Sunday, 15th December 2024

ಲಹರಿ ತೆಕ್ಕೆಗೆ ಕೆಜಿಎಫ್‌ 2 ಆಡಿಯೋ ಹಕ್ಕು

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಫಿಲಂಸ್‌ನಲ್ಲಿ ನಿರ್ಮಾಣವಾಗಿರುವ ಕೆಜಿಎಫ್ ೨ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹೀಗಿರುವಾಗಲೇ ಚಿತ್ರದ ಆಡಿಯೋ ಹಕ್ಕು ಲಹರಿ ಸಂಸ್ಥೆಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕೆಜಿಎಫ್ 2 ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಚಿತ್ರಕ್ಕೆ  ರವಿಬಸ್ರೂರು ಸಂಗೀತ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ ೧ರ ಆಡಿಯೋ ಹಕ್ಕು ಕೂಡ ಲಹರಿ ಸಂಸ್ಥೆ ಖರೀದಿಸಿತ್ತು. ಈಗ ಚಾಪ್ಟರ್ 2೨ ಆಡಿಯೋ ಹಕ್ಕು ಕೂಡ ಲಹರಿ ಸಂಸ್ಥೆಯ ಪಾಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಲಹರಿ ಸಂಸ್ಥೆಯ ಮಾಲೀಕ ಮನೋಹರ್ ನಾಯ್ಡು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೆಜಿಎ- ಚಾಪ್ಟರ್ 2 ಚಿತ್ರದಲ್ಲಿ ಯಶ್ ಜತೆಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಂಗೊಳಿಸಿ ದ್ದಾರೆ. ನಟಿ ರವೀನಾ ಟಂಡನ್, ರಮಿಕಾ ಸೇನ್ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರೈ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಈ ಹಿಂದೆಯೇ ಬಿಡುಗಡೆಯಾದ ಚಿತ್ರದ ಟೀಸರ್ ಹೊಸ ದಾಖಲೆಯನ್ನೇ ಬರೆದಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಕೆಜಿಎ- ಚಾಪ್ಟರ್ 2 ಮೂಡಿಬಂದಿದೆ.