ಸ್ಯಾಂಡಲ್‌ವುಡ್ ಅನ್ನು ಇಡೀ ಭಾರತೀಯ ಚಿತ್ರರಂಗವೇ ಮತ್ತೊಮ್ಮೆ ತಿರುಗಿ ನೋಡು ತ್ತಿದೆ. ಅದಕ್ಕೆ ಕಾರಣ ಚಂದನವನದಲ್ಲಿ ಮೂಡಿಬರುತ್ತಿರುವ ಹೈವೋಲ್ಟೇಜ್ ಸಿನಿಮಾ ಗಳು. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ನಿಂತಿವೆ.
ದೇಶ, ವಿದೇಶಗಳಲ್ಲಿಯೂ ಉತ್ತಮ ಗಳಿಕೆ ಕಾಣುತ್ತಿವೆ. ಇನ್ನು ಕೆಜಿಎಫ್ ಚಾಪ್ಟರ್ ೨ ಸ್ಯಾಂಡಲ್‌ವುಡ್‌ನ ದಿಕ್ಕನ್ನೇ ಬದಲಾ ಯಿಸಿದೆ. ಮತ್ತೊಮ್ಮೆ ಹೊಸತನ ತಂದಿದೆ. ಬದಲಾದ ಇಂದಿನ ಟ್ರೆಂಡ್‌ಗೆ, ಸಿನಿಪ್ರಿಯರ ಅಭಿರುಚಿಗೆ ತಕ್ಕಂತೆ ಸಿನಿಮಾಗಳು
ಹೇಗಿರಬೇಕು ಎಂಬುದನ್ನು ಕೆಜಿಎಫ್ ೨ ತೋರಿಸಿಕೊಟ್ಟಿದೆ. ಹಾಗಾಗಿ ಇದೇ ದಾಟಿಯಲ್ಲಿ, ಇದೇ ಹಾದಿಯಲ್ಲಿ ಉಳಿದ ಚಿತ್ರಗಳು ಸಾಗುವುದು ಬಹುತೇಕ ಖಚಿತವಾಗಿದೆ.
ಕೆಲವು ವರ್ಷಗಳ ಹಿಂದೆ ಬಹುತೇಕ ಕನ್ನಡ ಸಿನಿಮಾಗಳು ಆಧುನಿಕತೆಯಲ್ಲಿ ಮಿಂದೆ ದ್ದವು. ಕೆಜಿಎಫ್ ರೆಟ್ರೋ ಲುಕ್‌ನಲ್ಲಿ ಮೂಡಿ ಬಂದು ಒಂದು ಕಥೆಯನ್ನು ಹೀಗೂ ಪರಿಣಾಮಕಾರಿಯಾಗಿ ಹೇಳಬಹುದು ಎಂದು ತೋರಿಸಿಕೊಟ್ಟಿತು. ಎಲ್ಲಿಯೂ ಹೆಚ್ಚು ವೈಭವೀಕರಿಸಿದೆ. ಅನಗತ್ಯವಾಗಿ ಕಥೆಯನ್ನು ಎಳೆಯದೆ ನೈಜತೆಗೆ ಹತ್ತಿರ ಎನ್ನುವಂತೆ ಅದ್ಭುತವಾಗಿ ಕಥೆಯನ್ನು ತೆರೆಯಲ್ಲಿ ಕಟ್ಟಿಕೊಟ್ಟಿತು.
ಆನಂತರ ತೆರೆಗೆ ಬಂದು ಹೆಚ್ಚು ಸಿನಿಮಾಗಳು ರೆಟ್ರೋ ಲುಕ್‌ನಲ್ಲಿಯೇ ಮೂಡಿಬಂದವು. ಪ್ರೇಕ್ಷಕರ ಮನಸೂರೆಗೊಂಡವು. ಉತ್ತಮ ಗಳಿಕೆಯನ್ನು ಕಂಡವು. ಪ್ರಚಾರಕ್ಕೆ ಸಂದ ಫಲ ಕೆಜಿಎಫ್ ಚಾಪ್ಟರ್ ೨ ಅತಿ ದೊಡ್ಡ ಗೆಲುವು ಕಂಡಿದೆ. ಹೊಸ ಹೊಸ
ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಚಿತ್ರದ ಅದ್ಧೂರಿ ಪ್ರಮೋಷನ್. ಹೌದು. ಕೆಜಿಎಫ್ ಚಾಪ್ಟರ್ ೨ ನಲ್ಲಿ ಬಾಲಿವುಡ್ ಯಶ್, ಶ್ರೀನಿಧಿ ಶೆಟ್ಟಿ, ನಟ ಸಂಜಯ್ ದತ್, ನಟಿ ರವೀನಾ ಟಂಡರ್ ರಾವ್ ರಮೇಶ್, ಪ್ರಕಾಶ್ ರಾಜ್ ಹೀಗೆ ಸ್ಟಾರ್ ನಟರ ದಂಡೇ ಇತ್ತು. ಇದು ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಇನ್ನೂ ಇಷ್ಟು ದೊಡ್ಡ ತಾರಾಬಳಗವನ್ನು ಇಟ್ಟುಕೊಂಡು ಚಿತ್ರತಂಡ ಭಾರತದ ದೊಡ್ಡ ದೊಡ್ಡ ನಗರಗಳಿಗೆ ತೆರಳಿ ಪ್ರಚಾರ ಮಾಡಿತು. ಇದು ಪ್ರೇಕ್ಷಕರನ್ನು ಸೆಳೆಯಿತು. ಹೊಸ ಅಲೆ ಯನ್ನೇ ಎಬ್ಬಿಸಿ, ಚಿತ್ರವನ್ನು ಗೆಲುವಿನ ಅಲೆಯಲ್ಲಿ ತೇಲಿಸಿತು.
ಮನ ಸೆಳೆದ ಕಥೆ
ಕೆಜಿಎಫ್ ಚಾಪ್ಟರ್ ೨ ಪ್ರೇಕ್ಷಕರ ಮನಮುಟ್ಟಿದೆ, ಗೆಲುವಿನ ದಡ ಸೇರಿದೆ ಎನ್ನಲು ಪ್ರಮುಖ ಕಾರಣ ಚಿತ್ರದಲ್ಲಿದ್ದ ಗಟ್ಟಿ ಕಥೆ. ಇಲ್ಲಿ ನಾಯಕನ ಜತೆಗೆ ಖಳನಾಯಯಕನಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿತ್ತು. ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ಸಂಜಯ್ ದತ್ ಅವರನ್ನು ಖಳನಾಯಕನ ಪಾತ್ರಕ್ಕೆ ಕರೆತಂದಿದ್ದು ಇದಕ್ಕೆ ಪೂರಕವಾಗಿತ್ತು. ಇಷ್ಟು ಮಾತ್ರವಲ್ಲ, ಚಾಪ್ಟರ್ ೨ ನಲ್ಲಿಯೂ ಸೆಂಟಿಮೆಂಟ್ ಸ್ಟೋರಿ ಮನಸೂರೆ ಗೊಂಡಿತು. ಇದು ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಮುಂದಿನ ಸಿನಿಮಾಗಳಿಗೆ ದಿಕ್ಸೂಚಿ ಮುಂದೆ ಬಿಡುಗಡೆಯಾಗುವ ಪ್ಯಾನ್ ಇಂಡಿಯಾ ಸಿನಿಮಾಗಳಿಗೂ ಕೆಜಿಎಫ್ ದಿಕ್ಸೂಚಿ ಯಾಗಿದೆ. ಅದ್ಧೂರಿ ಚಿತ್ರವನ್ನು ಹೇಗೆ ಗೆಲ್ಲಿಸಿಕೊಳ್ಳಬೇಕು ಅದನ್ನು ವಿಶ್ವ ಮಟ್ಟಕ್ಕೆ ಹೇಗೆ ಕೊಂಡೊಯ್ಯಬೇಕು ಎಂಬುದನ್ನು
ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ. ಹಾಗಾಗಿ ಮುಂದೆ ತೆರೆಗೆ ಬರಲಿರುವ ಸಿನಿಮಾಗಳಿಗೆ ಇದು ಸೂಚಿವಾಗಿದೆ.
ಸಪ್ತ ಸಾಗರ ದಾಟಲಿದೆ ವಿಕ್ರಾಂತ್ ರೋಣ
ಕೆಜಿಎಫ್ ಗೆಲುವಿನ ಖುಷಿಯಲ್ಲಿರುವ ಸಿನಿಪ್ರಿಯರು ವಿಕ್ರಾಂತ್ ರೋಣನನ್ನು ಎದಿರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಚಿತ್ರತಂಡ ಜುಲೈ ೨೮ ರಂದು ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧತೆ ನಡೆಸಿದೆ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಮಾತ್ರವಲ್ಲ ಇಂಗ್ಲೀಷ್ ಸೇರಿದಂತೆ ಒಟ್ಟು ಹದಿನಾರು ಭಾಷೆಗಳಲ್ಲಿ ಮೂಡಿಬರಲಿದೆ. ಹಾಗಾಗಿ ಇದು ಪ್ಯಾನ್ ವರ್ಲ್ಡ್ ಸಿನಿಮಾವಾಗಿದ್ದು, ಸಪ್ತ ಸಾಗರ ದಾಟಿ ಗೆಲುವಿನ ಪತಾಕೆ ಹಾರಿಸ ಲಿದೆ. ಈಗಾಗಲೇ ಬಿಡುಗಡೆಯಾಗಿರುವ ಗ್ಲಿಂಪ್ಸ್ ಹಾಗೂ ಟೀಸರ್ ಚಿತ್ರದ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ.