Sunday, 15th December 2024

ಕಾಶ್ಮೀರದಲ್ಲಿ ನಿನದೇ ನೆನಪು

ವಾಸುಕಿ ವೈಭವ್ ದನಿಯಲ್ಲಿ ಮೂಡಿ ಬಂದಿರುವ ನಿನದೇ ನೆನಪು ಆಲ್ಬಂ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಗೌಸ್ ಫಿರ್ ರಚಿಸಿರುವ ಹೃದಯಕ್ಕೆ ಹೃದಯವೇ ಕಡು ವೈರಿ ಎಂದು ಆರಂಭವಾಗುವ ನಿನದೇ ನೆನಪು ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.ಅದಾಗಲೇ ಸಂಗೀತ ಪ್ರಿಯರ ಮನಗೆದ್ದಿದೆ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್ ನಲ್ಲಿ ಕಾಣಿಕೊಂಡಿದ್ದಾರೆ. ಸರವಣ್ ಸಬ್ ವೇ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ.

ಟಿಕ್ ಟಾಕ್ ಮೂಲಕ ಮನೆಮಾತಾಗಿರುವ ಪ್ರತಿಮಾ ಈಗಾಗಲೇ ಕೆಲವು ಆಲ್ಬಂ ಗಳಲ್ಲಿ ನಟಿಸಿದ್ದಾರೆ.