್ಕೆ ಇಳಿಯಲು ರೆಡಿಯಾಗುತ್ತಾಳೆ. ಹಾಗಂತ ಈ ಅಂಬಿಕಾ ಪಾತ್ರಧಾರಿ ಬೇರಾರೆ ಯಾರೂ ಅಲ್ಲ. ಇಷ್ಟು ದಿನ ಅಳುಮುಂಜಿಯಾಗಿ ನಿಮ್ಮಲ್ಲಿ ಕರುಣೆ ಉಕ್ಕಿಸಿದ, ಕಮಲಿ ಪಾತ್ರಧಾರಿ ಅಮೂಲ್ಯ, ಈಗ ಅಂಬಿಕಾಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಕಮಲಿಗೆ ಹೊಸ Twist
ಅಂಬಿಕಾಳ ಪಾತ್ರ ಕಮಲಿಗೆ ಹೊಸ ಟ್ವಿಸ್‌ಟ್ ಸಿಗುವ ಪಾತ್ರ. ಒಂದೇ ರೀತಿಯ ಪಾತ್ರವನ್ನು ನೋಡಿ ನೋಡಿ ಬೇಸತ್ತಿದ್ದ ಪ್ರೇಕ್ಷಕರಿಗೆ ಒಂದಷ್ಟು ಹೊಸತನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಿರ್ದೇಶಕರು ಈ ಕಥೆಗೆ ಈ
ಪಾತ್ರವನ್ನು ಸೇರಿಸಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್ ಮುಂದುವರಿದರು, ಆಕ್ಷನ್ ಸನ್ನಿವೇಶಗಳು ಇಲ್ಲಿ ಸೇರ
ಲಿವೆ. ಆಧುನಿಕ ಹುಡಗಿಯರು ಹೇಗಿರುತ್ತಾರೆ. ತಮಗಾದ ಅನ್ಯಾಯವನ್ನು ಹೇಗೆ ಎದುರಿಸಬೇಕು ಎಂಬುದು
ಅಂಬಿಕಾಳ ಪಾತ್ರದ ಮೂಲಕ ವ್ಯಕ್ತವಾಗಲಿದೆ.
ಅಳುಮುಂಜಿ ಕಮಲಿ, ಅಂಬಿಕಾಳಾಗಿ ಹೊಸ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿರುವುದಕ್ಕೆ ಸಂತಸಗೊಂಡಿದ್ದಾರೆ.
ಭರ್ಜರಿಯಾಗಿತ್ತು ತಯಾರಿ ನಟಿ ಅಮೂಲ್ಯ ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ಮಾಡ್ರನ್ ಹುಡುಗಿಯಾಗಿ ಕಾಣಿಸಿಕೊಂಡು ಗಮನ ಸೆಳೆದವರು. ಆ ಬಳಿಕ ಕಮಲಿಯಾಗಿ ಸೆಂಟಿಮೆಂಟ್ ಪಾತ್ರಗಳಿಗೆ ಹೊಂದಿಕೊಂಡ ವರು.
ಈಗ ರಗಡ್ ಲುಕ್‌ನಲ್ಲಿ ರಂಜಿಸಲಿದ್ದಾರೆ. ಹೀಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳುತ್ತಾರೆ. ತಮಗೆ ನೀಡಿದ ಪಾತ್ರ, ಅದರ ಕಥೆ ತಿಳಿದು, ವರ್ಕ್‌ಶಾಪ್‌ನಲ್ಲೂ ಪಾಲ್ಗೊಳ್ಳುತ್ತಾರೆ. ಹಾಗಾಗಿಯೇ ನನಗೆ ನೀಡಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯ ಎನ್ನುತ್ತಾರೆ ಅಮೂಲ್ಯ.
ವಿಭಿನ್ನ ಪಾತ್ರದಲ್ಲಿ ಬಣ್ಣಹಚ್ಚುವಾಸೆ
ಅಮೂಲ್ಯಗೆ ಇಂತಹದ್ದೇ ಪಾತ್ರದಲ್ಲಿ ನಟಿಸಬೇಕು ಎಂಬ ಬೇಡಿಕೆ ಇಲ್ಲ. ಆದರೆ ವಿಭಿನ್ನ ಪಾತ್ರದಲ್ಲಿ ಅಭಿನ
ಯಿಸಬೇಕು ಎಂಬುದು ಅವರ ಮನದಾಸೆ. ಇದರಿಂದ ಹೊಸತನ್ನು ಕಲಿಯಬಹುದು ಎನ್ನುತ್ತಾರೆ ಕಮಲಿ.
ಬೆಳ್ಳಿತೆರೆಯಲ್ಲೂ ಅವಕಾಶಗಳು ಬರುತ್ತಿವೆ. ಸಿನಿಮಾಗಳಲ್ಲೂ ನಟಿಸುವ ಆಸೆ ನನಗಿದೆ. ಆದರೆ ನಾನು ಸದ್ಯ
ಕಮಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಈ ಧಾರಾವಾಹಿ ಮುಗಿದ ಬಳಿಕ ಸಿನಿಮಾದಲ್ಲಿ ನಟಿಸುತ್ತೇನೆ ಎನ್ನುತ್ತಾರೆ ಅಮೂಲ್ಯ.